ಸಪ್ತಸಾಗರ ವಾರ್ತೆ,ವಿಜಯಪುರ, ಜು. 27:
ಬಿ.ಎಂ. ಪಾಟೀಲ್ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ್ ಅವರು ಬಿ ಎಲ್ ಡಿ ಇ ಅಧ್ಯಕ್ಷರಾದ ಬಳಿಕ ಹೊಸ ರೂಪ ನೀಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಬಿಎಲ್ಡಿಇ ಸಂಸ್ಥೆ ಕಟ್ಟಿ ಬೆಳೆಸಿದ ಮಹನೀಯರಾದ
ಬಂಥನಾಳ ಸಂಗನಬಸವ ಶ್ರೀಗಳು, ಡಾ ಫ ಗು ಹಳಕಟ್ಟಿ, ಬಂಗಾರಮ್ಮ ಸಜ್ಜನ ಹಾಗೂ ಬಿ ಎಂ ಪಾಟೀಲ್ ಅವರ ಸ್ಮರಣೆ
ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಧಾರವಾಡದ ಸಿದ್ದಪ್ಪ ಕಂಬಳಿ ಬ್ರಿಟಿಷರ ಕಾಲದಲ್ಲಿ ಶಿಕ್ಷಣ ಸಚಿವರಾಗಿದ್ದರು.
ಆಗ ಹಿಂದುಳಿದ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಹಾಯ ಮಾಡಿದರು.
ಬಿ.ಎಂ. ಪಾಟೀಲರು ಆಸಕ್ತಿ ವಹಿಸಿ ಶಿಕ್ಷಣಕ್ಕೆ ಒತ್ತು ನೀಡಿದರು. ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಲು ಬಿ.ಎಂ. ಪಾಟೀಲ ಅವರು ಕೋರ್ಟ್ ಮೊರೆ ಹೋಗಿ ಸ್ಥಾಪನೆ ಮಾಡಿದರು. ಸಚಿವ ಎಂ.ಬಿ. ಪಾಟೀಲ ಅವರು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಪಾಟೀಲ ಅವರು ಎಜುಕೇಷನ್ ಹಬ್ ಮಾಡಿದ ಬಳಿಕ ವಿಜಯಪುರಕ್ಕೆ ಹೊಸ ಕಳೆ ಬಂದಿದೆ. ಬಿಎಲ್ಡಿಇ ಸಂಸ್ಥೆ ಕಟ್ಟಿದ ಹಳಕಟ್ಟಿ ಅವರು ಬಸವಣ್ಣರ ವಚನಗಳನ್ನು ಉಳಿಸಿ ಬೆಳೆಸಿದವರು. ವಚನಗಳನ್ನು ಮುದ್ರಣ ಪುಸ್ತಕಗಳನ್ನು ಕಲಬುರಗಿ ಬುದ್ದ ವಿಹಾರಕ್ಕೆ ತರಿಸಿಕೊಂಡಿದ್ದೇನೆ ಎಂದರು.
ಸಂವಿಧಾನ ಕುರಿತು ಕೆಲವರು ಓದಿಲ್ಲ.
ಸಂವಿಧಾನ ಸರಿಯಿಲ್ಲ ಎಂದು ಹೇಳುತ್ತಾರೆ
ಬಹುಮನಿಯರ ಕಾಲದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಇರಲಿಲ್ಲ.
ಸಂವಿಧಾನದಿಂದ ಮತ ಹಾಕುವ ಅಧಿಕಾರ ಬಂದಿದೆ. ಟಾಟಾ, ಬಿರ್ಲಾ, ಅದಾನಿ, ಅಂಬಾನಿ ಹಾಗೂ ಕನಿಷ್ಟ ಕೆಲಸ ಮಾಡುವ ಸಾಮಾನ್ಯ ಕೆಲಸಗಾರನಿಗೂ ಒಂದೇ ಮತ ಹಾಕುವ ಅಧಿಕಾರ ಇದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಮನುಷ್ಯನಾಗಿ ಬದುಕಲು ಸಾಧ್ಯ ಎಂದು ತಿಳಿಸಿದರು.
ಬುದ್ದನ ಹಾದಿಯಲ್ಲಿ ಬದುಕಬೇಕೆಂದು ಎಲ್ಲರೂ ಹೇಳುತ್ತಾರೆ.
ಪ್ರಪಂಚದಲ್ಲಿ ಧರ್ಮ ಧರ್ಮಗಳಲ್ಲಿ ಜಗಳ ನಡೆದಿದೆ. ಬೌದ್ಧ ಧರ್ಮದ ಆಚರಣೆ ದೇಶಗಳಲ್ಲಿಯೂ ಯುದ್ದ ನಡೆದಿದೆ.
ಯಾವುದೆ ಸಮಾಜ ಹಾಗೂ ಮನುಷ್ಯನಿಗೂ ತೊಂದರೆ ಮಾಡಬಾರದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ.
ಯಾವುದರ ಹಿಂದೆ ಬಿದ್ದಿಲ್ಲ.
ಅಧಿಕಾರಕ್ಕಾಗಿ ಹಿಂದೆ ಬೀಳಬಾರದು ಎಂದು ಖರ್ಗೆ ನುಡಿದರು.
ಕೋರ್ಟ್ ಮೆಟ್ಟಿಲೇರಿ ಬಿ.ಎಂ. ಪಾಟೀಲರು ಜಿಲ್ಲೆಗೆ ಮೆಡಿಕಲ್ ಕಾಲೇಜ್ ತಂದಿದ್ದಾರೆ- ಖರ್ಗೆ
