saptsagar_admin

ಸಚಿವ ಶಿವಾನಂದ ಪಾಟೀಲರಿಗೆ ಮಾತೃ ವಿಯೋಗ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 22:ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ಬೆಳಿಗ್ಗೆ ನಿಧರಾಗಿದ್ದಾರೆ.ಮೃತರಿಗೆ ಮಕ್ಕಳಾದ ಮಹಾದೇವಿ ಪಾಟೀಲ, ಶಿವಶರಣಗೌಡ ಪಾಟೀಲ, ಶಿವಾನಂದ ಪಾಟೀಲ ಹಾಗೂ ವಿಜುಗೌಡ ಪಾಟೀಲ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು, ಬಳಗವಿದೆ.ಮೃತರ ಅಂತ್ಯ ಕ್ರಿಯೆ ಭಾನುವಾರ ಸಂಜೆ 4-30 ಗಂಟೆಗೆ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ತೋಟದಲ್ಲಿ ನೆರವೇರಲಿದೆ.

Read More

ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಉದ್ಧಟತನ: ಕಾರಜೋಳ ಆಕ್ರೋಶ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21:ಅತ್ಯಂತ ಮಹತ್ವದ ಎಐ ಶೃಂಗಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಅಸಂಬದ್ಧ ರೀತಿಯಲ್ಲಿ ಪ್ರತಿಭಟನೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ದೇಶದ್ರೋಹದ ಕೃತ್ಯವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಭಾರತೀಯ ಭವ್ಯ ಜ್ಞಾನ ಪರಂಪರೆ ಹಾಗೂ ಘನತೆಗೆ ಕುಂದು ತರುವ ಕೆಲಸ. ಇದು ಕೇವಲ ರಾಜಕೀಯ ಪ್ರತಿಭಟನೆಯಲ್ಲ. ಅದು ವ್ಯವಸ್ಥಿತವಾಗಿ ನಡೆದ ರಾಷ್ಟೀಯ ಅವಮಾನ ಎಂದು ಕಾರಜೋಳ…

Read More

ಜನಪದರೇ ನಿಜವಾದ ಶರಣತತ್ವ ಪರಿಪಾಲಕರು :- ಪ್ರೊ. ಬಿ.ಎನ್. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21:12ನೇ ಶತಮಾನದ ನಡೆದ ಸಮಾಜೋಧಾರ್ಮಿಕ ಕ್ರಾಂತಿಯ ನಂತರ ಶರಣರ ಪ್ರಭಾವ ಜನಪದರ ಮೇಲೆ ಅಚ್ಚೊತ್ತಿದಂತಾಗಿದೆ. ಅವರೇ ಶರಣತತ್ವ ಪರಿಪಾಲಕರಾಗಿದ್ದಾರೆ. ಜನಪದರು ತಮ್ಮ ಆಡುಭಾಷೆಯಲ್ಲಿ ಶರಣರ ಬದುಕು, ಧರ್ಮಬೋಧೆ, ನೈತಿಕ ಮೌಲ್ಯಗಳ ಕುರಿತು ಸಾಹಿತ್ಯ ರಚಿಸಿ ಹಾಡಿದ್ದಾರೆ. ಹೀಗೆ ಶಿವಶರಣರು ಜನಪದರ ನುಡಿ ಸಾಹಿತ್ಯದಲ್ಲಿ ಬೆರೆತು ಹೋಗಿದ್ದಾರೆಂದು ಪ್ರೊ.ಬಿ.ಎನ್.ಪಾಟೀಲ (ಇಬ್ರಾಹಿಂಪೂರ) ಹೇಳಿದರು.ಬಸವೇಶ್ವರ ಸಂಸ್ಥೆಯ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ “ಜನಪದ ಸಾಹಿತ್ಯದಲ್ಲಿ ಶಿವಶರಣರು” ವಿಷಯ ಕುರಿತು ಮಾತನಾಡಿದರು.ತಾಲ್ಲೂಕ ಶರಣಸಾಹಿತ್ಯ ಪರಿಷತ್ತಿನಡಿಯಲ್ಲಿ…

Read More

ಮಾತೃಭಾಷೆಯು ಸಂಸ್ಕೃತಿ-ಭಾವನೆಗಳ ಪ್ರತೀಕ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21: ಮಾತೃಭಾಷೆಯು ಸಂಸ್ಕೃತಿ-ಭಾವನೆಗಳ ಪ್ರತೀಕ. ಅದು ಉತ್ತಮ ಶೈಕ್ಷಣಿಕ ಸಾಧನೆಗೆ ಮತ್ತು ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ ಮಾತೃಭಾಷೆಯ ಕಾಳಜಿ ಸದಾ ಇರಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ಮಾತೃಭಾಷಾ ದಿನ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾತೃಭಾಷೆ ಮಗು ಕಲಿಯುವ ಮೊದಲ ಭಾಷೆ. ಅದು ಪ್ರತಿಯೊಂದು ಸಂಸ್ಕೃತಿಯ ಆಸ್ತಿ ಮತ್ತು ನಮ್ಮೆಲ್ಲರ ಆತ್ಮವಿಶ್ವಾಸದ ಪ್ರತೀಕ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ…

Read More

ಬಡವರ ಹಾಗೂ ಎಲ್ಲರ ಕಲ್ಯಾಣಕ್ಕೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ವರದಾನ – ಸಿ.ಎಸ್. ನಾಡಗೌಡ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.21: ಬಡವರು ಮತ್ತು ಹಿಂದುಳಿದ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿದ್ದು, ಎಲ್ಲ ವರ್ಗದವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿರ್ಜೆಂಟ್ ನಿಯಮಿತದ ಅಧ್ಯಕ್ಷರೂ ಆದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು…

Read More

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21 :ಎಐ ಶೃಂಗಸಭೆಗೆ ಅಸಂಬದ್ಧವಾಗಿ ಅಡ್ಡಿಪಡಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ ಮಾಡಿದರು.ನೂರಾರು ಸಂಖ್ಯೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಕೋರ್ಟ್ ಸರ್ಕಲ್ ಬಳಿಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಆಗ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ನುಗ್ಗಿ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಕೆಲಕಾಲ ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.ಪ್ರತಿಭಟನೆ…

Read More

ಹಿರಿಯರು ನೀಡಿದ ಸಂಸ್ಕಾರದ ಬಲದಿಂದ ಎತ್ತರಕ್ಕೆ ಬೆಳೆದಿದ್ದೇನೆ: ಸಂಗಮೇಶ ಬಬಲೇಶ್ವರ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20:ಅಂದು ಗುರು ಹಿರಿಯರು ಹಾಗೂ ಪೂಜ್ಯರು ನೀಡಿದ ಸಂಸ್ಕಾರದ ಬಲದಿಂದ ಇಂದು ನಾನು 2 ಕೋಟಿ ಮಕ್ಕಳ ಹಕ್ಕುಗಳನ್ನು ದೊರಕಿಸಿ ಕೊಡುವುದಕ್ಕಾಗಿ ಶ್ರಮಿಸುವ ಅವಕಾಶ ಸಿಕ್ಕಿದೆ. ಒಂದು ಕಾಲದಲ್ಲಿ ಶಿಕ್ಷಣ ಕಾಶಿ ಎಂದಾಗ ಎಲ್ಲರೂ ಕಡಲ ತಡಿ ಎಡೆಗೆ ದೃಷ್ಠಿ ಹಾಯಿಸುತ್ತಿದ್ದರು. ಆದರೆ ಇಂದು ಬಸವರಾಜ್ ಕೌಲಗಿ ಅವರು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಎಲ್ಲರೂ ವಿಜಯಪುರದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಬಾಲ ವಿಕಾಸ…

Read More

ಖಾತುನಬಿಗೆ ಪಿ.ಎಚ್.ಡಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಖಾತುನಬಿ ಗಡೇದ ಅವರು ಸಲ್ಲಿಸಿದ್ದ “ಎ ಸ್ಟಡಿ ಆನ್ ಇನ್‌ಪ್ಲೂಎನ್ಸ್ ಆಫ್ ಸೆಕೆಂಡರಿ ಸ್ಕೂಲ್ ಹೆಡ್ ಮಾಸ್ರ‍್ಸ್ ಎಡ್ಮಿನಿಸ್ಟ್ರೇಶನ್, ಡಿಸಿಜನ್ ಮೆಕಿಂಗ್ ಸ್ಟಾಯಿಲ್ ಆಂಡ್ ಟೀರ‍್ಸ್ ಬರ್ನೌಟ್ ಆನ್ ಅಕಾಡೆಮಿಕ್ ಅಚಿಮೆಂಟ್ ಅಮಾಂಗ್ ಸೆಕೆಂಡರಿ ಸ್ಕೂಲ್ ಸ್ಟುಡೆಂಟ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಖಾತುನಬಿ ಗಡೇದ ಅವರು ಶಿಕ್ಷಣ ವಿಭಾಗದ ಡಾ. ಎ.ಬಿ. ಸುರಪುರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ…

Read More

ಫೆ.21ರಂದು 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್:ಡಿಸಿ ಆನಂದ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.20:ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಫೆ.21ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 15 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ತಿಳಿಸಿದ್ದಾರೆ.ವಿಜಯಪುರ ಉಪ ವಿಭಾಗಾಧಿಕಾರಿಗಳು ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ರಾಚೋಟೇಶ್ವರ ದೇವಸ್ಥಾನದಲ್ಲಿ,ಇಂಡಿ ಉಪವಿಭಾಗಾಧಿಕಾರಿಗಳು ಚಡಚಣ ತಾಲೂಕಿನ ಜಿಗಜೀವಣಗಿ ಗ್ರಾಮದ ಶ್ರೀ ಕವಡೇಶ್ವರ ಮಠದ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-2 ತಹಶೀಲ್ದಾರ ಅವರು ಹೊನ್ನಳ್ಳಿ ಗ್ರಾಮದ ಶ್ರೀ…

Read More

ಸಿನೀಯರ್ ರಿಸರ್ಚ್ ಫೆಲೋ ಹುದ್ದೆಯ ನೇಮಕಾತಿಗೆ ಸಂದರ್ಶನ

ಸಪ್ತಸಾಗರ ವಾರ್ತೆ, ವಿಜಯಪುರ ಫೆ.20:ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಿನೀಯರ್ ರಿಸರ್ಚ್ ಫೆಲೋ ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಕಾತಿಗೆ ಫೆ. 26ರಂದು ಬೆಳಿಗ್ಗೆ 10:30ಗಂಟೆಗೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More