ವಿಕಸಿತ ಭಾರತಕ್ಕಾಗಿ ತಪ್ಪದೇ ಮತದಾನ‌ ಮಾಡಿ: ಡಾ ಔದ್ರಾಮ, ಅಪರ ಜಿಲ್ಲಾಧಿಕಾರಿಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜ. 29: ಪ್ರತಿಯೊಂದು ಮತದಾನ ದೇಶಕಟ್ಟುವ ಮಹಾತ್ ಕಾರ್ಯಕ್ಕೆ ಮುನ್ನುಡಿ ಎಂದುವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರು ತಿಳಿಸಿದ್ದಾರೆ.ಭಾರತ ಸರ್ಕಾರದ ಮೇರಾ ಯುವ ಭಾರತ ಕೇಂದ್ರ, ಜಿಲ್ಲಾಡಳಿತ, ಕೇಂದ್ರ ಸಂವಹನ ಇಲಾಖೆ, ಬಿ ಎಲ್‌ ಡಿ ಇ ಎ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯ, ಎನ್‌ಎಸ್‌ಎಸ್‌ ಘಟಕ, ಭಾರತ ಸೇವಾ ದಳ, ರೆಡ್‌ ಕ್ರಾಸ್‌ ಘಟಕ, ವಿಜಯಪುರ ಮತ್ತು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕ್ರತಿಕ ಕ್ರೀಡಾ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿ…

Read More

ಗುಡುಗು-ಸಿಡಿಲು ಪರಿಣಾಮ ತಗ್ಗಿಸಲು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಡಿಸಿ ಸೂಚನೆ

ಸಪ್ತಸಾಗರ ವಾರ್ತೆ, ವಿಜಯಪುರ,ಜ.29: ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ-ಸೂಚನೆಗಳನ್ನು ಜಿಲ್ಲೆಯಾದ್ಯಂತ ಪಾಲಿಸುವಂತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಮಳೆಯಿಂದಾಗುವ ಹಾನಿ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗುಡುಗು ಮತ್ತು ಸಿಡಿಲಿನ ಅಪಾಯ ತಗ್ಗಿಸಲು ಸಾಮಾನ್ಯವಾಗಿ…

Read More

ಕಗ್ಗೋಡದಲ್ಲಿ ಗೋರಕ್ಷಾ ಕೇಂದ್ರದಮಹಾದ್ವಾರ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 29:ಕಗ್ಗೋಡದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರ ಶ್ರೀ ಸಿದ್ಧೇಶ್ವರ ಸಂಸ್ಥೆಯ ನಿರ್ದೇಶಕ ಸಾಯಿಬಣ್ಣ ಎಸ್ ಬೋವಿ. ಇವರ ಕುಟುಂಬದವರಿಂದ ಮಹಾದ್ವಾರ ನಿರ್ಮಿಸಿದ್ದು, ಮಹಾದ್ವಾರದ ಉದ್ಘಾಟನೆಯನ್ನು ಗೋಮಾತೆಯ ಪೂಜೆಯೊಂದಿಗೆ ವಿಜಯಪುರ ನಗರ ಶಾಸಕ ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಅವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ಎಚ್. ದೇಸಾಯಿ,…

Read More

ಒತ್ತಡದ ಬದುಕಿಗೆ ಆಟೋಟ ಹಾಗೂ ಸಾಂಸ್ಕೃತಿಕವಾಗಿ ತೊಡಗಿಕೊಸಿಳ್ಳಿ- ಮಡಿವಾಳಪ್ಪ ಕರಡಿ

ಸಪ್ತಸಾಗರ ವಾರ್ತೆ, ವಿಜಯಪುರ,ಜ.29: ಒತ್ತಡದ ಜೀವನ ಶೈಲಿಯಲ್ಲಿ ಕ್ರೀಡೆ ಅತ್ಯಮೂಲ್ಯ ಸಾಧನ ಸದೃಢ ಆರೋಗ್ಯ ಹೊಂದಿ ಕ್ರೀಯಾಶೀಲತೆ ಮೈಗೂಢಿಸಿಕೊಂಡು ನೆಮ್ಮದಿ ಹಾಗೂ ಉಲ್ಲಸಿತವಾಗಿರಲು ಆಟೋಟ ಹಾಗೂ ಸಾಂಸ್ಕೃತಿಕವಾಗಿ ತೊಡಗಿಕೊಳ್ಳುವುದು ಅಗತ್ಯವಾಗಿದೆ ಎಂದು ಮೇಯರ್ ಮಡಿವಾಳಪ್ಪ ಕರಡಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ…

Read More

ಪ್ರಿಸಿಶನ್ ಕ್ಯಾಮ್‌ಶಾಫ್ಟ್ ಇಂಡಿಯಾ ಲಿಮಿಟೆಡ್‌ಗೆ ವಿದ್ಯಾರ್ಥಿಗಳ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 29:ಕ್ಯಾಂಪಸ್ ಡ್ರೈವ್‌ನಲ್ಲಿ 24 ವಿದ್ಯಾರ್ಥಿಗಳು ಪ್ರಿಸಿಶನ್ ಕ್ಯಾಮ್‌ಶಾಫ್ಟ್ ಇಂಡಿಯಾ ಲಿಮಿಟೆಡ್‌ಗೆ ಆಯ್ಕೆಯಾಗಿದ್ದಾರೆ.ಬಿಎಲ್‌ಡಿಇ ಸಂಸ್ಥೆ ಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಜನವರಿ 20 ರಂದು ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿತು. ಒಟ್ಟು 24 ವಿದ್ಯಾರ್ಥಿಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ -18 ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ – 06 ವಿದ್ಯಾರ್ಥಿಗಳು ಪ್ರಿಸಿಶನ್ ಕ್ಯಾಮ್‌ಶಾಫ್ಟ್ ಇಂಡಿಯಾ ಲಿಮಿಟೆಡ್‌ನಿಂದ ಮೆಷಿನ್ ಶಾಪ್ ಎಂಜಿನಿಯರ್‌ಗಳಾಗಿ ನೇಮಕಗೊಂಡಿದ್ದಾರೆ,…

Read More

ಪುಸ್ತಕಗಳು ಮಾನವ ಜನಾಂಗದ ಆಸ್ತಿಯಾಗಬೇಕು: ಡಾ ಮಾನಸ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:ಪುಸ್ತಕಗಳು ಮಾನವ ಜನಾಂಗದ ಆಸ್ತಿಯಾಗಬೇಕು. ಪ್ರತಿಯೊಂದು ಮನೆಯಲ್ಲಿ ದೇವರ ಪೂಜಾ ಕೋಣೆ ಇರುವಂತೆ ಮನೆಗೊಂದು ಗ್ರಂಥಾಲಯವಿದ್ದರೆ ಆ ಮನೆ ಜ್ಞಾನದ ಸಂಪತ್ತಿನಿಂದ ಕೂಡುತ್ತದೆ. ಯುವ ಜನಾಂಗಕ್ಕೆ ದಾರಿದೀಪವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಮಾನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ ಎಂದು ನುಡಿದರು.ಬುಧವಾರ ವಿಜಯಪುರ ನಗರದ ಸುಕೂನ್ ಬಡಾವಣೆಯ ಲೇಖಕ ರಾಮಕುಮಾರ ಅವರ ಮನೆಯಲ್ಲಿ ಪ್ರಾಧಿಕಾರದ ಯೋಜನೆಯಲ್ಲಿಯೆ…

Read More

ಮಹಿಳಾ ವಿವಿಯಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿರುವ ಎಲ್ಲಾ ಎನ್.ಎಸ್.ಎಸ್. ಘಟಕಗಳ ವತಿಯಿಂದ ವಿವಿಯ ಸಿಂಡಿಕೇಟ್ ಸಭಾಭವನದಲ್ಲಿ ಇತ್ತೀಚಿಗೆ “ರಾಷ್ಟ್ರೀಯ ಮತದಾರರ ದಿನಾಚರಣೆ”ಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಷಾ ನಿಕಾಯದ ಡೀನ್ ಪ್ರೊ. ನಾಮದೇವ ಗೌಡ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಅಶೋಕಕುಮಾರ ಸುರಪುರ, ಡಾ. ಚಂದ್ರಶೇಖರ ಮಠಪತಿ, ಎನ್.ಎಸ್.ಎಸ್‌ನ ವಿವಿಧ ಘಟಕಗಳ ಕಾರ್ಯಕ್ರಮ ಅಧಿಕಾರಿ ಡಾ.ಪ್ರಕಾಶ ಸಣ್ಣಕ್ಕನವರ, ಡಾ.ಅಮರನಾಥ ಪ್ರಜಾಪತಿ, ಡಾ.ಗುಲಾಬ ರಾಠೋಡ, ಡಾ.ಭಾಗ್ಯಶ್ರೀ ದೊಡಮನಿ ಹಾಗೂ ವಿಶ್ವವಿದ್ಯಾನಿಲಯದ ಬೋಧಕ, ಬೋಧಕೇತರ…

Read More

ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸೇವೆಗಳನ್ನು ಓಡಿಸಲು ನಿರ್ಧರಿಸಿದೆ.ರೈಲು ಸಂಖ್ಯೆ 06503 ಎಸ್.ಎಂ.ವಿ.ಟಿ. ಬೆಂಗಳೂರು – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಫೆ.13 ರಂದು ರಾತ್ರಿ 7.15 ಕ್ಕೆ ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 7.15 ಗಂಟೆಗೆ ವಿಜಯಪುರವನ್ನು ತಲುಪಲಿದೆ.ರೈಲು ಸಂಖ್ಯೆ 06504 ವಿಜಯಪುರ – ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು…

Read More

ಚಡಚಣ ತಾಲೂಕಿಗೆ ಜಿಲ್ಲಾಧಿಕಾರಿ ಡಾ. ಆನಂದ ದಿಢೀರ ಭೇಟಿ,ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ,ಜ.28: ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಬುಧವಾರ ದಿಢೀರಾಗಿ ಚಡಚಣ ತಾಲೂಕಿನ ವಿವಿಧ ತಾಲೂಕಾ ಕಚೇರಿಗಳಿಗೆ ಭೇಟಿ ನೀಡಿ ಕಚೇರಿಯಲ್ಲಿನ ಕಾರ್ಯ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.ಚಡಚಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ, ವೈದ್ಯಕೀಯ ಉಪಚಾರ ಒದಗಿಸುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿಯ ಕುರಿತು ಸರಕಾರಕ್ಕೆ ಗಮನಕ್ಕೆ…

Read More

ದೇವಾಲಯದ ಗಂಟೆಗಳಿಗಿಂತ ಶಾಲೆಯ ಗಂಟೆಗಳ ಸಂಖ್ಯೆ ಹೆಚ್ಚಾದಾಗಲೇ ಬಡ ಮಕ್ಕಳಿಗೆ ಅವಕಾಶಗಳು ಸಿಗುತ್ತವೆ – ಶ್ರೀನಾಥ ಪೂಜಾರಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:ವಿಜಯಪುರ ನಗರದಲ್ಲಿರುವ ಖಾಸಗಿ ಸಂಸ್ಥೆಯಾದ ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಓದಿ ವಿವಿಧ ಸರ್ಕಾರಿ ಉದ್ಯೋಗಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಅಭ್ಯಾಸ ಮಾಡಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ CISF, BSF ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಉದ್ಯೋಗಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಗ್ರಂಥಾಲಯದ ಮುಖ್ಯಸ್ಥರಾದ ಹುಚ್ಚಪ್ಪ ಅವರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಓದಿದ…

Read More