ಯುವಕನ ಶವ ಪತ್ತೆ: ಕೊಲೆ ಶಂಕೆ


ಸಪ್ತಸಾಗರ ವಾರ್ತೆ, ವಿಜಯಪುರ, ಜು. 11:
ಕೊಲೆಯಾದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ತಾಲೂಕಿನ ಅರಕೇರಿ ಬಳಿ ಶುಕ್ರವಾರ ಪತ್ತೆಯಾಗಿದೆ.
ಬಿಳಿನಸಿದ್ದ ದುಂಡಪ್ಪ ಒಡೆಯರ್ (33) ಶವವಾಗಿ ಪತ್ತೆಯಾಗಿರುವ ಯುವಕ.
ಅರಿಕೇರಿ ಗ್ರಾಮದ ಕರಾಡ ದೊಡ್ಡಿಯ ರಸ್ತೆಯಲ್ಲಿ ಗುಪ್ತಾಂಗ, ಕತ್ತು ಹಾಗೂ ಇತರೆ ಭಾಗಗಳಿಗೆ ಗಾಯಗಳಾಗಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಅರಕೇರಿ ಗ್ರಾಮದ ನಿವಾಸಿ ಬಿಳನಸಿದ್ದ
ಅಪರಿಚಿತರಿಂದ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಕೊಲೆಯಾದ ಯುವಕನ ಸಂಬಂಧಿಕರ ಆಕ್ರಂದ್ರನ ಮುಗಿಲು ಮುಟ್ಟಿತ್ತು. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this