ರೈಲುಗಳ ಸೇವೆ ಪುನರಾರಂಭ
ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಮಾ. 23:ವಂದಾಲ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಎಲ್‌ಸಿ ಸಂಖ್ಯೆ 62) ಕಾಮಗಾರಿಗಳ ಹಿನ್ನೆಲೆ ಭಾಗಶಃ ರದ್ದುಗೊಂಡಿದ್ದ ಕೆಳಕಂಡ ರೈಲುಗಳನ್ನು ಇದೀಗ ತಮ್ಮ ನಿಯಮಿತ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ಪುನಃಸ್ಥಾಪಿಸಲಾಗಿದೆ.ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ ವಿಶೇಷ ರೈಲು, ಮಾರ್ಚ್ 24ರಂದು, ಬಾಗಲಕೋಟೆ–ವಿಜಯಪುರ ನಡುವಿನ ಭಾಗಶಃ ರದ್ದತಿ ಹಾಗೂ ಬಾಗಲಕೋಟೆಯಲ್ಲಿ ಅಂತ್ಯಗೊಳ್ಳುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲು ತನ್ನ ಪೂರ್ಣ ನಿಯಮಿತ ಮಾರ್ಗವಾದ ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರದವರೆಗೆ ಸಂಚರಿಸಲಿದೆ.ಅದೇ…


