ಶಿವಮೊಗ್ಗದಲ್ಲಿ ಜು. 17ರಿಂದ ಬಾಕ್ಸಿಂಗ್ ಕ್ರೀಡಾಕೂಟ


ಸಪ್ತಸಾಗರ ವಾರ್ತೆ, ವಿಜಯಪುರ, ಜು. 9:
ಜುಲೈ 17 ರಿಂದ 19 ರ ವರೆಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ವತಿಯಿಂದ ಶಿವಮೊಗ್ಗ ನಗರದಲ್ಲಿ 9 ನೇ ಕರ್ನಾಟಕ ರಾಜ್ಯ ಮಟ್ಟದ ಮಹಿಳಾ ಮತ್ತು ಪುರುಷರ ಬಾಕ್ಸಿಂಗ್ ಕ್ರೀಡಾಕೂಟ ನಡೆಯಲಿದೆ.
ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಓಲಂಪಿಕ್ ಸಂಸ್ಥೆ, ಭಾರತೀಯ ಅಮೆಚೂರ್ ಬಾಕ್ಸಿಂಗ್ ಒಕ್ಕೂಟದಿಂದ ಮಾನ್ಯತೆ ಪಡೆದ ಬಾಕ್ಸಿಂಗ್ ಕ್ರೀಡೆಯಾಗಿದೆ. ಬಾಕ್ಸಿಂಗ್ ಕ್ರೀಡೆಯು ಶಾಲಾ ಕಾಲೇಜುಗಳ ಕ್ರೀಡಾಕೂಟದಲ್ಲಿ, ದಸರಾ ಕ್ರೀಡಾಕೂಟದಲ್ಲಿ, ಮಿನಿ ಓಲಂಪಿಕ್ ಕ್ರೀಡಾಕೂಟದಲ್ಲಿ, ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ, ಸೇರ್ಪಡೆಯಾದ ಬಾಕ್ಸಿಂಗ್ ಕ್ರೀಡೆಯಾಗಿದೆ.
ವಿಜಯಪುರ ಜಿಲ್ಲೆಯ ಭಾಗವಹಿಸಲು ಇಚ್ಛಿಸುವ ಬಾಕ್ಸಿಂಗ್ ಕ್ರೀಡಾಪಟುಗಳು, ಜುಲೈ, 14 ರೊಳಗಾಗಿ ಮೊ. 9901944390 ಸಂಖ್ಯೆ ಮೂಲಕ ತಿಳಿಸಬೇಕು ಎಂದು ವಿಜಯಪುರ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Share