ಸಪ್ತಸಾಗರ ವಾರ್ತೆ ವಿಜಯಪುರ, ಸೆ. 17:
ಚಡಚಣ ಎಸ್ ಬಿ ಐ ಬ್ಯಾಂಕ್
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದ್ದು, ಶೀಘ್ರದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಝಳಕಿ ಪ್ರವಾಸಿ ಮಂದಿರದಲ್ಲಿ ಸುದ್ದಿದಾರರಿಗೆ ಮಾಹಿತಿ ನೀಡಿ, ನಿನ್ನೆ ಸಾಯಂಕಾಲ
6-30 ರಿಂದ 7-30 ರ ವೇಳೆ ದರೋಡೆ ನಡೆದಿದೆ. ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ ಘಟನೆ ನಡೆದಿದೆ.
ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಮಾಡುವ ನೆಪದಲ್ಲಿ ಬಂದು ಬ್ಯಾಂಕಿನ ಒಳಗಡೆ ಕುಳಿತಿದ್ದ.
ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ ಲಾಕರ್ ಓಪನ್ ಇತ್ತು. ಕಂಟ್ರಿ ಪಿಸ್ತೂಲ್ ತೋರಿಸಿ ಬೆದರಿಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ ಎಂದು ಹೇಳಿದರು.
398 ಪ್ಯಾಕ್ ನಲ್ಲಿ ಅಡವಿಟ್ಟಿದ್ದ ಚಿನ್ನ ದರೋಡೆ ಮಾಡಿದ್ದು,
ಸುಮಾರು 20 ಕೆಜಿ ಚಿನ್ಮಾಭರಣ ಹಾಗೂ
21 ಕೋಟಿ ಮೌಲ್ಯದ ಚಿನ್ನ, 1.5 ಕೋಟಿ ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರಕರಣ ಬೇಧಿಸಲು
8 ತನಿಖಾ ತಂಡಗಳ ರಚನೆ ಮಾಡಲಾಗಿದೆ.
ಮಹಾರಾಷ್ಟ್ರದ ಹುಲಜಂತಿಯಲ್ಲಿ ದರೋಡೆಕೋರರು ಬಳಕೆ ಮಾಡಿದ ಇಕೋ ವಾಹನ ಪತ್ತೆಯಾಗಿದೆ. ವಾಹನದಲ್ಲಿ ಸ್ವಲ್ಪ ದುಡ್ಡು, ಚಿನ್ನಾಭರಣಗಳ ಪ್ಯಾಕೇಟ್ ಸಿಕ್ಕಿವೆ. ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಿದರು.
ಬ್ಯಾಂಕ್ ದರೋಡೆ: ಶೀಘ್ರದಲ್ಲಿ ಆರೋಪಿಗಳ ಬಂಧನ- ಎಸ್ಪಿ ನಿಂಬರಗಿ
