ವಿಶ್ವವಿಖ್ಯಾತ ವಿಜಯಪುರಕ್ಕೆ ಇನ್ನೂ ಇಲ್ಲ ನಗರ ಬಸ್ ಟರ್ಮಿನಲ್!

80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳು, ಸಾವಿರಾರು ದೇಶ-ವಿದೇಶಿ ಪ್ರವಾಸಿಗರು, 4 ಲಕ್ಷ ಜನಸಂಖ್ಯೆ… ಆದರೂ ರಸ್ತೆಯೇ ನಗರ ಬಸ್ ನಿಲ್ದಾಣ! ಮೂರು ಕೆಎಸ್‌ಆರ್‌ಟಿಸಿ ಡಿಪೋ, 50ಕ್ಕೂ ಹೆಚ್ಚು ನಗರ ಬಸ್‌ಗಳಿದ್ದರೂ ಮೂಲಸೌಕರ್ಯ ಶೂನ್ಯ; ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಗೆ ಸಾರ್ವಜನಿಕರ ಆಕ್ರೋಶ ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜು. 24:ವಿಶ್ವವಿಖ್ಯಾತ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಉಪ್ಪಲಿ ಬುರುಜ್, ಮಲಿಕ್-ಎ-ಮೈದಾನ್ ಸೇರಿದಂತೆ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳ ತವರೂರು ವಿಜಯಪುರ. ದೇಶ-ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು…

Read More

ಐತಿಹಾಸಿಕ ಸ್ಮಾರಕಗಳಲ್ಲಿ ಸರ್ಕಾರಿ ಕಚೇರಿಗಳ ಠಿಕಾಣೆ! ವಿಜಯಪುರದ ಪರಂಪರೆಗೆ ಯಾರು ಕಾವಲು?

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ ವಿಜಯಪುರ, ಜು. 12:ವಿಶ್ವದ ನಕ್ಷೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಐತಿಹಾಸಿಕ ನಗರ ವಿಜಯಪುರದಲ್ಲಿ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾಕಮಾನ್ ಸೇರಿದಂತೆ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳಿವೆ. ಆದರೆ ಪರಂಪರೆಯ ಪ್ರತೀಕಗಳಾಗಿರಬೇಕಾದ ಹಲವು ಐತಿಹಾಸಿಕ ಕಟ್ಟಡಗಳು ಇಂದು ಸರ್ಕಾರಿ ಕಚೇರಿಗಳಾಗಿ ಬಳಕೆಯಾಗುತ್ತಿರುವುದು ಪರಂಪರೆ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.ವಿಜಯಪುರದ ಬಹುತೇಕ ಐತಿಹಾಸಿಕ ಪಾರಂಪರಿಕ ಕಟ್ಟಡಗಳಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಖಜಾನೆ ಕಚೇರಿ, ಭೂದಾಖಲೆ (ಸರ್ವೇ/ಭೂಮಾಪನ) ಇಲಾಖೆ,…

Read More

ವಿಶಾಲ ಗಾಂಧಿ ವೃತ್ತದಲ್ಲಿ ಪುಟ್ಟ ಗಾಂಧಿ..! ರಾಷ್ಟ್ರಪಿತನಿಗೆ ವಿಜಯಪುರದಲ್ಲಿ ಸಿಗಬೇಕಿದೆ ಭವ್ಯ ಗೌರವ

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜು. 9:ಐತಿಹಾಸಿಕ ಸ್ಮಾರಕಗಳ ನಗರ, ಪ್ರವಾಸೋದ್ಯಮದ ಪ್ರಮುಖ ತಾಣ, ಸ್ಮಾರಕಗಳ ವೈಭವಕ್ಕೆ ಹೆಸರಾದ ವಿಜಯಪುರ ನಗರದ ಹೃದಯಭಾಗದಲ್ಲಿರುವ ಗಾಂಧಿ ವೃತ್ತ ಇಂದು ಒಂದು ಪ್ರಶ್ನೆಯನ್ನು ಎತ್ತುತ್ತಿದೆ—ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಿಗೆ ತಕ್ಕ ಗೌರವ ಇಲ್ಲಿ ಸಿಕ್ಕಿದೆಯೇ? ಗಾಂಧಿ ಪ್ರತಿಮೆಗೆ ಕಾಯಕಲ್ಪ ಯಾವಾಗ? ನಗರದ ಅತ್ಯಂತ ಪ್ರಮುಖ ವೃತ್ತಗಳಲ್ಲಿ ಒಂದಾದ ಗಾಂಧಿ ವೃತ್ತದಲ್ಲಿ ವಿಶಾಲವಾದ ಜಾಗವಿದೆ. ದಿನವಿಡೀ ಸಾವಿರಾರು ವಾಹನಗಳು, ಪಾದಚಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ, ಈ ವೃತ್ತದ ಮಧ್ಯಭಾಗದಲ್ಲಿರುವ ಗಾಂಧೀಜಿಯವರ ಪ್ರತಿಮೆ…

Read More

ವಿಶ್ವ ಪರಂಪರೆ ಪಟ್ಟಿಗೆ ಯಾವಾಗ ಸೇರುತ್ತದೆ ವಿಜಯಪುರದ ಹೆಮ್ಮೆಯ ಗೋಳಗುಮ್ಮಟ?

ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ವಿಶ್ವಮಾನ್ಯತೆಯ ಕನಸು ಚೇತನ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜು. 5: ಆದಿಲ್‌ಶಾಹಿ ವಾಸ್ತುಶಿಲ್ಪದ ಶ್ರೇಷ್ಠ ಮಾದರಿ, ವಿಶ್ವದ ಅತಿದೊಡ್ಡ ಗುಮ್ಮಟಗಳಲ್ಲಿ ಒಂದಾದ ಗೋಳಗುಮ್ಮಟ ಇಂದು ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿರುವ ಐತಿಹಾಸಿಕ ಸ್ಮಾರಕ. ಆದರೆ, ಹಲವು ದಶಕಗಳಿಂದ ಕೇಳಿಬರುತ್ತಿರುವ ಯುನೆಸ್ಕೋ (UNESCO) ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಅಧಿಕಾರಿಗಳ ನಿರಾಸಕ್ತಿ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಸಮನ್ವಯದ ಅಭಾವದಿಂದ ಈ ಮಹತ್ವಾಕಾಂಕ್ಷೆಯ ಯೋಜನೆ ವರ್ಷದಿಂದ ವರ್ಷಕ್ಕೆ ಮುಂದೂಡಲ್ಪಡುತ್ತಲೇ ಬಂದಿದೆ.ಗೋಳಗುಮ್ಮಟ…

Read More

ಉದ್ಘಾಟನೆ ಕಾಣದ ವಿಜಯಪುರ ವಿಮಾನ ನಿಲ್ದಾಣ: ಕೋಟ್ಯಾಂತರ ವೆಚ್ಚದ ಯೋಜನೆಗೆ ಇನ್ನೂ ಹಸಿರು ನಿಶಾನೆ ಇಲ್ಲ; ಉತ್ತರ ಕರ್ನಾಟಕದ ಜನರ ನಿರೀಕ್ಷೆ ಹುಸಿ

ಚೇತನ ಆಸಂಗಿ ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 26: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದರೂ ಇನ್ನೂ ಅಧಿಕೃತ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಪರಿಣಾಮವಾಗಿ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣ ಜನಸೇವೆಗೆ ತೆರೆದುಕೊಳ್ಳದೇ ಕಾಯುವ ಸ್ಥಿತಿಯಲ್ಲಿದೆ.ವಿಜಯಪುರ ಸೇರಿದಂತೆ ಬಾಗಲಕೋಟೆ, ಕಲಬುರಗಿ, ಯಾದಗಿರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ವಿಮಾನ ಸೇವೆ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ವಿವಿಧ ಆಡಳಿತಾತ್ಮಕ ಮತ್ತು ತಾಂತ್ರಿಕ ಪ್ರಕ್ರಿಯೆಗಳ ವಿಳಂಬದಿಂದ…

Read More

ಐತಿಹಾಸಿಕ ವಿಜಯಪುರದಲ್ಲಿ ಪಾರ್ಕಿಂಗ್ ಸಮಸ್ಯೆ: ವಾಹನ ಸವಾರರ ಪರದಾಟ, ಸಂಚಾರ ಅಸ್ತವ್ಯಸ್ತ

ನಗರಾಭಿವೃದ್ಧಿಗೆ ಸವಾಲಾದ ವಾಹನ ನಿಲುಗಡೆ ವ್ಯವಸ್ಥೆಯ ಕೊರತೆ. ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜೂ. 24: ಐತಿಹಾಸಿಕ ಸ್ಮಾರಕಗಳ ನಗರ, ವಿಶ್ವವಿಖ್ಯಾತ ಗೋಳಗುಮ್ಮಟ ಖ್ಯಾತಿಯಿಂದ ಜಗತ್ತಿನ ಗಮನ ಸೆಳೆದಿರುವ ವಿಜಯಪುರ ಮಹಾನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಾದರೂ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ನಾಗರಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಎಂ.ಜಿ.ರಸ್ತೆ, ಗಾಂಧಿ ಚೌಕ್, ಸಿದ್ಧೇಶ್ವರ ದೇವಸ್ಥಾನ ರಸ್ತೆ, ಸ್ಟೇಷನ್ ರಸ್ತೆ, ಮಿನಿ ವಿಧಾನಸೌಧ ಸುತ್ತಮುತ್ತ, ಸರ್ಕಾರಿ ಕಚೇರಿಗಳು ಹಾಗೂ…

Read More

ಮಳೆಗಾಲದಲ್ಲೂ ಬೇಸಿಗೆಯ ದಾಹ: ಮಳೆಯಿಲ್ಲದೆ ಕಂಗಾಲಾದ ರೈತರು, ಬಿಸಿಗಾಳಿಗೆ ತತ್ತರಿಸಿದ ಜನಜೀವನ

ವಿಶೇಷ ವರದಿಸಪ್ತಸಾಗರ ವಾರ್ತೆ, ವಿಜಯಪುರ, ಜೂ. 21:ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಮಳೆಗಾಲದ ವಾತಾವರಣ ನಿರ್ಮಾಣವಾಗಿ ಜನರಿಗೆ ಬೇಸಿಗೆಯ ಬಿಸಿಲಿನಿಂದ ನಿರಾಳತೆ ಸಿಗಬೇಕು. ಆದರೆ ಈ ಬಾರಿ ಜಿಲ್ಲೆಯಾದ್ಯಂತ ಚಿತ್ರಣವೇ ಬೇರೆಯಾಗಿದೆ. ರೋಹಿಣಿ ಮತ್ತು ಮೃಗಶಿರ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದು, ಮತ್ತೊಂದೆಡೆ ಮಳೆಗಾಲದಲ್ಲೂ ಮುಂದುವರಿದಿರುವ ತೀವ್ರ ಉಷ್ಣಾಂಶ ಜನಜೀವನವನ್ನು ಹೈರಾಣಗೊಳಿಸಿದೆ. ಕೈ ಎತ್ತಿ ಆಕಾಶ ನೋಡುವ ರೈತರು ರೋಹಿಣಿ ಮತ್ತು ಮೃಗಶಿರ ಮಳೆ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಈ…

Read More

ಗಾಂಧಿ ವೃತ್ತದಲ್ಲಿ ಸಿಗ್ನಲ್ ಕೆಳಗೇ ಆಟೋ ಹಾಗೂ ಸಿಟಿ ಬಸ್ ನಿಲುಗಡೆಗೆ ಅವಕಾಶ: ಸಾರ್ವಜನಿಕರ ಆಕ್ರೋಶ

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜೂ. 20:ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಗಾಂಧಿ ವೃತ್ತದಲ್ಲಿ ಸಿಗ್ನಲ್ ವ್ಯವಸ್ಥೆ ಇದ್ದರೂ, ಅದರ ಕೆಳಭಾಗದಲ್ಲೇ ಆಟೋ ರಿಕ್ಷಾ ಹಾಗೂ ಸಿಟಿ ಬಸ್‌ಗಳ ನಿಲುಗಡೆ ವ್ಯವಸ್ಥೆ ಮಾಡಿರುವುದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ಇದರಿಂದ ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಗಾಂಧಿ ವೃತ್ತವು ನಗರದ ಹೃದಯಭಾಗವಾಗಿದ್ದು, ಇಲ್ಲಿಂದ ವಿವಿಧ ಪ್ರದೇಶಗಳಿಗೆ ವಾಹನಗಳು ಸಂಚರಿಸುತ್ತವೆ. ಆದರೆ ಸಿಗ್ನಲ್ ಸಮೀಪವೇ ಆಟೋಗಳ ನಿಲುಗಡೆ ಮತ್ತು ಪ್ರಯಾಣಿಕರ ಏರಿಳಿತ ನಡೆಯುತ್ತಿರುವುದರಿಂದ ವಾಹನಗಳ…

Read More