ಸೌಹಾರ್ದಯುತವಾಗಿಮಾರುಕಟ್ಟೆಸಮಸ್ಯೆಇತ್ಯರ್ಥ-ಸಚಿವಶಿವಾನಂದಪಾಟೀಲ
ಸಪ್ತಸಾಗರ ವಾರ್ತೆ, ಬೆಳಗಾವಿ, ಫೆ. 8: ಜೈಕಿಸಾನ್ ಮಾರುಕಟ್ಟೆ ಸಮಸ್ಯೆ ಏನಿದೆ ಎಂದು ಪರಿಶೀಲಿಸಿ, ಜಿಲ್ಲೆಯ ಸಚಿವರು, ಸ್ಥಳೀಯ ಶಾಸಕರ ಜೊತೆ ಸೇರಿ ಚರ್ಚಿಸಿ ಸೌಹಾರ್ದಯುತ ರೀತಿಯಲ್ಲಿ ಇತ್ಯರ್ಥ ಮಾಡುವುದಾಗಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಭಾನುವಾರ ಬೆಳಗಾವಿ ಮಹಾನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಅಭಿವೃದ್ಧಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ತರಕಾರಿ ತಂದು ಮಾರುವವರೂ, ರೈತರು,…


