saptsagar_admin

ಪ್ರಗತಿ ಹಂತದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ: ಜಿಪಂ ಉಪಕಾರ್ಯದರ್ಶಿ ಪ್ರಕಾಶ ಅಧಿಕಾರಿಗಳಿಗೆ ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15 :ಜಿಲ್ಲೆಯ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಪಂ ಉಪ ಕಾರ್ಯದರ್ಶಿ‌ ಪ್ರಕಾಶ ವಡ್ಡರ ಆವರು ರಸ್ತೆ ಕಾಮಗಾರಿ ಹಾಗೂ ಬ್ರಿಡ್ಜ್ ಕಾಮಗಾರಿ ಪರಿಶೀಲಿಸಿದರು.ತಿಕೋಟಾ ತಾಲೂಕಿನ ಹರನಾಳ ಗ್ರಾಮದ ಪೂರ್ಣಗೊಂಡಿರುವ ಡೋಣಿ ನದಿಯ ಹೂಳು ತೆಗೆಯುವ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ಬಬಲೇಶ್ವರ ತಾಲೂಕಿನ ಸಾರವಾಡ ಹಾಗೂ ಹೊನಗನಹಳ್ಳಿ ಗ್ರಾಮದ ವ್ಯಾಪ್ತಿಯ ಸೇತುವೆ, ವಿಜಯಪುರ ತಾಲೂಕು ವ್ಯಾಪ್ತಿಯ ಹಿಟ್ಟಿನಹಳ್ಳಿ ಗ್ರಾಮದ ಹತ್ತಿರ ಇರುವ ಸೇತುವೆಗಳ ಹೂಳು…

Read More

ಬಾಬಾನಗರ ಬಳಿ ಎರಡೂವರೆ ವರ್ಷದಲ್ಲಿ ಡ್ಯಾಂ ನಿರ್ಮಾಣ: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ,ಮಾ. 14:ಬಾಬಾನಗರ ಬಳಿ ಎರಡೂವರೆ ವರ್ಷದಲ್ಲಿ ಡ್ಯಾಂ ನಿರ್ಮಾಣವಾಗಲಿದ್ದು, ಇದರಿಂದ ತಿಕೋಟಾ ಭಾಗದ ರೈತರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಮುಸ್ಸಂಜೆ ತಿಕೋಟಾ ಪಟ್ಟಣದಲ್ಲಿ ಬಾಬಾನಗರ ಬಳಿ ಡ್ಯಾಂ‌ ನಿರ್ಮಾಣಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಸಚಿವ ಎಂ. ಬಿ. ಪಾಟೀಲ‌ ಅವರನ್ನು ರೈತರು ಅಭಿನಂದನೆ ಕಾರ್ಯಕ್ರಮ ಆಯೋಜಿಸಿ ಮಣುಕ(ಒಣದ್ರಾಕ್ಷಿ) ಹಾರದಿಂದ ಸನ್ಮಾನಿಸಿ ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳ‌ನ್ನು ಸಮರ್ಪಿಸಿ…

Read More

ಸ್ಪಂದನಾ ಹಾಸ್ಪಿಟಲ್ ನಲ್ಲಿ ಹೆಣ್ಣು ಮಗು ಜನಿಸಿದರೆ ಉಚಿತ ಚಿಕಿತ್ಸೆ

ಸಪ್ತಸಾಗರ ವಾರ್ತೆ,ಇಂಡಿ, ಮಾ. 14 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಪಂದನಾ ಆಸ್ಪತ್ರೆಯಲ್ಲಿ ಮಾ. 22 ರಿಂದ ಒಂದು ವರ್ಷದ ಅವಧಿ ವರೆಗೆ ಹೆಣ್ಣು ಮಗು ಜನಿಸಿದರೆ ಸಹಜ ಹೆರಿಗೆ ಹಾಗೂ ಸಿಜರಿನ್ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಲಕ್ಷ್ಮಿಕಾಂತ ಮೇತ್ರಿ ಹೇಳಿದರು.ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಇರುವ ಸ್ಪಂದನಾ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಅಸಂಘಟಿತ ಕಟ್ಟಡ ಕಾರ್ಮಿಕರು, ಬಿಪಿಎಲ್, ಎಪಿಎಲ್, ಸಾಮಾನ್ಯ…

Read More

ಸರ್ಕಾರವು ಜಮೀನು ಕಳೆದುಕೊಂಡ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ – ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 14:ನೀರಾವರಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಹೊಳೆಜೈನಾಪುರ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ, ಶ್ರೀ‌ ಈಶ್ವರ, ಶ್ರೀ ನಂದಿ ಮತ್ತು ಶ್ರೀ ಮಾರುತೇಶ್ವ ದೇವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಯುಕೆಪಿ 3ನೇ ಹಂತದ ಭೂಸ್ವಾಧೀನವಾಗಲಿರುವ ಜಮೀನುಗಳ ರೈತರಿಗೆ ಒಪ್ಪಂದದಂತೆ ಪರಿಹಾರ…

Read More

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 14: ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಅವರ ಯಶಸ್ಸಿಗೆ ಸಹಾಯ ಮಾಡಬೇಕು ಎಂದು ಇನ್ನರ್ ವೀಲ್ ಕ್ಲಪ್ ಅಧ್ಯಕ್ಷೆ ಮತ್ತು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಎ. ಸರನಾಡಗೌಡ ಹೇಳಿದ್ದಾರೆ.ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಗುರುವಾರ ಸಬಲಾ – ಮಹಿಳಾ ಸಬಲೀಕರಣ ಘಟಕ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ…

Read More

ಸಪ್ತಸಾಗರ ಸಂಪಾದಕ ರುದ್ರಪ್ಪ ಆಸಂಗಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ಬೆಂಗಳೂರು, ಮಾ. 14:ಸಪ್ತಸಾಗರ ದಿನ ಪತ್ರಿಕೆ ಸಂಪಾದಕ ಹಾಗೂ ಸಂಜೆವಾಣಿ ಜಿಲ್ಲಾ ವರದಿಗಾರ ರುದ್ರಪ್ಪ ಆಸಂಗಿ ಸೇರಿದಂತೆ ರಾಜ್ಯದ 31 ಗಣ್ಯರಿಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಶುಕ್ರವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿಜಯಪುರದ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರು 4 ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿರುವುದನ್ನು ಪರಿಗಣಿಸಿ ಮಾಧ್ಯಮ ಅಕಾಡೆಮಿಯ 2025ನೇ…

Read More

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 13:ಬದುಕೆಂಬ ಆಟದಲ್ಲಿ ಹಲವು ತಿರುವುಗಳಿದ್ದು, ಒಂದು ಕೆಟ್ಟ ಘಳಿಗೆಯಲ್ಲಿ ಅಂಟಿಕೊಂಡ ದುಶ್ಚಟ ಕ್ಷಣಿಕ ತೃಪ್ತಿ ನೀಡುತ್ತೆ ವಿನಃ ನಮ್ಮ ಬದುಕಿಗೆ ಸ್ಫೂರ್ತಿ ನೀಡಲ್ಲ. ಮಾದಕ ವ್ಯಸನಗಳಿಗೆ ಬಲಿಯಾಗದೇ ಇಂದಿನ ಯುವಕರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ನಾಗಠಾಣದ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶುಕ್ರವಾರ ತಾಲೂಕಿನ ಜುಮನಾಳ ಗ್ರಾಮದ ಜಟ್ಟಿಂಗೇಶ್ವರ ಗುಡಿಯಲ್ಲಿ ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ ಎಸ್ ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಜರುಗಿದ 2025-26…

Read More

ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಶೇ.3ರಷ್ಟು ಹೆಚ್ಚಳ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ.13: ಕರ್ನಾಟಕ ಪೌರನಿಗಮಗಳ ಅಧಿನಿಯಮಯನ್ವಯ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಪರಿಷ್ಕರಣೆಯಾಗದ ವರ್ಷದಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ಶೇ. 3ರಿಂದ 5 ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲು ಅವಕಾಶ ಇರುವುದರಿಂದ 2026-27ನೇ ವರ್ಷಕ್ಕೆ ಅನ್ವಯವಾಗುವಂತೆ 01-4-2026ರಿಂದ 31-03-2027ರವರೆಗೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆಯನ್ನು ದಿ:01-04-2026ರಿಂದ ಜಾರಿಗೆ ಬರುವಂತೆ ವಾಸದ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಖಾಲಿ ನಿವೇಶನಗಳು ಹಾಗೂ ಕೈಗಾರಿಕಾ ಪ್ರದೇಶಕ್ಕೆ ಶೇ.3…

Read More

ಇಂಡಿ ಲಿಂಬಿಗೆ ವಿಶ್ವದೆಲ್ಲೆಡೆ ಒಮಾನ್ , ದುಬೈ , ಯುಕೆ , ಸೇರಿದಂತೆ ಇತರೆ ರಾಷ್ಟ್ರಗಳಿಗೆ ಬೇಡಿಕೆ :ಡಾ ಬಿ ಫಕ್ರುದ್ದೀನ್

ಸಪ್ತಸಾಗರ ವಾರ್ತೆ ಇಂಡಿ, ಮಾ. 12: ಇಂಡಿ ಲಿಂಬೆಗೆ ಜಿ ಐ ಟ್ಯಾಗ್ ಮಾನ್ಯತೆ ಪಡೆದ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗಿದೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಮತ್ತು ಯೋಜನಾ ಸಂಯೋಜಕರಾದ ಡಾ ಬಿ.ಫಕ್ರುದ್ದಿನ್ ಹೇಳಿದರು. ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ಮಂಗಲ ಕಾರ್ಯಲಯ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ರಾಜ್ಯ 20 ಜಿಐ ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಯು ಕಾಲೇಜುಗಳ ಸಂಘಗಳಿಂದ ಮನವಿ ಸಲ್ಲಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 12:ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ಸಂಘಗಳ ಪ್ರತಿನಿಧಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.12 ರಂದು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಸಂಘಗಳ ಪ್ರಮುಖ ಬೇಡಿಕೆಗಳಲ್ಲಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಹಿಸುವ ಕುರಿತು ಪ್ರಸ್ತಾಪಿತ ಸರ್ಕಾರದ ಕಡತ ಸಂಖ್ಯೆ EP 10 DGD…

Read More