ಭವಿಷ್ಯದ ಬದುಕಿಗೆ ನೀರಿನ ಮಿತ ಬಳಕೆ ಅತ್ಯಗತ್ಯ -ಸಂತೋಷ ಬಂಡೆ
ಸಪ್ತಸಾಗರ ವಾರ್ತೆ,ವಿಜಯಪುರ, ಏ. 28:ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಹೆಚ್ಚಾದ ಜನಸಂಖ್ಯೆ,ನಗರೀಕರಣ,ಜಾಗತಿಕ ತಾಪಮಾನದಿಂದ ಜಲ ಸಂಪನ್ಮೂಲ ಮೇಲೆ ಒತ್ತಡವಿದ್ದು, ನೀರನ್ನು ಮಿತವಾಗಿ ಬಳಸಿ, ಮರುಬಳಕೆ ಮಾಡುವುದು ನಮ್ಮೆಲ್ಲರ ಮುಖ್ಯ ಗುರಿಯಾಗಬೇಕಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಲ ಶಕ್ತಿ ಅಭಿಯಾನದಡಿ ಜಲ ಪಖ್ವಾಡ್ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ‘ನೀರು ಭವಿಷ್ಯದ ಬದುಕಿಗೆ ಆಧಾರ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು…


