ಬಿಎಲ್ ಡಿಇ ಆಸ್ಪತ್ರೆಗೆ ದೇಹದಾನ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 26: ಜಿಲ್ಲೆಯಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು, ಸಿಂದಗಿ ತಾಲೂಕಿನ‌ ಹಂದಿಗನೂರು ಗ್ರಾಮದ ಮಹಾದೇವಪ್ಪ ಗುರುಬಸಪ್ಪ ಮುಳವಾಡ(82) ಅವರ ಮೃತದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.82 ವರ್ಷದ ಮಹಾದೇವಪ್ಪ ಗುರುಬಸಪ್ಪ ಮುಳವಾಡ ಅವರು ಏಪ್ರಿಲ್ 24 ರಂದು ಶುಕ್ರವಾರ ನಿಧನರಾಗಿದ್ದು. ಮೃತರ ಇಚ್ಛೆಯಂತೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.ಈ‌ ಸಂದರ್ಭದಲ್ಲಿ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕುಟುಂಬಸ್ಥರಿಗೆ ಕೃತಜ್ಞತೆ…

Read More

ಎಸ್ಸೆಸ್ಸೆಲ್ಸಿ ಫಲಿತಾಂಶ:ಸಿ.ಎಸ್.ಬಿರಾದಾರ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 25:ಸಿ.ಎಸ್. ಬಿರಾದಾರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ಕುಮಾರ ರೋಹನ್ ರಾಠೋಡ625 ಕ್ಕೆ 578 ಅಂಕ ಗಳಿಸಿ (ಶೇ.92.48) ಪ್ರಥಮ ಸ್ಥಾನ, ಕುಮಾರಿ ಪ್ರೀತಿ ಮಾನೆ625 ಕ್ಕೆ 562 Pets ಗಳಿಸಿ (ಶೇ.89.92) ದ್ವಿತೀಯ ಸ್ಥಾನ,ಕುಮಾರ,ಸಮೀರ್ ಮುಲ್ಲಾ{625 ಕ್ಕೆ 559 ಅಂಕ (ಶೇ.89.44) ಗಳಿಸಿ ತೃತೀಯ ಸ್ಥಾನ,ಕುಮಾರಿ ಸಾಕ್ಷಿ ಮಮದಾಪುರ625 ಕ್ಕೆ 547 (ಶೇ.87.52),ಕುಮಾರಿ , ಮಾಯಾ ಲಮಾಣಿ625 ಕ್ಕೆ 541 ಅಂಕ ಗಳಿಸಿದ್ದು, ಶೇ.86.44ರಷ್ಟು ಸಾಧನೆ…

Read More

ಬಿ. ಎಲ್. ಡಿ. ಇ. ಎ ಕ್ರಿಕೆಟ್ ಕಪ್-2026 ಅಂತರ ಪದವಿ ಮಹಾವಿದ್ಯಾಲಯ ಪಂದ್ಯಾವಳಿಯಲ್ಲಿ ಎ. ವಿ. ಎಸ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ‌ ಕೇಂದ್ರ ತಂಡಕ್ಕೆ ಗೆಲವು

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25:ಬಿ. ಎಲ್. ಡಿ ‌ಇ‌ ಸಂಸ್ಥೆಯ ಎ.‌ ಎಸ್. ಪಾಟೀಲ ಕಾಮರ್ಸ್ ಕಾಲೇಜಿನಲ್ಲಿ ನಡೆದ ಬಿ.‌ ಎಲ್. ಡಿ. ಇ. ಎ ಕ್ರಿಕೆಟ್ ಕಪ್-2026 ಅಂತರ ಪದವಿ ಮಹಾವಿದ್ಯಾಲಯ ಪಂದ್ಯಾವಳಿಯನ್ನು ಬಿ.ಎಲ್.ಡಿ. ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ‌ ಕೇಂದ್ರ ತಂಡ ಗೆದ್ದುಕೊಂಡಿದೆ.ಏಪ್ರೊಲ್ 17 ರಿಂದ ಏಪ್ರಿಲ್ 26ರ ವರೆಗೆ ಏಳು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 14 ನಾನಾ ಕಾಲೇಜುಗಳ ತಂಡಗಳು…

Read More

ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರಕ್ಕೆ ಪ್ರತಿಪಕ್ಷಗಳ ವಿರೋಧ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25 : ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿಪಕ್ಷಗಳ ವಿರುದ್ಧ ವಿಜಯಪುರದಲ್ಲಿ ನಾರಿಶಕ್ತಿ ಅಭಿವಂದನ್ ಫೋರಂ ಪದಾಧಿಕಾರಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು.ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.ನಾರಿಶಕ್ತಿ – ದೇಶದ ಶಕ್ತಿ, ಮಹಿಳಾ ಸಬಲೀಕರಣ ವಿಷಯದಲ್ಲಿ ಬೇಡ ರಾಜಕಾರಣ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ನಾರಿಶಕ್ತಿ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಪ್ರತಿಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಸಮಾಧಾನ…

Read More

ಡಾ. ರಾಜ್ ಅವರ ವ್ಯಕ್ತಿತ್ವ ವಿಶ್ವವಿದ್ಯಾಲಯವಿದ್ದಂತೆ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25:ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಅವರ ಸಾಧನೆ ನಿಜಕ್ಕೂ ಅನನ್ಯ. ಅವರು ಕನ್ನಡ ಚಿತ್ರರಂಗದ ಭದ್ರ ಬುನಾದಿಯಾಗಿದ್ದು, ಅವರು ಕೇವಲ ನಟನಾಗಿರದೆ, ಕನ್ನಡ ನಾಡು-ನುಡಿಯ ಪ್ರತೀಕವಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶುಕ್ರವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಡಾ.ರಾಜಕುಮಾರ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಡಾ. ರಾಜಕುಮಾರ ಅವರ ವ್ಯಕ್ತಿತ್ವವೇ ಒಂದು ವಿಶ್ವ ವಿದ್ಯಾಲಯವಿದ್ದಂತೆ. ಸಮಾಜ…

Read More

ವಿಜಯಪುರದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 25:ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ವಿವಿಧ ವಿಭಾಗಗಳಲ್ಲಿ ವಾರ್ಷಿಕ ಪ್ರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಲಾಯಿತು. ಇದರಲ್ಲಿ ಜಿಲ್ಲೆಯಲ್ಲಿ ವಾರ್ಷಿಕ ಕರ ವಸೂಲಾತಿಯಲ್ಲಿ ಶೇ.100ರಷ್ಟು ಸಾಧನೆಗೈದ ವಿಭಾಗದಲ್ಲಿ ತೃತೀಯ ಸ್ಥಾನದಲ್ಲಿ ಹೊನಗನಹಳ್ಳಿ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದ್ದು, ಜಿ. ಪಂ ಸಿಇಒ ರಿಷಿ ಆನಂದ ಅವರಿಂದ ಪಿಡಿಒ ಜಯಶ್ರೀ…

Read More

ವಿಜಯಪುರ ಪೊಲೀಸರ ಭರ್ಜರಿ ಬೇಟೆ: 1.60 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ- ಎಸ್ಪಿ ನಿಂಬರಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 24 :ನಗರ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಪ್ರಕರಣಗಳನ್ನು ಬೇಧಿಸಿ 28 ಆರೋಪಿಗಳನ್ನು ಬಂಧಿಸಿ 1,60,32,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 17 ಪ್ರಕರಣಗಳಿಗೆ ಸಂಬಂಧಿಸಿದಂತೆ 28 ಆರೋಪಿಗಳನ್ನು ಹಾಗೂ ಪ್ರಸಕ್ತ ವರ್ಷ 13 ಪ್ರಕರಣಗಳಿಗೆ ಸಂಬಂಧಿಸಿದಂತೆ 15 ಜನ ಆರೋಪಿಗಳನ್ನು ಬಂಧಿಸಿ…

Read More

ದೊಡ್ಡ ಗುರಿಯೊಂದಿಗೆ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ- ಸುನಿಲ್ ಗೌಡ ಪಾಟೀಲ್ ಕರೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 24:10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಜಯಪುರ ಗ್ರಾಮೀಣ ವಲಯಕ್ಕೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ಸ್ಥಾನ ಪಡೆದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದೀರಿ. ಮುಂಬರುವ ದ್ವಿತೀಯ…

Read More

ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ-ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಭಿಮತ

ಸಪ್ತಸಾಗರ ವಾರ್ತೆ,ವಿಜಯಪುರ, ಏ.24:ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು,…

Read More

ಪುಸ್ತಕ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 24:ಪುಸ್ತಕವು ಹಸನಾದ ಬದುಕನ್ನು ಸೃಷ್ಟಿಸುವ ಶಕ್ತಿಶಾಲಿ ದ್ರವ್ಯ. ಆ ದ್ರವ್ಯ ಎಲ್ಲರಿಗೂ ತಲುಪಿದರೆ ಅರಿವಿನ ಕೀಲಿಕೈ ಸಿಕ್ಕಂತೆಯೇ ಸರಿ. ಪುಸ್ತಕ ಕೇವಲ ನಿರ್ಜೀವ ವಸ್ತು ಅಲ್ಲ, ಬದಲಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿಶ್ವ ಪುಸ್ತಕ ದಿನದ ನಿಮಿತ್ತ ಹಮ್ಮಿಕೊಂಡ ‘ಪುಸ್ತಕ ವ್ಯಕ್ತಿತ್ವ ನಿರ್ಮಾಪಕ’ ಕುರಿತು…

Read More