ಲಚ್ಯಾಣ ನಿಲ್ದಾಣದಲ್ಲಿ ಬಸವ ಎಕ್ಸ್‌ಪ್ರೆಸ್‌ಗೆ ಒಂದು ದಿನ ತಾತ್ಕಾಲಿಕ ನಿಲುಗಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.27:
ಹಜರತ್ ಸೈಯದ್ ಅಬ್ದುಲ್ಲಾ ಇದ್ರೂಸ್ ರಹಮತುಲ್ಲಾಹಿ ಅಲೈ ಅವರ ಉರ್ಸ್-ಎ-ಶರೀಫ್ ಅಂಗವಾಗಿ ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಡೈಲಿ ಎಕ್ಸ್‌ಪ್ರೆಸ್‌ಗೆ ಆ.28ರಂದು ಲಚ್ಯಾಣ ನಿಲ್ದಾಣದಲ್ಲಿ ಒಂದು ದಿನದ ಮಟ್ಟಿಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ.
ನಿಗದಿತ ದಿನ ರೈಲು ಸಂಜೆ 5.28ಕ್ಕೆ ಲಚ್ಯಾಣ ನಿಲ್ದಾಣ ತಲುಪಿ, 5.29ಕ್ಕೆ ನಿರ್ಗಮಿಸಲಿದೆ.

ಅರಸಾಳು, ಕುಂಸಿಯಲ್ಲಿ ನಿಲುಗಡೆ ಮುಂದುವರಿಕೆ

ರೈಲು ಸಂಖ್ಯೆ 16227/16228 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿನ ಅರಸಾಳು ನಿಲ್ದಾಣದ ನಿಲುಗಡೆ ಹಾಗೂ ರೈಲು ಸಂಖ್ಯೆ 16206/16205 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿನ ಅರಸಾಳು ಮತ್ತು ಕುಂಸಿ ನಿಲ್ದಾಣಗಳ ನಿಲುಗಡೆಯನ್ನು ಆ.24ರಿಂದ ಮುಂದಿನ ಸೂಚನೆವರೆಗೆ ಮುಂದುವರಿಸಲಾಗಿದೆ.

ತಳಕಿನಲ್ಲಿ ತಾತ್ಕಾಲಿಕ ನಿಲುಗಡೆ ವಿಸ್ತರಣೆ

ರೈಲು ಸಂಖ್ಯೆ 57415/57416 ಗುಂತಕಲ್–ಚಿಕ್ಕಜಾಜೂರು–ಗುಂತಕಲ್ ಡೈಲಿ ಪ್ಯಾಸೆಂಜರ್ ರೈಲಿಗೆ ತಳಕು ನಿಲ್ದಾಣದಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯ ಅವಧಿಯನ್ನು ವಿಸ್ತರಿಸಲಾಗಿದೆ. ಈ ಹಿಂದೆ ನ.17, 2026ರವರೆಗೆ ನಿಗದಿಯಾಗಿದ್ದ ನಿಲುಗಡೆಯನ್ನು ಇದೀಗ ಮೇ 18, 2027ರವರೆಗೆ ಮುಂದುವರಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

Share this