ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:
ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದಿಂದ ನೂತನ ಕ್ಯಾಲೆಂಡರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಅಧ್ಯಕ್ಷ ಸುರೇಂದ್ರ ಮಾನಕರ ಮಾತನಾಡಿ, ಇದು ಕೇವಲ ದಿನಾಂಕ ತೋರಿಸುವ ಕ್ಯಾಲೆಂಡರ್ ಅಲ್ಲ. ಇದು ಸೇವೆ, ತ್ಯಾಗ, ಮಾನವವೀಯತೆ ಮತ್ತು ವೃತ್ತಿಪರ ನಿಷ್ಠೆಯ ಪ್ರತಿಬಿಂಬ ಎಂದು ಕ್ಯಾಲೆಂಡರ್ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾದ ಡಾ ಸಂದೀಪ ಸಜ್ಜನ ಶುಶ್ರೂಷಾ ಅಧಿಕಾರಿಗಳ ವೃತ್ತಿ ಸ್ಮರಿಸಿದರು.
ಸಮಾರಂಭದ ಅಧ್ಯಕ್ಷ ಡಾ. ಶಿವಾನಂದ ಮಾಸ್ತಿಹೊಳಿ, ಶುಶ್ರೂಷಾ ಅಧಿಕಾರಿಗಳು ಆರೋಗ್ಯದ ಹೃದಯ ಶುಶ್ರೂಷಾ ಅಧಿಕಾರಿಗಳ ಕಾರ್ಯವೈಖರಿ ಪ್ರಶಂಸಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿಗಳು,
ಯಲಗೂರೇಶ ತೋನಶ್ಯಾಲ,
ಜಮೀಲ ತಂಗೇವಾಲೆ, ಮಮತಾ ಮ್ಯಾಗಿನಮನಿ, ಮಹಾದೇವಿ ಹಾದಿಮನಿ, ಅರಿಪ್ ಹವಾಲ್ದಾರ, ಭೀಮು ಚಾಲವದಿ,
ಸಿದ್ದು ಹೊಸೂರ, ಶಿವಣ್ಣ ಮಾಗಿ, ಶರಣು ಹಿಪ್ಪರಗಿ, ಶುಶ್ರೂಷಾ ಅಧಿಕಾರಿಗಳು, ಕಚೇರಿ ಅಧೀಕ್ಷಕರು ಮತ್ತು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಕ್ಯಾಲೆಂಡರ್ ಬಿಡುಗಡೆ


