Blog
Your blog category
ತಿಂಥಣಿ ಜಾತ್ರೆ: ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ,ಜ.28:ಯಾದಗಿರಿ ಜಿಲ್ಲೆಯ ತಿಂಥಣಿಯಲ್ಲಿ ಶ್ರೀ ಮೌನೇಶ್ವರ ಜಾತ್ರೆಯು ಜ.28 ರಿಂದ ಫೆ.3ರವರೆಗೆ ಜರುಗಲಿದೆ.ಜಾತ್ರೆಗೆ ತೆರಳುವ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ವಿಜಯಪುರ ವಿಭಾಗದ ಸಿಂದಗಿ, ಮುದ್ದೇಬಿಹಾಳ ಮತ್ತು ತಾಳಿಕೋಟೆ ಬಸ್ ನಿಲ್ದಾಣಗಳಿಂದ ವಿಶೇಷ ಬಸ್ ಸಾರಿಗೆ ಕಾರ್ಯಾಚರಣೆ ಮಾಡಲಿವೆ.ಪ್ರಯಾಣಿಕರು ಈ ಬಸ್ ಸಾರಿಗೆ ಉಪಯೋಗ ಪಡೆದುಕೊಳ್ಳಬಹುದು. ಸಾರಿಗೆ ಸೌಲಭ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಿಂದಗಿ ಘಟಕ ವ್ಯವಸ್ಥಾಪಕರು ಮೊ.7760992266, ಮುದ್ದೇಬಿಹಾಳದ ಘಟಕ ವ್ಯವಸ್ಥಾಪಕರ…
ಹೋರಾಟಗಾರರ ಬಂಧನ:ಎಐಯುಟಿಯುಸಿ ಕಾರ್ಮಿಕ ಸಂಘಟನೆ ಖಂಡನೆ
ಸಪ್ತ ಸಾಗರ ವಾರ್ತೆ, ವಿಜಯಪುರ, ಜ. 2: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸಲು ಮುಂದಾದ ಹೋರಾಟಗಾರರನ್ನು ಬಂಧಿಸಿ, ಸುಳ್ಳು ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.ಪಿಪಿಪಿ ಮಾದರಿಯ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಹೋರಾಟ ಸಮಿತಿಯಿಂದ ನಿರಂತರವಾಗಿ ೧೦೦ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಯುತ್ತಿತ್ತು. ನಿನ್ನೆ ಹೋರಾಟದ ಮುಂದುವರೆದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ…
ಭಾರತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮರು ಪರಾಮರ್ಶೆಗೆ ಮನವಿ
ಸಪ್ತಸಾಗರ ವಾರ್ತೆ ವಿಜಯಪುರ, ಡಿ. 15:ಕಳೆದ ಕೆಲವು ದಿನಗಳ ಹಿಂದೆ ಭಾರತ ಸರ್ವೋಚ್ಚ ನ್ಯಾಯಾಲಯವು ತಂದೆ ಪರಿಶಿಷ್ಟ ಜಾತಿ ಅಲ್ಲದಿದ್ದರೂ ತಾಯಿ ಪರಿಶಿಷ್ಟ ಜಾತಿ ಸೇರಿದ್ದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಒದಗಿಸಬೇಕೆಂದು ಆದೇಶ ನೀಡಿದ್ದನ್ನು ಸುಪ್ರೀಂ ಕೋರ್ಟ್ ಮತ್ತೆ ಪರಾಮರ್ಶಿಸಬೇಕು ಎಂದು ಭೀಮ ಸರಕಾರ ಸಂಘಟನೆ ಮನವಿ ಸಲ್ಲಿಸಿದೆ.ಈ ತೀರ್ಪಿನಿಂದ ನಿಜ ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯಾಗುತ್ತದೆ. ಜೊತೆಗೆ ಸರ್ವೋಚ್ಛ ನ್ಯಾಯಾಲಯದ ಆದೇಶ ದುರುಪಯೋಗ ಆಗುವ ಸಾಧ್ಯತೆ ಇದ್ದು, ಈ ನ್ಯಾಯಾಲಯದ ಆದೇಶವನ್ನು…
ರೈತರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಿದ್ದರಾಮಯ್ಯ ಭರವಸೆ
ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 11: ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲಾ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ನಮ್ಮ ಸರ್ಕಾರ ಬಂದ ಬಳಿಕ ಪ್ರತಿಲೀಟರ್ ಹಾಲಿಗೆ ರೂ.5 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಖರೀದಿಗೆ ರೂ.5ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿದ್ದೇವೆ ಎಂದರು.ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸವನ್ನು ತಪ್ಪಿಸಲು, ಇಳುವರಿ ನಿಗದಿಯನ್ನು…
ಕೌಶಲ್ಯಾಭಿವೃದ್ಧಿ ಇಂದಿನ ಅಗತ್ಯ: ಶಂಕರಗೌಡ ಸೋಮನಾಳ
ಸಪ್ತ ಸಾಗರ ವಾರ್ತೆ ವಿಜಯಪುರ, ಡಿ. 9: ಆಧುನಿಕ ಶಿಕ್ಷಣದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯನ್ನು ಹೊಂದುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ, ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ, ಪರೀಕ್ಷೆ ವಿಭಾಗ ಹಾಗೂ ಐಕ್ಯೂಎಸಿ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್’ ಎಂಬ ವಿಷಯದ ಕುರಿತು ಒಂದು ದಿನದ ಕಾರ‍್ಯಾಗಾರವನ್ನು ಉದ್ಘಾಟಿಸಿ ಅವರು…
ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಶಿಕ್ಷಕನ ವಿರುದ್ಧ ಕಾನೂನು ಕ್ರಮ : ಸಂಗಮೇಶ ಬಬಲೇಶ್ವರ
Legal action against teacher for assaulting student: Sangamesh Babaleshwar
ಸೆ.15 ರಂದುವಿದ್ಯುತ್ಪೂರೈಕೆಯಲ್ಲಿವ್ಯತ್ಯಯ
ಸಪ್ತಸಾಗರ ವಾರ್ತೆ ವಿಜಯಪುರ,ಸೆ.13 :ನವರಸಪುರ ಶಾಖಾ ವ್ಯಾಪ್ತಿಯಲ್ಲಿ ಹೆಚ್.ಟಿ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಸೇನಾ ನಗರ ಫೀಡರ್‌ನ ಮೇಲೆ ಬರುವ ಟ್ರೇಝರಿ ಕಾಲೋನಿ, ರಾಮದೇವ ನಗರ,ಅಯ್ಯಪ್ಪ ಸ್ವಾಮಿ ದೇವಸ್ಥಾನ,ಇಟಗಿ ಕಾಲೋನಿ, ವೇದಾಂತ ಹಾಸ್ಪಿಟಲ್, ನಿಂಬರಗಿ ಬಡಾವಣೆ, ಕುಲಕರ್ಣಿ ಲೇಔಟ್, ಖುರೇಷಿ ಕಾಲೋನಿ ಹತ್ತಿರದ ಪ್ರದೇಶಗಳಲ್ಲಿ ಸೆ.15ರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಮರ್ಪಣಾ ಭಾವನೆಯಿಂದ ಸೇವೆ ಸಲ್ಲಿಸಿ: ಪ್ರೊ. ಸಿ. ಎಸ್. ಪಾಟೀಲ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 8: ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಸಮರ್ಪಣೆ ಮನೋಭಾವದಿಂದ ಸೇವೆ ಮಾಡುವ ಮೂಲಕ ನ್ಯಾಯ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದು ಬೆಂಗಳೂರಿನ ಕರ್ನಾಟಕ ಸಂಸದೀಯ ಸುಧಾರಣೆ ಸಂಸ್ಥೆ(ಕೆ.ಐ.ಎಲ್.ಪಿ.ಏ.ಆರ್) ನಿರ್ದೇಶಕ ಪ್ರೊ. ಸಿ. ಎಸ್. ಪಾಟೀಲ ಹೇಳಿದ್ದಾರೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು…


