
ಜಮೀನುಗಳಿಗೆ ನೀರು, ಐತಿಹಾಸಿಕ ಕೆರೆಗಳಿಗೆ ಮರುಜೀವ: ಸುನೀಲಗೌಡ
ಸಪ್ತಸಾಗರ ವಾರ್ತೆ, ವಿಜಯಪುರ, ಆ.3:ನೀರಾವರಿ ಯೋಜನೆಗಳಿಂದ ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಶನಿವಾರ ಮುಸ್ಸಂಜೆ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಸಚಿವ ಎಂ. ಬಿ. ಪಾಟೀಲ ಅವರು ಅಸಾಧ್ಯವಾದ ಕೆಲಸವನ್ನು…