ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20:
ರಾಜ್ಯ ಸರ್ಕಾರದ ಜಾತಿ ಗಣತಿ ಸೋನಿಯಾ ಗಾಂಧಿ ಅಣತಿಯಂತೆ ನಡೆಯುತ್ತಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ.
ವಿಜಯಪುರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಯತ್ನಾಳ,
ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಮಾಡಿದ್ದಾರೆ. ಇವೆಲ್ಲ ಸೋನಿಯಾ ಗಾಂಧಿ ಕೊಟ್ಟಿರುವ ಹೊಸ ಹೊಸ ನಾಮಾವಳಿ ಎಂದರು.
ಕೆಲವರು ಕ್ರಿಶ್ಚಿಯನ್ ರಾಷ್ಟ್ರ, ಹಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆನ್ನುತ್ತಾರೆ.
ಈ ಹಿನ್ನಲೆ ಜಾತಿ ವರ್ಗೀಕರಣ ಮಾಡಿದ್ದಾರೆ. ಇವೆಲ್ಲಾ ಜಾತಿಗಳು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ. ವಿಶ್ವದಲ್ಲೇ ಇಲ್ಲ.
ಸೋನಿಯಾ ಗಾಂಧಿ ನಿರ್ದೇಶನದ ಮೇಲೆ ಸಿಎಂ ಸಿದ್ದರಾಮಯ್ಯ ಕೀಳು ಮಟ್ಟದ ವ್ಯವಸ್ಥೆ ಮಾಡಿದ್ದಾರೆ ಎಂದು ಟೀಕಿಸಿದರು.
ಈ ಕುರಿತು ಅವರದ್ದೆ ಸಚಿವ ಸಂಪುಟದಲ್ಲಿ ಗೊಂದಲವಾಗಿದೆ. ಸಿದ್ದರಾಮಯ್ಯ ಇದೆಲ್ಲಾ ಕೈಬಿಡಬೇಕು. ಜಾತಿ ಗಣತಿ ಮಾಡುವುದಕ್ಕೆ ರಾಜ್ಯಕ್ಕೆ ಆಧಿಕಾರ ಇಲ್ಲ. ಕೇಂದ್ರಕ್ಕೆ ಇದೆ ಎಂದು ಹೇಳಿದರು.
ಲಿಂಗಾಯತ ಕಡಿಮೆ, ಒಕ್ಕಲಿಗ ಕಡಿಮೆ ಇದ್ದಾರೆ. ಮುಸ್ಲಿಂಮರು ಹೆಚ್ಚಿದ್ದಾರೆ ಎಂದು ತೋರಿಸುವ ನಾಟಕವಿದು. ಬೂಕರ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ, ಸುಪ್ರೀಂ ಕೋರ್ಟ್ ತೀರ್ಪು ವಿಚಾರ ಕುರಿತು ಪ್ರತಿಕ್ರಿಯೆ ನೀಡಿ,
ಇದು ಧಾರ್ಮಿಕ ಮನೋಭಾವನೆಗೆ ಸಂಬಂಧಿಸಿದ್ದು, ಕೋರ್ಟಿಗೆ ಹೋಗಿದ್ದು ತಪ್ಪು. ಕೋರ್ಟಿನಲ್ಲಿ ಪ್ರಶ್ನೆ ಮಾಡಬಾರದಾಗಿತ್ತು ಎಂದು ಹೇಳಿದರು.
ಬಿಜೆಪಿ ಮಾಜಿ ಸಿಎಂ, ಸಚಿವರು, ಮುಸ್ಲಿಂ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ,
ಧಾರ್ಮಿಕ ಕಾರ್ಯಕ್ರಮಗಳು ಬೇರೆ, ಇತರೆಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ಬೇರೆಯಾಗಿವೆ ಎಂದು ಯತ್ನಾಳ ಹೇಳಿದರು.
ದೇವಸ್ಥಾನದಲ್ಲಿ, ಮಸೀದಿಯಲ್ಲಿ ಕಾರ್ಯಕ್ರಮಗಳಿದ್ದಾಗ ಹೋಗಲಿಕ್ಕೆ ಬರಲ್ಲ. ಅವರೂ ಹೋಗಲ್ಲ, ನಾವೂ ಹೋಗಬಾರದು. ಇದೆಲ್ಲಾ ಏನಾದರೂ ನೆಪ ಬೇಕಾಗಿದೆ ಎಂದು ನುಡಿದರು.
ಸೋನಿಯಾ ಗಾಂಧಿ ಅಣತಿಯಂತೆ ಜಾತಿ ಗಣತಿ: ಯತ್ನಾಳ ಟೀಕೆ
