ಶ್ರೀಲಂಕಾದಲ್ಲಿ ವಿಜಯಪುರದ ನಾಟ್ಯಕಲಾ ನೃತ್ಯ ಅಕಾಡೆಮಿ ತಂಡದ ನೃತ್ಯ ಪ್ರದರ್ಶನ

ಸಪ್ತಸಾಗರ ವಾರ್ತೆ, ವಿಜಯಪುರ, ನ.೨೦: ಇಲ್ಲಿಯ ನಾಟ್ಯಕಲಾ ನೃತ್ಯ ಅಕಾಡೆಮಿ ತಂಡ ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದೆ.ನವೆಂಬರ್ ೧೫ರಿಂದ ೧೮ ರ ವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ನೃತ್ಯ ಸಮರ್ಪಣ- ೨೦೨೫ ಉತ್ಸವದಲ್ಲಿ ತಂಡದ ಸದಸ್ಯರು ರೋಮಾಂಚನಕಾರಿ ನೃತ್ಯ ಪ್ರದರ್ಶನ ನೀಡಿದರು.ತಂಡದ ಸದಸ್ಯೆ ಸಾನ್ವಿ ದೊಡಮನಿ ಅವರು ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸನ್‌ಫೊ ಗ್ಲೋಬಲ್ ಫೆಡರೇಶನ್ ಸಸ್ಟೇನಬಿಲಿಟಿ ಕಲ್ಚರಲ್ ಡಿಪ್ಲೊಮಸಿ ಪ್ರಶಸ್ತಿ (ಯುನೈಟೆಡ್ ರಿಪಬ್ಲಿಕ್ ಆಫ್ ಇಂಡಿಯಾ ಮತ್ತು ಡೆಮಾಕ್ರಟಿಕ್ ಸೋಷಿಯಲಿಸ್ಟ್…

Read More

ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಭುವನೇಶ್ವರಿ ಮಠಪತಿ ನೇಮಕ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20:ನಗರದ ಭುವನೇಶ್ವರಿ ದಾನಯ್ಯ ಮಠಪತಿ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಆದೇಶದ ಮೇರೆಗೆ ವಿಜಯಪುರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮಿಜಾ ನದಾಫ ಅವರು ತಕ್ಷಣ ಜಾರಿಗೆ ಬರುವಂತೆ ಈ ನೇಮಕ ಮಾಡಿ ಆದೇಶಿಸಿದ್ದಾರೆ.

Read More

ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಮುರುಗೋಡಕ್ಕೆ ಪಾದಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20 : ಶ್ರೀ ಕ್ಷೇತ್ರ ಕೆಂಗೇರಿ ಮುರಗೋಡದಲ್ಲಿ ಶ್ರೀ ಶಿವ ಚಿದಂಬರ ಮಹಾಸ್ವಾಮಿಗಳ ೨೬೭ ನೇ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವ ನ.೨೬ ರಂದು ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೊಳ್ಳಲು ನಗರದ ಚಿದಂಬರ ದೇವಸ್ಥಾನದಿಂದ ಭಕ್ತರು ಪಾದಯಾತ್ರೆ ಬೆಳೆಸಿದರು.ನಗರದ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯಲ್ಲಿ ತೆರಳಿದ ಭಕ್ತರು ವಿಜಯಪುರ ನಗರದಿಂದ ಹಲಗಣಿ, ಮುಧೋಳ, ಯರಗಟ್ಟಿ, ಹಲಕಿ ಕ್ರಾಸ್ ಮೂಲಕ ನ. ೨೬ ಕ್ಕೆ ಶ್ರೀ ಕ್ಷೇತ್ರ ತಲುಪಲಿದ್ದಾರೆ.ಈ ಪಾದಯಾತ್ರೆಯಲ್ಲಿ…

Read More

ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಜಿಗಜಿಣಗಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20 :ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಅವರ ಈ ದರಿದ್ರ ರಾಜಕಾರಣದಿಂದ ಕರ್ನಾಟಕ ಜನತೆಗೆ ಶಾಪವಾಗಿ ಪರಿಗಣಿಸಿದೆ. ಇನ್ನೂ ಗೃಹ ಸಚಿವರು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಸಂಪೂರ್ಣ ಹಾಳಾಗಿದೆ. ಹಾಡಹಗಲೇ ಕೊಲೆ, ಸುಲಿಗೆ ನಡೆಯುತ್ತಿವೆ….

Read More

ಕಾನಿಪ ಸಂಘದ ಸದಸ್ಯರಿಗೆನೇತ್ರ ಚಿಕಿತ್ಸೆ ಉಚಿತ : ಡಾ. ಪ್ರಭುಗೌಡ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20:ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಕರ್ತರು ಆಧುನಿಕ ಸಮಾಜದ ಕೈಗನ್ನಡಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆಂದು ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ ಬಣ್ಣಿಸಿದರು.ನಗರದ ತಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಭಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ತಮ್ಮ ಲೇಖನಿಯ ಮೂಲಕ ಸಮಾಜದ ಕಣ್ತೆರೆಸುವ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಕಣ್ಣುಗಳ ರಕ್ಷಣೆಗಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಸದಸ್ಯರಿಗೆ ಶೀಘ್ರದಲ್ಲಿಯೇ ’ಫ್ಯಾಮಿಲಿ ಕಾರ್ಡ್’ ಮಾಡಿಕೊಡುವುದಾಗಿ ತಿಳಿಸಿದ…

Read More

ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾಗಿ ಸಾಹಿತಿ ಪ್ರೊ, ಅಡವಿಸ್ವಾಮಿ ಕೊಳಮಲಿ ನೇಮಕ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20:ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾಗಿ ಸಾಹಿತಿ ಪ್ರೊ ಅಡವಿಸ್ವಾಮಿ ಕೊಳಮಲಿ ಸೇರಿದಂತೆ ಜಿಲ್ಲೆಯ ಹತ್ತು ಜನ ಸದಸ್ಯರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯದ ಜಾಗೃತಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ, ಮಾನಸ ಅವರು ಇಂದು ವಿಜಯಪುರದ ತೊರವಿ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ…

Read More

ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯ:ಗೋಲಶೆಟ್ಟಿ ಆರೋಪ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20 : ಉತ್ತರ ಕರ್ನಾಟಕಕ್ಕೆ ನಿತ್ಯ ಅನ್ಯಾಯವಾಗುತ್ತಿದೆ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯ ಹೋರಾಟವನ್ನು ನಾವು ಇನ್ನಷ್ಟೂ ತೀವ್ರಗೊಳಿಸಲಿದ್ದೇವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ ಗೋಲಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಡು ವಿಭಜನೆ ಮಾಡುತ್ತಿಲ್ಲ, ಇದು ವಿಭಜನೆಯಲ್ಲ, ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾದ ಸಂಪನ್ಮೂಲಗಳಿದ್ದರೂ ಉ.ಕ….

Read More

ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಪುನೀತ್ ಬಿರಾದಾರ ರಾಜ್ಯಮಟ್ಟಕ್ಕೆ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20:ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಜಯಪುರ ಹಾಗೂ ಕೋನಿಕ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ 2025-26ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪುನೀತ್ ಬಿರಾದಾರ 1 ಕಿಮೀ ಟ್ರ್ಯಾಕ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ…

Read More

ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿಯವರ ೧೦೮ನೇ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 19:ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ೧೦೮ನೇ ಜಯಂತಿಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು, ಇಂದಿರಾಗಾಂಧಿಯವರು ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರಧಾನ ಮಂತ್ರಿಯಾಗಿದ್ದರು. ತಮ್ಮ ಅವಧಿಯಲ್ಲಿ ಅವರು ಮಾಡಿದಂತಹ ಕಾರ್ಯಗಳು ಎಂದೆಂದಿಗೂ ಅಜರಾಮರವಾಗಿರುತ್ತವೆ. ದೀನದಲಿತರಿಗೆ, ಬಡವರಿಗೆ, ಮಹಿಳೆಯರಿಗೆ, ಸೈನಿಕರಿಗೆ, ರೈತರಿಗೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡಿದ್ದಾರೆ. ಉಳುವವನೇ ಭೂಮಿ…

Read More

ಕಗ್ಗೋಡದಲ್ಲಿ ಉನ್ನತ ಧ್ಯಾನ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ನ.19: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಗುರುಗಳು ಡಾ. ಬಿ.ಎಂ. ಪಾಟೀಲ ಗುರೂಜಿಯವರ ನೇತೃತ್ವದಲ್ಲಿ ಉನ್ನತ ಧ್ಯಾನ ಶಿಬಿರವು ರಾಮನಗೌಡ ಪಾಟೀಲ (ಯತ್ನಾಳ್) ಗೋ ರಕ್ಷಾ ಕೇಂದ್ರ ಕಗ್ಗೋಡದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.ಕಾರ್ಯಕ್ರಮದಲ್ಲಿ ಡಾ. ಬಿ ಎಂ. ಪಾಟೀಲ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿ, ಇಂದಿನ ಒತ್ತಡದ ಜೀವನದಲ್ಲಿ, ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಲ್ಲರೂ ನೆಮ್ಮದಿಯಿಂದ ನಗು – ನಗುತ್ತಾ ಜೀವಿಸುವುದು. ಯೋಗದ ಜೊತೆಗೆ ಧ್ಯಾನ ಮುಖ್ಯ….

Read More