ಸಪ್ತಸಾಗರ ವಾರ್ತೆ ವಿಜಯಪುರ, ಡಿ. 25:
ಬಾಂಗ್ಲಾ ವಲಸಿಗರಿಂದ ದೇಶಕ್ಕೆ ಅಪಾಯ. ಹೀಗಾಗಿ ಬಾಂಗ್ಲಾ ಒಲಸಿಗರು ಹಾಗೂ ಅವರಿಗೆ ಸಾಥ್ ನೀಡುವವರನ್ನು ದೇಶದಿಂದ ಹೊರ ಹಾಕಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಮುಗ್ಧ ಹಿಂದೂ ಯುವಕನ ಸಜೀವ ದಹನ ಅತ್ಯಂತ ನೋವಿನ ಸಂಗತಿ ಎಂದರು.
ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತರ ಪಕ್ಷಗಳು ಬಾಂಗ್ಲಾ ವಲಸಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಅಂತಿಮ ಗಡುವು ನೀಡಬೇಕು ಎಂದರು.
ಗಡುವು ಮುಗಿದ ಬಳಿಕ ಬಾಂಗ್ಲಾದೇಶಕ್ಕೆ ಹೋಗದೇ ಇದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದರು.
ಚಿತ್ರದುರ್ಗದಲ್ಲಿ ಬಸ್ ದುರಂತ ಪ್ರಕರಣ ತನಿಖೆಗೆ ಒತ್ತಾಯ
ಚಿತ್ರದುರ್ಗ ಬಸ್ ದುರಂತ ತನಿಖೆ ಆಗಬೇಕು. ರಾಜ್ಯದಲ್ಲಿನ ಬಸ್ ಪದೇ ಪದೇ ದುರಂತವಾಗಲು ಕಾರಣ ಕಂಡುಹಿಡಿಯಬೇಕು. ಅದಕ್ಕಾಗಿ ಬಸ್ಸುಗಳ ದುರಂತದ ಬಗೆಗಿನ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಮಾಯಕರ ಜೀವ ದಹನ ಆಗುವುದು ನೋವಿನ ಸಂಗತಿ. ಡೇಂಜರ್ ಬಸ್‌ಗಳ ಲೈಸೆನ್ಸ್‌ಗಳನ್ನು ರದ್ದು ಮಾಡಬೇಕು. ಸಾರಿಗೆ ಇಲಾಖೆಯವರು ಎಲ್ಲವನ್ನೂ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.


