saptsagar_admin

ವಂದೇ ಮಾತರಂ ಗೀತೆ ರಾಷ್ಟ್ರೀಯ ಭಾವನೆಯ ಸಂಕೇತ: ಶಾಸಕ ಯಶವಂತಗೌಡ ಪಾಟೀಲ

ಸಪ್ತಸಾಗರ ವಾರ್ತೆ, ಇಂಡಿ, ಡಿ. 30: ನಮ್ಮ ದೇಶ ವಿಭಿನ್ನ ರಾಜ್ಯಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಆದರೆ ನಮ್ಮೆಲ್ಲರ ಚಿಂತನೆ ಒಂದೇ ಆಗಿರಬೇಕು ಎಂಬುದನ್ನು ವಂದೇ ಮಾತರಂ ಗೀತೆ ಪ್ರಚುರಪಡಿಸುತ್ತದೆ ಎಂದು ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತಗೌಡ ಪಾಟೀಲ ತಿಳಿಸಿದ್ದಾರೆ.ಇಂಡಿ ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಡೆದ ಭಾರತ ಸರ್ಕಾರ ಕೇಂದ್ರ ಸಂವಹನ ಇಲಾಖೆ, ವಿಜಯಪುರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ,…

Read More

ಹೊಸ ವರ್ಷಾಚರಣೆ:ಬಿಗಿ ಬಂದೋಬಸ್ತ್-ಎಸ್ಪಿ ಲಕ್ಷಣ ನಿಂಬರಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:ಜಿಲ್ಲೆಯ ವಿಜಯಪುರ ನಗರ, ತಾಲೂಕಾ ಮಟ್ಟದ ಹಾಗೂ ಹೋಬಳಿ ಮಟ್ಟದ ನಗರಗಳಲ್ಲಿ 2026 ರ – ಹೊಸ ವರ್ಷಾಚರಣೆ ಮಾಡುವ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತೆ ವಹಿಸಿ, ಜಿಲ್ಲೆಯ ಎಲ್ಲ ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಮಾಲೀಕರು, ಮ್ಯಾನೇಜರುಗಳ ಸಭೆ ಕೈಕೊಂಡಿದ್ದು, ಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವ ಕುರಿತು ಸೂಚಿಸಿದ್ದಲ್ಲದೇ…

Read More

ನಿರ್ಲಕ್ಷಿತರಿಗೆ ಕಾಕಾ ಕಾರಖಾನೀಸರಿಂದ ಶಿಕ್ಷಣ ದಾಸೋಹ – ಬಿ.ಆರ್.ಬನಸೋಡೆ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.30: ನಿರ್ಲಕ್ಷಿತಗೊಳಗಾದವರನ್ನು ಸುಶಿಕ್ಷಿತರನ್ನಾಗಿಸಿದ ಶ್ರೇಯಸ್ಸು ಕಾಕಾ ಕಾರಖಾನೀಸರಿಗೆ ಸಲ್ಲುತ್ತದೆ. ಎಂದು ಜಾತಿಭೇದ, ಲಿಂಗಭೇದ ಮತ್ತು ವರ್ಣಭೇದ ಹೋಗಲಾಡಿಸಲು ಅಹರ್ನಿಶಿ ದುಡಿದವರು. ಅವರು ಕೇವಲ ಸಹಾನುಭೂತಿ ತೋರದೇ, ಅವರಲ್ಲಿ ಒಂದಾಗಿ ಅನುಭೂತಿಯನ್ನು ತೋರಿದ ಮಹಾನ್ ಧೀಮಂತರು ಎಂದು ಬಣ್ಣಿಸಿದರು.ಬ್ರಾಹ್ಮಣನಾಗಿದ್ದರೂ ನಾನು ಎಂದೆಂದೂ ಹರಿಜನನಾಗಿರುತ್ತೇನೆ ಎನ್ನುವ ಮೂಲಕ ಅದರಂತೆ ಬದುಕು ಸಾಗಿಸಿದವರು. ಸಮಾನತೆ ತರಲು ನಿರಂತರ ಹೋರಾಡಿದ ಹುಟ್ಟು ಸನ್ಯಾಸಿ, ದೇಶಪ್ರೇಮಿ, ಶತಾಯುಷಿ, ಸಾಬರಮತಿ ಆಶ್ರಮದಲ್ಲಿದ್ದು ಅಪ್ಪಟ ಗಾಂಧಿ ಅನುಯಾಯಿಯಾಗಿ ಪದ್ಮಶ್ರೀ ಕಾಕಾ ಕಾರಖಾನೀಸರು ಜನಾನುರಾಗಿಯಾಗಿದ್ದರು…

Read More

ಜಿಲ್ಲಾ ಕಾನಿಪ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೌರವ ಸನ್ಮಾನ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:ತಾಲೂಕಿನ ನಾಗಠಾಣ ಗ್ರಾಮದಲ್ಲಿ ಜರುಗಿದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಶಮಾನೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಯಡಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಶಶಿಕಾಂತ ಮೆಂಡೆಗಾರ ಅವರನ್ನು ಹಾಗೂ ಕರುನಾಡು ಪ್ರಭ ಪತ್ರಿಕೆಯ ಸಂಸ್ಥಾಪಕ ಶರಣು ಮಸಳಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಲ್ಲಯಾರೂಢ ಮಠದ ಪ್ರಜ್ಞಾನಂದ ಸ್ವಾಮೀಜಿ, ಗೂಳಪ್ಪ ಪೂಜಾರಿ, ಶರಣಬಸು ಪೂಜಾರಿ, ನಾಗಠಾಣ ಮತಕ್ಷೇತ್ರದ…

Read More

ಸಚಿವ ಎಂ.ಬಿ. ಪಾಟೀಲರಿಗೆ ಜಿಗಜಿಣಗಿ ಟಾಂಗ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಅವಧಿ ಕಡಿಮೆ ಮಾಡಲು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಮೂಲಕ ಸಂಚರಿಸುವಂತೆ ಮಾಡುವಲ್ಲಿ ಸಚಿವ ಎಂ. ಬಿ. ಪಾಟೀಲರ ಪಾತ್ರವಿಲ್ಲ. ನಾನು ಮಾಡಿದ್ದನ್ನು ತಾವೇ ಮಾಡಿದ ಕೆಲಸ ಎಂದು ಸಚಿವ ಪಾಟೀಲ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಅವಧಿ ಕಡಿಮೆ ಮಾಡಲು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಮೂಲಕ ಸಂಚರಿಸುವಂತೆ ಮಾಡಲು ಕಳೆದ ಮೂರು ವರ್ಷಗಳ ನನ್ನ…

Read More

ರಾಜಕೀಯ ನಿರಾಶ್ರಿತರ ಸಮಾವೇಶ ವಿಫಲ- ಈರಗೊಂಡ ಬಿರಾದಾರ ವ್ಯಂಗ್ಯ

ಸಪ್ತಸಾಗರ ವಾರ್ತೆ, ವಿಜಯಪುರ, 30: ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಉದ್ದೇಶದಿಂದ ಏರ್ಪಡಿಸಿದ್ದ ಸಮಾವೇಶ ವಿಫಲಗೊಂಡಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.ಸೌಮವಾರ ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಬಲೇಶ್ವರ ಗುರುಪಾದೇಶ್ವರ ಮಹಾಸ್ವಾಮಿಜಿಗಳು, ಶಾಂತವೀರ ಅಪ್ಪಗಳವರ ಪುಣ್ಯಕ್ಷೇತ್ರವಾಗಿರುವ ಬಬಲೇಶ್ವರದಲ್ಲಿ ಬಸವಾದಿ ಶರಣರ ಆಶಯದಂತೆ ಎಲ್ಲ ಜಾತಿ ಜನಾಂಗದವರು ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡು ಪ್ರೀತಿಯಿಂದ ಬಾಳುವ ಇವರ ಮಧ್ಯೆ ಧರ್ಮದ ಹೆಸರಿನಲ್ಲಿ ಕಿಡಿ…

Read More

ಜಿಒಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅರ್ಜುನ, ಉಪಾಧ್ಯಕ್ಷೆಯಾಗಿ ಪುಷ್ಪಾ ಅವಿರೋಧ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧಕ್ಷ ಸ್ಧಾನಕ್ಕೆ ಅರ್ಜುನ ಲಮಾಣಿ (ಶಿಕ್ಷಣ ಇಲಾಖೆ) ಹಾಗೂ ಉಪಾಧ್ಯಕ್ಷ ಸ್ಧಾನಕ್ಕೆ ಪುಷ್ಪಾ ಗಚ್ಚಿನಮಠ (ಶಿಕ್ಷಣ ಇಲಾಖೆ) ಇವರುಗಳು ಮುಂದಿನ ಅವಧಿಯವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆನಂದಗೌಡ ಬಿರಾದಾರ ಮತ್ತು ಮಲಕಪ್ಪ ಟಕ್ಕಳಕಿ ಇವರು ತಮ್ಮ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದರಿಂದ, ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಜುನ…

Read More

ಪ್ರಾಚಾರ್ಯ ಡಾ. ಅಶೋಕ ಪಾಟೀಲರಿಗೆಆರ್ಯುರ್ವೇದ ವಿಶ್ವ ರತ್ನ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರಿಗೆ ಆರ್ಯುರ್ವೇದ ವಿಶ್ವ ರತ್ನ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಶುಕ್ರವಾರ ನಡೆದ ಎರಡನೇಯ ಆಯುರ್ವೇದ ವಿಶ್ವಸಮ್ಮೇಳನದಲ್ಲಿಡಾ. ಅಶೋಕ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿಶ್ವ ಆಯುರ್ವೇದ ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಶಾಂತಿ ಆಯುರ್ವೇದ ಕೇಂದ್ರದ ಖ್ಯಾತ ವೈದ್ಯ ಡಾ. ಗಿರಿಧರ ಕಜೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಇತರೆ ಆಯುರ್ವೇದ ಸಾಧಕ ವೈದ್ಯರಿಗೂ ಪ್ರಶಸ್ತಿ ಕೊಡಮಾಡಲಾಯಿತು.19…

Read More

ಮಾನ್ಯ ಕೊಲೆ : ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಲು ದಮನಿತ ಸೇನಾ ಸಮಿತಿ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 29:ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಾನ್ಯ ಪಾಟೀಲ ಅವರನ್ನು ಭೀಕರವಾಗಿ ಕೊಲೆ ಮಾಡಿದ ಅವರ ತಂದೆ ಮತ್ತು ಈ ಕೃತ್ಯದಲ್ಲಿ ಸಹಭಾಗಿಯಾದವರಿಗೆ ಕೂಡಲೇ ಗಲ್ಲು ಶಿಕ್ಷೆ ನೀಡುವಂತೆ ದಮನಿತ ಸೇನಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ದಮನಿತ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಭೀಮಪ್ಪ ಚಲವಾದಿ ಮಾತನಾಡಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪುರ ಗ್ರಾಮದಲ್ಲಿ…

Read More