ಬಸವರಾಜಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 29 :
ಇಲ್ಲಿನ ಸಂಗನಬಸವ ಶಿಶುನಿಕೇತನ (ಸಿ.ಬಿ.ಎಸ್.ಇ) ಶಾಲೆಯ ಚಿತ್ರಕಲಾ ಶಿಕ್ಷಕ ಬಸವರಾಜ ಹನಮಪ್ಪ ಹಡಪದ ಅವರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಬಸವರಾಜ ಅವರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಿತ್ರಕಲಾ ಕ್ಷೇತ್ರದಲ್ಲಿ ಹಲವಾರು ಗುಂಪು ಚಿತ್ರಕಲಾ ಪ್ರದರ್ಶನ, ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಹಲವಾರು ಕಲಾಕೃತಿಗಳಿಗೆ ನಗದು ಬಹುಮಾನ, ಹಲವಾರು ಕಲಾಕೃತಿಗಳಿಗೆ ಅತ್ಯುತ್ತಮ ಕಲಾಕೃತಿ ಪ್ರಶಸ್ತಿಗಳು ಮತ್ತು ಹಲವಾರು ಕಲಾ ಶಿಬಿರಗಳು ಹಾಗೂ 2023-24 ರಲ್ಲಿ ಜ್ಞಾನಾಂಜನ ಶಿಕ್ಷಣ ಸಂಸ್ಥೆ ಕೋರವಾರ ಇವರ ಸಂಸ್ಥೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಚಿತ್ರಕಲಾವಿದ ಮತ್ತು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹಲವಾರು ರಾಜ್ಯ ಪ್ರಶಸ್ತಿಗಳು ಹಾಗೂ ಚಿತ್ರಕಲಾ ಭೂಷಣ ಪ್ರಶಸ್ತಿ ಹೀಗೆ ಅನೇಕ ಸಾಧನೆಯನ್ನು ಗುರುತಿಸಿ ವಿಜಯಪುರದ ಹನಮಂತರಾಯ ರಂಗ ಮಂದಿರದಲ್ಲಿ ಸಮಾರಂಭದಲ್ಲಿ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಹಾಗೂ ಇತರ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Share