saptsagar_admin

ಪಾಲಿಕೆ ನೂತನ ಮೇಯರ್ ಉಪಮೇಯರ್ ಬಿಜೆಪಿ ಕಚೇರಿ ಭೇಟಿ

ಸಪ್ತಸಾಗರ ವಾರ್ತೆ ವಿಜಯಪುರ, ಆ. 11: ಮಹಾನಗರ. ಪಾಲಿಕೆಯಲ್ಲಿ ಕಮಲ‌ ಅರಳಿದ್ದು, ನೂತನ ಮೇಯರ್ ಆಗಿ ಆಯ್ಕೆಯಾದ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಸುಮಿತ್ರಾ ಜಾಧವ ಅವರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪಾಲಿಕೆಯ ಬಿಜೆಪಿ ಸದಸ್ಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ನೂತನ ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಬಿಜೆಪಿ ದೇಶಾಭಿಮಾನ ಉಸಿರಾಗಿಸಿಕೊಂಡ ಪಕ್ಷ, ಈ ಪಕ್ಷದ ಸದಸ್ಯನಾಗಿರುವುದೇ…

Read More

ಬಿಎಲ್ ಡಿಇ ಲೈಫ್ ಕೇರ್ ಪ್ರೊಡಕ್ಟ್ಸಗಳ ಆರೋಗ್ಯ ಫಾರ್ಮಸಿ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 11: ಬಿ.ಎಲ್.ಡಿ ಲೈಫ್ ಕೇರ್ ಪ್ರೊಡಕ್ಟ್ಸ್ ಗಳ ಘಟಕವಾದ ಆರೋಗ್ಯ ಫಾರ್ಮಸಿ ಉದ್ಘಾಟನೆ ಕಾರ್ಯಕ್ರಮ ಇಂದು ಸೋಮವಾರ ನಡೆಯಿತು.ನಗರದ 770 ಲಿಂಗದ ಗುಡಿ ಹತ್ತಿರವಿರುವ ಬಿ.ಎಲ್.ಡಿ ಸೌಹಾರ್ದ ಸಹಕಾರಿ ಶಾಖೆಯ ನೆಲ ಅಂತಸ್ತಿನಲ್ಲಿ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಪೂಜೆ ನೆರವೇರಿಸಿದರು. ಅಲ್ಲದೇ, ಬಿ.ಎಲ್.ಡಿ ಲೈಫಕೇರ್ ತಯಾರಿಸಿರುವ ಹೈಜೀನ್ ಮತ್ತು ಹೆಲ್ತಕೇರ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಶ್ರೀಗಳು, ಬಿ.ಎಲ್.ಡಿ.ಇ ಸಂಸ್ಥೆ ಜನಪರ…

Read More

ಮಹಾಪೌರರಾಗಿ ಎಂ.ಎಸ್. ಕರಡಿ, ಉಪ ಮಹಾಪೌರರಾಗಿ ಸುಮಿತ್ರಾ ಜಾಧವ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 11: ವಿಜಯಪುರ ಮಹಾನಗರ ಪಾಲಿಕೆ ಮಹಾಪೌರರಾಗಿ ಎಂ.ಎಸ್.ಕರಡಿ ಹಾಗೂ ಉಪ ಮಹಾಪೌರರಾಗಿ ಸುಮಿತ್ರಾಜಾಧವ ಆಯ್ಕೆಯಾಗಿದ್ದಾರೆ.ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನವರ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮಹಾಪೌರ ಹಾಗೂ ಉಪ ಮಹಾಪೌರರ ಆಯ್ಕೆಯ ಚುನಾವಣೆ ಫಲಿತಾಂಶವನ್ನು ಸೋಮವಾರ ಅಧಿಕೃತವಾಗಿ ಘೋಷಿಸಿದರು.ಜನೆವರಿ, ಫೆಬ್ರವರಿ ತಿಂಗಳಲ್ಲಿ ನಡೆದ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ ಚುನಾವಣೆ ಫಲಿತಾಂಶವನ್ನು ಘೋಷಣೆ ಮಾಡಲು ಈ ಮುಂಚೆ ಆ.7ರಂದು ಸಭೆ ನಿಗದಿಪಡಿಸಲಾಗಿತ್ತು. ನಂತರ ಈ ದಿನಾಂಕವನ್ನು ಆ. 11ಕ್ಕೆ…

Read More

ವಿವಿಧ ಕಂಪನಿಗಳ ಸಿಇಒ ಜೊತೆಗೆ ಸಿಎಂ ಸಿದ್ದರಾಮಯ್ಯ ಉಪಹಾರ ಕೂಟದಲ್ಲಿ ಭಾಗಿ

ಸಪ್ತಸಾಗರ ವಾರ್ತೆ ಬೆಂಗಳೂರು, ಆ. 11: ನವೆಂಬರ್ 18-20ರ ವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿತ್-2025ರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜೊತೆ ಉಪಹಾರ ಕೂಟ ಸಭೆಯಲ್ಲಿ ಪಾಲ್ಗೊಂಡರು.ಡಿಸಿಎಂ ಡಿ.ಕೆ.ಶಿವಕುಮಾರ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.“ಭವಿಷ್ಯೋದಯ” ಧ್ಯೇಯ ವಾಕ್ಯದೊಂದಿಗೆ 2025ರ ಬೆಂಗಳೂರು ಟೆಕ್ ಸಮ್ಮಿತ್ ಸಂಯೋಜಿಸಲಾಗುತ್ತಿದೆ.

Read More

ಸಹಕಾರ ವಲಯವು ಆರ್ಥಿಕ ವ್ಯವಸ್ಥೆಯ ಅಮೂಲ್ಯ ಕೊಂಡಿ: ಎಸ್.ಆರ್. ಪಾಟೀಲ

ಸಪ್ತಸಾಗರ ವಾರ್ತೆ, ಬಾಗಲಕೋಟೆ, ಆ. 10:ಸಹಕಾರ ವಲಯವು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿಯೇ ಒಂದು ಅಮೂಲ್ಯ ಕೊಂಡಿಯಾಗಿದೆ. ಜನತೆಗೆ ಸಾಲ, ಉಳಿತಾಯ, ವಿಮೆ, ಕೌಟುಂಬಿಕ ಬೆಂಬಲ ಇವೆಲ್ಲವನ್ನೂ ಸಮರ್ಥವಾಗಿ ನೀಡುತ್ತಿರುವುದು ಸಹಕಾರ ಸಂಘಗಳ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ, ಸೌಹಾರ್ದ ಸಹಕಾರ ಸಂಘಗಳು ನಂಬಿಕೆ ಮತ್ತು ಯಶಸ್ಸಿನ ನಿದರ್ಶನವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.ನವನಗರದ ಸೆಕ್ಟರ್ ನಂ.25ರಲ್ಲಿ ನೂತನ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಬಾಗಲಕೋಟೆ ಇದರ ಉದ್ಘಾಟನಾ ಸಮಾರಂಭ…

Read More

ಸಾವಯವ ತ್ಯಾಜ್ಯ ಕೊಳೆಯುವ ಉಪಕರಣ: ಭಾರತ ಸರ್ಕಾರದ ಪೇಟೆಂಟ್ ಮಂಜೂರು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 10: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ “ಸಾವಯವ ತ್ಯಾಜ್ಯವನ್ನು ಕೊಳೆಯುವ ಉಪಕರಣ” ಎಂಬ ಶೀರ್ಷಿಕೆಯ ವಿನ್ಯಾಸಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯು ಪೇಟೆಂಟ್ ನೀಡಿದೆ.2025ರ ಜು. 30ರಂದು ಸಂಖ್ಯೆ 454549-001 ಹೊಂದಿರುವ ವಿನ್ಯಾಸದ ನೋಂದಣಿ ಪ್ರಮಾಣಪತ್ರದ ಅಡಿಯಲ್ಲಿ ಪೇಟೆಂಟ್ ನೋಂದಾಯಿಸಲಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಾದ ಉತ್ಪನ್ನವನ್ನು ವಿನ್ಯಾಸಗೊಳಿಸುವಲ್ಲಿ ಪ್ರೊ. ಸಂದೀಪ ಶಂಕರ…

Read More

ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಹರ ಘರ ತಿರಂಗಾ ಯಾತ್ರೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಆ. 10:ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಹರ ಘರ ತಿರಂಗಾ ಯಾತ್ರೆ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಬಿಜೆಪಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.ರಾಷ್ಟ್ರಭಕ್ತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿ ಬೈಕ್ ರ‍್ಯಾಲಿ ನಡೆಯಿತು. ಬೈಕ್ ಗೆ ತ್ರಿವರ್ಣ ಧ್ವಜ ಇರಿಸಿ ರ‍್ಯಾಲಿಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ಬೋಲೊ ಭಾರತ ಮಾ ಕೀ ಜೈ, ವಂದೇ ಮಾತರಂ ಘೋಷಣೆ ಹಾಕುತ್ತಾ ಬೈಕ್ ರ‍್ಯಾಲಿ ಸಾಗಿತು.ವಿಜಯಪುರ ನಗರದ ಸೆಟಲೈಟ್ ಬಸ್‌ ಸ್ಟ್ಯಾಂಡ್ (ಗೋದಾವರಿ ಹೊಟೆಲ್) ನಿಂದ ಶಿವಾಜಿ ಸರ್ಕಲ್,…

Read More

ನಂಜನಗೂಡು ರಾಯರ ಮಠದಲ್ಲಿಭಕ್ತಿ ಭಾವದಿಂದ ಪೂರ್ವಾರಾಧನೆ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ,ಆ. 10:ಕಲಿಯುಗದ ಕಾಮಧೇನು-ಕಲ್ಪವೃಕ್ಷ ಎಂದೇ ಖ್ಯಾತನಾಮರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರವಾಗಿ ಭಾನುವಾರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಅತ್ಯಂತ ಭಕ್ತಿಪುರಸ್ಸರವಾಗಿ ಆರಂಭಗೊಂಡಿತು.ಇದರ ಅಂಗವಾಗಿ ಸುಪ್ರಭಾತ,ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ಬೆಳಿಗ್ಗೆ ಅಷ್ಟೋತ್ತರ ಸಹಿತ ಫಲಪಂಚಾಮೃತಾಭಿಷೇಕ ನಡೆಯಿತು.ಶ್ರೀ ಗುರುಸಾರ್ವಭೌಮರ ಮಹಿಮೆ ಕುರಿತು ಪಂಡಿತ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ) ಪ್ರವಚನ ನೀಡಿ, ಗುರುಸಾರ್ವಭೌ ಮರು ಕರುಣಾಮಯಿ ಭಕ್ತರು ಭಕ್ತಿಯಿಂದ ಕೇಳಿದ ಎಲ್ಲವನ್ನು ಕರುಣಿಸಬಲ್ಲವರು…

Read More

ಶಿವಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅನನ್ಯ: ಎಂ.ಬಿ. ಪಾಟೀಲ್

ಸಪ್ತಸಾಗರ ವಾರ್ತೆ, ವಿಜಯಪುರ, ಆ. 10: ಅಣ್ಣ ಬಸವಣ್ಣನವರ ಪರಮಾಪ್ತರಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರು ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೆರವಾಗುವ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

Read More

ಮಮದಾಪೂರ ಆದರ್ಶ ಗ್ರಾಮವನ್ನಾಗಿ ರೂಪಿಸಲು ಗ್ರಾಮಸ್ಥರು ಕೈ ಜೋಡಿಸಬೇಕು: ಸಚಿವ ಎಂ.ಬಿ. ಪಾಟೀಲ್

ಸಪ್ತ ಸಾಗರ ವಾರ್ತೆ,ವಿಜಯಪುರ, ಆ. 9: ಜಿಲ್ಲೆಯ ಮಮದಾಪುರ ಬಳಿ ನಿರ್ಮಿಸಲಾಗಿರುವ ಅರಣ್ಯದ ಪ್ರಕೃತಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನೆಲೆಸಿದ್ದು, ಶ್ರೀಗಳ ಆಶಯದಂತೆ ವ್ಯಸನಮುಕ್ತ, ಜಗಳರಹಿತವಾಗಿ ಬದುಕಿ ಆದರ್ಶ ಗ್ರಾಮವನ್ನಾಗಿ ಮಾಡಲು ಈ ಭಾಗದ ಗ್ರಾಮಸ್ಥರು ಕೈ ಜೋಡಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅಂದಾಜು ರೂ. 120 ಲಕ್ಷ ವೆಚ್ಚದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ…

Read More