ವಿಶ್ವ ಭಾಷಣ ದಿನ ಆಚರಿಸಿದ ಬಂಡೆ ಸಹೋದರಿಯರು

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15: ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಭಾಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ 1 ನೇ ವರ್ಗದ ವಿದ್ಯಾರ್ಥಿಗಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಭಾಷಣ ಮಾಡಿ ಗಮನ ಸೆಳೆದರು.
ಶಕ್ತಿಯುತ ಪದಗಳನ್ನು ಬಳಸುವದರಿಂದ ಭಾಷಣಗಳು ಜನರ ಮೇಲೆ ಗಾಢವಾಗಿ ಪ್ರಭಾವ ಬೀರುತ್ತವೆ.
ಪ್ರಜಾಪ್ರಭುತ್ವ, ಉತ್ತಮ ಆಡಳಿತ ಮತ್ತು ಮಾನವ ಹಕ್ಕುಗಳು, ಸಮಾಜದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಿ, ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ವಿಶ್ವ ಭಾಷಣ ದಿನದ ಉದ್ಧೇಶವಾಗಿದೆ.
ಹೊಸ ವಿಚಾರಗಳನ್ನು ಹಂಚಿಕೊಂಡು, ಇತರರಿಗೆ ಶಿಕ್ಷಣ ನೀಡಿ, ಜಗತ್ತಿನ ಬದಲಾವಣೆಗೆ ಸ್ಫೂರ್ತಿ ನೀಡಲು ವಿಶ್ವ ಭಾಷಣ ದಿನವನ್ನು ಆಚರಿಸುವ ರೂಢಿ ಇದೆ. ಒಂದು ಭಾಷಣವು ಮುರಿದ ಹೃದಯವನ್ನು ಗುಣಪಡಿಸುತ್ತದೆ. ಅದು ಸಮುದಾಯವನ್ನು ಒಟ್ಟುಗೂಡಿಸಿ, ಸಂಸ್ಕೃತಿಯನ್ನು ರಕ್ಷಿಸುತ್ತದೆ.

Share this