ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:
ಭಾರತೀಯ ಜನತಾ ಪಕ್ಷದ ವಿಜಯಪುರ ಮಹಾನಗರ ಘಟಕದ ವತಿಯಿಂದ ವಾರ್ಡ್ ಸಂಖ್ಯೆ 21, 22, 23, 24 ಹಾಗೂ 25ರ ವ್ಯಾಪ್ತಿಯ ಶ್ರೀ ಸಾಕ್ಷಿ ಗಣಪತಿ ದೇವಸ್ಥಾನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಹಾಶಕ್ತಿ ಕೇಂದ್ರ–04ರ ಆಶ್ರಯದಲ್ಲಿ ಎಸ್ಐಆರ್ ಹಾಗೂ ಬಿಎಲ್ಎ-2 ಕುರಿತ ಮಹತ್ವದ ಸಭೆ ನಡೆಯಿತು. ರಾಜ್ಯದಲ್ಲಿ ಪಕ್ಷವು ಎಸ್ಐಆರ್ ಅಭಿಯಾನ ಹಾಗೂ ಬಿಎಲ್ಎ-2 ಕಾರ್ಯವನ್ನು ಸಂಘಟನಾತ್ಮಕವಾಗಿ ಬಲಪಡಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಭೆಗಳು ಆಯೋಜಿಸಲಾಗುತ್ತಿವೆ.
ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಮತ್ತು ಬಿಎಲ್ಎ-2 ಕಾರ್ಯವನ್ನು ಕಾರ್ಯಕರ್ತರು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ವಿಭಾಗೀಯ ಪ್ರಭಾರಿ ಬಸವರಾಜ ಯಂಕಂಚಿ, ಎಸ್ಐಆರ್ ಪ್ರಭಾರಿ ಸಂಜಯ ಪಾಟೀಲ ಕನಮಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ ಹಾಗೂ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗಡಗಿ ಸಭೆಯಲ್ಲಿ ಭಾಗವಹಿಸಿ ಪಕ್ಷದ ಮುಂದಿನ ಕಾರ್ಯತಂತ್ರ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಬಿಎಲ್ಎ-1 ಭೀಮಾಶಂಕರ ಹದನೂರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭರತ್ ಕೋಳಿ, ಮಹಾಶಕ್ತಿ ಕೇಂದ್ರದ ಪ್ರಭಾರಿ ಸಂಪತ್ ಕೋವಳ್ಳಿ, ರವಿಕಾಂತ ಬಗಲಿ, ನಗರ ಪ್ರಧಾನ ಕಾರ್ಯದರ್ಶಿ ಚಿನ್ನು ಚಿನಗುಂಡಿ, ರಾಮಚಂದ್ರ ಚವ್ಹಾಣ, ಗುರುನಾಥ ವಾಲಿಕಾರ, ಪ್ರವೀಣ ಹಳ್ಳಿ, ಕೃಷ್ಣಾ ಮಾಯಚಾರಿ, ಶಿವು ಮಡಿವಾಳರ, ಗೇಸುದರಾಜ ಇನಾಮದಾರ, ವಿವೇಕ ತಾವರಗೇರಿ, ಪ್ರಫುಲ್ ಪವಾರ, ಬಸವರಾಜ ಮಣೂರ, ವಿನಾಯಕ ಕುಂದನಗಾರ, ಮಂಥನ ಗಾಯಕವಾಡ, ಸಂತೋಷ ಪತ್ತಾರ, ಗುರುರಾಜ ಜೋಶಿ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಭುಯ್ಯಾರ, ಜಯಶ್ರೀ ಅಫಜಲಪುರ, ವಾರ್ಡ್ನ ಹಿರಿಯ ಮುಖಂಡರು, ಪಕ್ಷದ ಹಿತೈಷಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್ಐಆರ್ ಹಾಗೂ ಬಿಎಲ್ಎ-2 ಕುರಿತು ಬಿಜೆಪಿ ಸಭೆ


