
ನಮ್ಮ ಸೈನಿಕರು ಧೈರ್ಯ-ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 26:ಕಾರ್ಗಿಲ್ ಪರಂಪರೆಯು ಪ್ರತಿ ವಿದ್ಯಾರ್ಥಿಗೆ ಭಾರತೀಯ ಸೈನಿಕರ ಧೈರ್ಯ, ತ್ಯಾಗ, ಬಲಿದಾನ, ಸಾಹಸದ ಮಹತ್ವವನ್ನು ತಿಳಿಸುತ್ತದೆ. ಭಾವೈಕ್ಯತೆಗಾಗಿ ಇಂದಿನ ಮಕ್ಕಳು ಏಕತೆ, ಗೌರವದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯೋತ್ಸವ-2025 ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.ಕಾರ್ಗಿಲ್ ಯುದ್ಧ ವೀರರ ಕಥೆಗಳು ರಾಷ್ಟ್ರಕ್ಕಾಗಿ ತ್ಯಾಗ, ಧೈರ್ಯ ಮತ್ತು ಸಮರ್ಪಣೆಯ ಅತ್ಯುನ್ನತ ಆದರ್ಶಗಳನ್ನು ಸಾರುತ್ತವೆ….