ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 17:
ಬ್ಲ್ಯಾಕ್ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ. ಬ್ಲ್ಯಾಕ್ಮೇಲ್ ಮಾಡಿದ್ದರೆ ಎಂದೋ ಸಚಿವನಾಗಿರುತ್ತಿದ್ದೆ.
ಮಾಜಿ ಸಿಎಂ ಯಡಿಯೂರಪ್ಪನವರ ಸಾಕಷ್ಟು ಭ್ರಷ್ಟಾಚಾರ ನನ್ನ ಬಳಿ ಇದ್ದವು.
ಪಕ್ಷದ ಹಿತ ದೃಷ್ಟಿಯಿಂದ ಬ್ಲಾಕ್ಮೇಲ್ ಮಾಡಲಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ಎಂ.ಬಿ. ಪಾಟೀಲರಿಗೆ ಟಾಂಗ್ ನೀಡಿದರು.
ಟಿಕೆಟ್ ಗಾಗಿ ಯತ್ನಾಳ ಬಿಜೆಪಿಗೆ ಬ್ಲ್ಯಾಕಮೇಲ್ ಮಾಡುತ್ತಿದ್ದಾರೆ ಎಂಬ ಸಚಿವ ಎಂ. ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯತ್ನಾಳ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಯಡ್ಡಿ ಕುರಿತು ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನಿಸಿದೆ. ಅದರಿಂದಲೇ ಅವರ ಉಚ್ಚಾಟನೆಯಾಯಿತು ಎಂದರು.
ನಾನು ಹೊಸ ಪಕ್ಷ ಕಟ್ಟಿದರೆ ಹಿಂದೂಗಳ ವೋಟು ವಿಭಜನೆಯಾಗುತ್ತವೆ ಎಂಬುದು ಎಂ.ಬಿ. ಪಾಟೀಲ್ ಹಾಗೂ ಕಾಂಗ್ರೆಸ್ ಲೆಕ್ಕಾಚಾರ. ಮುಸ್ಲಿಂ ಮತಗಳ ಮೇಲೆ ಸರ್ಕಾರ ಮಾಡುವ ಉದ್ದೇಶವಿದೆ.
ಮುಸ್ಲಿಂ ಉದ್ದಾರವೇ ಅವರ ಉದ್ದೇಶ.
ಇದರಲ್ಲಿ ಎಂ.ಬಿ. ಪಾಟೀಲರ ಸಹಕಾರ ಎಲ್ಲಿಂದ ಬರುತ್ತದೆ ಎಂದು ಯತ್ನಾಳ ಟಾಂಗ್ ಕೊಟ್ಟರು.
ವಾರ್ಷಿಕ 10 ಸಾವಿರ ಕೋಟಿ ನೀಡಬೇಕು, ಮತಾಂತರ ಕಾಯ್ದೆ ವಾಪಸ್ಸು, ಮೀಸಲಾತಿಗೆ ಮುಸ್ಲಿಂಮರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮತ್ತೊಂದೆಡೆ ಯತ್ನಾಳ ಕಾಂಗ್ರೆಸ್ ಎಜೆಂಟ್ ಎಂದು ವಿಜಯೇಂದ್ರನ ಚೇಲಾಗಳು ಹೇಳುತ್ತಿದ್ದಾರೆ. ರಾಜ್ಯದ ಎಲ್ಲಾ ಹಿಂದೂಗಳು ಒಂದಾಗಬೇಕು.
ಎಲ್ಲಾ ಪಕ್ಷಗಳ ಹಿಂದೂಗಳು ಒಂದಾಗಬೇಕಿದೆ ಎಂದರು.
ತಮಿಳುನಾಡಿನ ಟಿವಿಕೆ ಪಕ್ಷದ ವಿಜಯ್ ನಂತೆ ರಾಜ್ಯದ ಹಿಂದೂಗಳು ಒಂದಾಗಬೇಕು. ಆಗ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಕಾರಣ ಹಿಂದೂಗಳನ್ನು ಒಂದು ಮಾಡುವ ಕೆಲಸ ನಾನು ಮಾಡುತ್ತಿರುವೆ. ಎಲ್ಲಾ ಜಿಲ್ಲೆಗಳಲ್ಲಿ ಓಡಾಡುತ್ತಿರುವೆ. ಕೊಲ್ಹಾರದ ಕುರುಮಲೆ ಗಣೇಶನ, ಆಂಜನೇಯನ ಆಶೀರ್ವಾದವಾಗಿದೆ ಎಂದು ಹೇಳಿದರು.
ರಾಜ್ಯದ ಹಿಂದೂಗಳ ಅಭಿಪ್ರಾಯ ತೆಗೆದುಕೊಳ್ಳುತ್ತೇನೆ. ಬಿಜೆಪಿ ಕಾಂಗ್ರೆಸ್ ನಲ್ಲಿರುವವರು ಹೊಂದಾಣಿಕೆ ಇದ್ದಾರೆ.
ವಿಜಯೇಂದ್ರ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಇಲ್ಲ ಎಂದರು.
ಸಚಿವ ಜಮೀರ್ 2346 ಕೋಟಿ ಜಿಎಸ್ಟಿ ಹಗರಣ ಹೊರ ಬಂದಿದೆ.
ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿಲ್ಲ.
ಮೆಟ್ರೋದಲ್ಲಿ ವಿಜಯೇಂದ್ರ ಪ್ರಯಾಣ ಮಾಡಿದ್ದೇ ದೊಡ್ಡ ಸುದ್ದಿಯಾಗುತ್ತದೆ.
ಮೆಟ್ರೋ ಸ್ಟೇಷನ್ ಗೆ ವಿಜಯೇಂದ್ರ ಹೇಗೆ ಬಂದ. ಪಾದಯಾತ್ರೆ ಮಾಡುತ್ತಾ ಬಂದನಾ? ನಂತರ ಹೇಗೆ ಹೋದಾ ಎಂದು ಯತ್ನಾಳ ವ್ಯಂಗ್ಯವಾಡಿದರು.
ಎಲ್ಲವೂ ನಾಟಕೀಕರಣವೆಂದು ವಿಜಯೇಂದ್ರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.
ಪ್ರಧಾನಿ ಸುರಕ್ಷತೆ ಅವಶ್ಯವಿದೆ.
ಮೋದಿ ಅವಶ್ಯಕತೆ ದೇಶಕ್ಕಿದೆ.
ತೈಲ ಬಳಕೆ ನಾವು ಕಡಿಮೆ ಮಾಡುತ್ತೇವೆ.
ಇಲ್ಲವಾದರೆ ವಿಜಯೇಂದ್ರನ ನಾಟಕ ನೋಡಬೇಕಾಗುತ್ತದೆ. ಎಲ್ಲ ಹಿಂದೂಗಳನ್ನು ತೆಗೆದುಕೊಂಡು ರಾಜ್ಯದಲ್ಲಿ ಪರ್ಯಾಯ ಮಾಡುತ್ತೇವೆ.
ಎಂಬಿ ಪಾಟೀಲರ ಆಶಯದಂತೆ
2028 ಕ್ಕೆ ನಾನು ಸಿಎಂ ಆಗುತ್ತೇನೆ.
ವಿರೋಧ ಪಕ್ಷದ ನಾಯಕರಾಗಿ ಎಂ.ಬಿ. ಪಾಟೀಲ್ ಇರುತ್ತಾರೆ ಎಂದು ಲೇವಡಿ ಮಾಡಿದರು.
ಬ್ಲ್ಯಾಕ್ ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ: ಯತ್ನಾಳ ಹೇಳಿಕೆ


