saptsagar_admin

ಸುರೇಶ ಜತ್ತಿಗೆ ರಾಷ್ಟ್ರ ಮಟ್ಟದ ಕರುನಾಡು ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿ

ವಾರ್ತೆ, ವಿಜಯಪುರ, ಡಿ. 2: ನಗರದ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಅವರಿಗೆರಾಷ್ಟ್ರ ಮಟ್ಟದ ಕರುನಾಡು ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.ಕರುನಾಡು ಕಲ್ಪವೃಕ್ಷ ಫೌಂಡೇಶನ(ರಿ),ಕರುನಾಡು ಕಲ್ಪವೃಕ್ಷ ಸಾಹಿತ್ಯ ವೇದಿಕೆ ಹಾಗೂ ಚಿತ್ರದುರ್ಗದಕರುನಾಡು ಕಲ್ಪವೃಕ್ಷ ಪ್ರಕಾಶನ ಇವರ ಸಹಯೋಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸುರೇಶ ಜತ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ನ ಮೂಲಕ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥಾಪಕ ಅಧ್ಯಕ್ಷ ಸುರೇಶ…

Read More

ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳ ಕುರಿತು ಉಪಹಾರ ಕೂಟದಲ್ಲಿ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ, ಬೆಂಗಳೂರು, ಡಿ.2:“ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಾಹಾರ ಕೂಟದಲ್ಲಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ, ವಿಧಾನಸಭೆ ಚಳಿಗಾಲದ ಅಧಿವೇಶನದ ಕಾರ್ಯತಂತ್ರಗಳು ಸೇರಿದಂತೆ ಪಕ್ಷ, ಸರ್ಕಾರ ಹಾಗೂ ರಾಜಕೀಯ ವಿಚಾರಗಳ ಕುರಿತು ಉಪಹಾರ ಕೂಟದಲ್ಲಿ ಚರ್ಚೆ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉಪಾಹಾರ ಕೂಟದ ಬಳಿಕ ಶಿವಕುಮಾರ್ ಅವರು ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದರು.“ನಾನು ಮುಖ್ಯಮಂತ್ರಿಗಳನ್ನು…

Read More

ಡಿ.೪, ೫ರಂದು ಎರಡು ದಿನಗಳ ಕಾಲಶ್ರೀ ದತ್ತ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 2:ನಗರದ ಬಸ್ ನಿಲ್ದಾಣದ ಬಳಿ ಇರುವ ಪುರಾತನ ಶ್ರೀ ನರಸಿಂಹ ದೇವಾಲಯದಲ್ಲಿ ಡಿ.೪ ಹಾಗೂ ೫ ರಂದು ಎರಡು ದಿನಗಳ ಕಾಲ ಶ್ರೀ ದತ್ತ ಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಶ್ರೀ ದತ್ತ ಜಯಂತಿ ಉತ್ಸವ ಮಂಡಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಂಡಳ, ಡಿ.೪ ರಂದು ಬೆಳಿಗ್ಗೆ ಶ್ರೀ ಗುರುಚರಿತ್ರ ಪಾರಾಯಣ ನಡೆಯಲಿದ್ದು, ಸಂಜೆ ೪-೩೦ಕ್ಕೆ ಶ್ರೀ ಉಮೇಶ ಉಪಾಧ್ಯಾಯ ಇವರಿಂದ ಕೀರ್ತನ ಸೇವೆ, ಸಂಜೆ…

Read More

ಶ್ರೀಶೈಲಯ್ಯ ಮಠಪತಿ ನಿಧನ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 1: ಸರಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಚಾಲುಕ್ಯ ನಗರ ನಿವಾಸಿ ಶ್ರೀಶೈಲಯ್ಯ ಮಡಿವಾಳಯ್ಯ ಮಠಪತಿ (84) ಸೋಮವಾರ ನಸುಕಿನ ಜಾವ ನಿಧನ ಹೊಂದಿದ್ದಾರೆ.ನಗರದ ಕೆ.ಎಚ್.ಬಿ ಕಾಲನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಅವರು ಸೇವೆ ಸಲ್ಲಿಸಿದ್ದರು.ವಯೋಸಹಜ ಕಾಯಿಲೆಯಿಂದ ನಿಧನರಾದ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು,‌ ಮೊಮ್ಮಕ್ಕಳು, ಮರಿಮೊಮ್ಮಗಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಚಾಲುಕ್ಯ ನಗರದ ರುದ್ರಭೂಮಿಯಲ್ಲಿ ಸಂಜೆ ನಡೆಯಿತು.

Read More

75 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ: ಬೃಹತ್ ಪ್ರತಿಭಟನಾ‌ ಮೆರವಣಿಗೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಡಿ. 1: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಿತು.ನಗರದ ಶಿವಾಜಿ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಗೊಂಡು ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ತೆರಳಿ ಸಮಾವೇಶವಾಗಿ ಸಭೆಯಾಗಿ ಮಾರ್ಪಟ್ಟಿತು.ಮೆರವಣಿಗೆಯಲ್ಲಿ ವಿವಿಧ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡದ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಘೋಷಣೆ‌ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಂತರ‌ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ…

Read More

ರಕ್ತದಾನ ಶಿಬಿರ ಮತ್ತು ಆ್ಯಪ್ ಬಿಡುಗಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 1 : ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ಶ್ರೀ ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ ಟ್ರಸ್ಟ್ ಶಿವಗಿರಿ, ಬಿ.ಎಲ್.ಡಿ.ಈ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಭಾರತೀಯರೆಡ್ ಕ್ರಾಸ್ ಸಂಸ್ಥೆ ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ “ವಕೀಲರ ದಿನಾಚರಣೆ 2025 ” ರ ಅಂಗವಾಗಿ “ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಹಾಗೂ ಆ್ಯಪ್ ಬಿಡುಗಡೆ” ಕಾರ್ಯಕ್ರಮವನ್ನು ಬುಧವಾರ ಬೆಳಿಗ್ಗೆ 9:30ರಿಂದ…

Read More

ಜಿಲ್ಲೆಯಲ್ಲಿ ಮಾರಕ ರೋಗಗಳನ್ನು ತಡೆಯಲು ಅಗತ್ಯ ಜಾಗೃತಿ ಮೂಡಿಸೋಣ: ಅರವಿಂದ ಹಾಗರಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.1: ಏಡ್ಸ್ ರೋಗದ ಬಗ್ಗೆ ಭಯ ಬೇಡ ಜಾಗೃತಿ ಅಗತ್ಯ ಜಿಲ್ಲೆಯಲ್ಲಿ ಏಡ್ಸ್ ರೋಗವನ್ನು ಶೂನ್ಯಕ್ಕೆ ತರುವಲ್ಲಿ ಅಗತ್ಯ ಜಾಗೃತಿ ಮೂಡಿಸೋಣ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಮರ್ಚಂಟ್ ಅಸೋಸಿಯೇರ್ಶನ ಎಪಿಎಂಸಿ ಯಾರ್ಡ ಇವರ ಸಹÀಯೋಗದಲ್ಲಿ ನಗರದ ಇಂಡಿ…

Read More

ಗ್ರಾಮ ಸ್ವಚ್ಛತೆಗೆ ಆಧ್ಯತೆ ನೀಡಿ : ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ

ಸಪ್ತಸಾಗರ ವಾರ್ತೆ, ವಿಜಯಪುರ,ಡಿ.1 :ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಸೋಮವಾರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಹೊನವಾಡ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ತೆರಿಗೆ ವಸೂಲಾತಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ವೈಯಕ್ತಿಕ ಶೌಚಾಲಯಗಳ ಪ್ರಗತಿ, ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಪ್ರಗತಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇ-ಕೆವೈಸಿ…

Read More

ಡಿ.7ರಂದು ವೃಕ್ಷೋತ್ಥಾನ ಹೆರಿಟೇಜ್ ರನ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಡಿ.7 ರಂದು ವೃಕ್ಷಥಾನ್ ಪಾರಂಪರಿಕ ಓಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 6 ಗಂಟೆಗೆ ನಗರದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಾರಂಪರಿಕ ಓಟಕ್ಕೆ ಚಾಲನೆ ಹಾಗೂ ಬೆಳಿಗ್ಗೆ 9 ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ವೃಕ್ಷಥಾನ್ ಪಾರಂಪರಿಕ ಓಟ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಖಾತೆ ಸಚಿವ ವಿಜಯಪುರ…

Read More

ಡಿ.15ರಂದು ಅಂಚೆ ಅದಾಲತ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.1: ಅಂಚೆ ವಿಭಾಗದ 2025ನೇ ಸಾಲಿನ 3ನೇ ತ್ರೈಮಾಸಿಕ ಅಂಚೆ ಅದಾಲತ್ ಕಾರ್ಯಕ್ರಮ ಡಿ.15 ರಂದು ಮಧ್ಯಾಹ್ನ 3 ಗಂಟೆಗೆ ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಬಬಲೇಶ್ವರ, ಬಸವನಬಾಗೇವಾಡಿ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ, ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗಳಿಗೆ ಸಲಹೆ-ಸೂಚನೆ ಹಾಗೂ ದೂರುಗಳನ್ನು ಅಂಚೆ ಅದಾಲತ್‍ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ದಿನಾಂಕ : 10-12-2025ರೊಳಗೆ ಯಾವುದೇ…

Read More