ಪ್ರೀತಿಸುವಂತೆ ಅಪ್ರಾಪ್ತ ಬಾಲಕಿಗೆ ಯುವಕನ ಕಿರುಕುಳ: ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ
ಸಪ್ತಸಾಗರ ವಾರ್ತೆ, ವಿಜಯಪುರ, ಅ. 15:ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯುವಕನೋರ್ವ ಪ್ರೀತಿಸುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಾಳಿಂಗರಾಯ ದ್ಯಾಮಣ್ಣ ದಂಡೋಜಿ, ಶಿವನಗೌಡ ಚನ್ನಪ್ಪಗೌಡ ಬಿರಾದಾರ, ಜುಮ್ಮಣ್ಣ ದಳವಾಯಿ ಬಂಧಿತ ಆರೋಪಿಗಳು.ಈ ಆರೋಪಿಗಳ ಪೈಕಿ ಮಾಳಿಂಗರಾಯ ದಂಡೋಜಿ ಈತ ಅಪ್ರಾಪ್ತೆಯನ್ನು ಪ್ರೀತಿಸಿ, ನನ್ನನ್ನೆ ಮದುವೆ ಆಗು ಎಂದು ಕೆಲ ದಿನಗಳಿಂದ ಪೀಡಿಸುತ್ತಿದ್ದ. ಈ ವಿಷಯ ಬಾಲಕಿ ತಂದೆ ತಾಯಿಗೆ…


