ಭಗವದ್ಗೀತೆ ಕಂಠಪಾಠ ಸ್ಪರ್ಧೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 2 : ನಗರದ ವ್ಯಾಸ ಮದ್ವ ಸಂಸ್ಕೃತ ವಿದ್ಯಾಲಯದಲ್ಲಿ ಕುಮುದಿನಿ ಪ್ರತಿಷ್ಠಾನ ವತಿಯಿಂದ ಗೀತಾ ಜಯಂತಿಯ ನಿಮಿತ್ತವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಪಂಡಿತ್ ಅಜಯ ಆಚಾರ್ ಜೋಶಿ ಹಾಗೂ ಆನಂದ್ ಆಚಾರ್ ಜೋಶಿ ಅವರು ನಿರ್ವಹಿಸಿದರು . ಅಧ್ಯಕ್ಷ ವಹಿಸಿದ್ದ ಬಾಬುರಾವ್ ಕುಲಕರ್ಣಿ ಅವರು ಮಾತನಾಡಿ, ಇದು ಒಂದು ಯೋಗಶಾಸ್ತ್ರ ಎಂದು ಹೇಳುತ್ತೇವೆ. ಆದ್ದರಿಂದ ಗೀತಾ ಎಲ್ಲಕ್ಕಿಂತ ಹೆಚ್ಚಾಗಿ ಯೋಗಶಾಸ್ತ್ರ ಅನುಷ್ಠಾನ ಪ್ರಧಾನವಾದ ಶಾಸ್ತ್ರವಾಗಿದೆ. ಎಲ್ಲ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಭಗವದ್ಗೀತಾ ಕಂಠಪಾಠ ಮಾಡಿರುವುದು ಇದು ಇದರ ಮಹತ್ವವನ್ನು ತಿಳಿಸುತ್ತದೆ ಎಂದರು. ಕುಮುದಿನಿ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಹನುಮಂತ ಕುಲಕರ್ಣಿ ಅವರು ಪ್ರತಿಷ್ಠಾನದ ಕಾರ್ಯ ವೈಖರಿಯನ್ನು ಸ್ಮರಿಸಿಸುತ್ತಾ ಭಗವದ್ಗೀತೆ ಪಾರಾಯಣ ಮಾಡುತ್ತಾ ಭಗವದ್ಗೀತಾ ಸ್ಪರ್ಧೆ ನಡೆಸಲು ಪ್ರೇರಣೆ ಸಿಕ್ಕಿತು ಎಂದರು.
ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದ ಪರವಾಗಿ ಪ್ರಲ್ಹಾದ ಬಾಗೇವಾಡಿ ಅವರು ಮಾತನಾಡಿ, ಭಾರತೀಯ ತತ್ವ ಸೌಧದ ಶಾಸ್ತ್ರಕ್ಕೆ ಆಧಾರ ಸ್ಥಂಭವೇ ಉಪನಿಷತ್ತು. ಬ್ರಹ್ಮ ಸೂತ್ರ ಮತ್ತು ಭಗವದ್ಗೀತಾ ಎಂಬುದು ಪ್ರಸ್ತಾನತ್ರೆಗಳು. ಅದಕ್ಕಾಗಿ ಇತಿ ಶ್ರೀಮದ್ ಭಗವದ್ಗೀತಾ ಉಪನಿಷತ್ತು ಬ್ರಹ್ಮವಿದ್ದಾಯಂ ಯೋಗಶಾಸ್ತ್ರ ಕೃಷ್ಣಾರ್ಜುನ ಸಂವಾದೇ ಎಂದು ಕೊನೆಗೊಳ್ಳುವದು. ಸಾಕ್ಷಾತ್ ಭಗವಂತನೇ ಅರ್ಜುನನನ್ನು ನಿಮಿತ್ಯ ಮಾಡಿಕೊಂಡು ಮಾನವನಿಗೆ ಕೊಟ್ಟು ಅಪೂರ್ವ ಶಕ್ತಿ ಇದು ಎಂದು ಹೇಳಿದರು.
ಗಿರೀಶ ಆಚಾರ್ಯ ಅಕಮಂಚಿ ನಿರೂಪಿಸಿದರು.

Share this