ನಾಡ ಹಬ್ಬ ಮೈಸೂರು ದಸರಾಕ್ಕೆ ಡಿಸಿಎಂ ಡಿಕೆಶಿ ಅವರಿಗೆ ಆಮಂತ್ರಣ
ಸಪ್ತಸಾಗರ ವಾರ್ತೆ ಬೆಂಗಳೂರು, ಸೆ. 4: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಆಗಮಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ ರೆಡ್ಡಿ, ಸಿಇಒ ಮುಖೇಶಕುಮಾರ್, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಸ್.ಪಿ. ವಿಷ್ಣುವರ್ಧನ್, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಅವರನ್ನು ಒಳಗೊಂಡ ನಿಯೋಗವು ವಿಧಾನಸೌಧದಲ್ಲಿ ಗುರುವಾರ ಆಹ್ವಾನ ಪತ್ರ ನೀಡಿತು.


