ಗಿಡ-ಮರಗಳ ಲಾಲನೆ ಪೋಷಣೆ ಅಗತ್ಯ: ನ್ಯಾಯಾಧೀಶ ಹರೀಶ ಎ.ಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.5: ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪರಿಸರ ಸಮತೋಲನ ಕಾಪಾಡಲು ಗಿಡ-ಮರಗಳ ಲಾಲನೆ ಪೋಷಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಹೇಳಿದರು.ವಿಶ್ವ ಪರಿಸರ ದಿನದ ಅಂಗವಾಗಿ ಕೂಡಗಿ ಎನ್ ಟಿಪಿಸಿ ವಿದ್ಯುತ್ ಸ್ಥಾವರದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು…

Read More

ಎ. ಎಸ್.ಐ ಹಾದಿಮನಿಯವರಿಗೆ ಬೀಳ್ಕೊಡುಗೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 5: ಸೇವಾ ನಿವೃತ್ತಿ ಹೊಂದಿದ ಗೋಳ ಗುಮ್ಮಜ್ ಪೊಲೀಸ್ ಠಾಣೆಯ ಎಎಸ್ಐ ಎಂ. ಎ. ಹಾದಿಮನಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.ಠಾಣೆಯ ಮೇಲ್ಚಾವಣಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಾದಿಮನಿ ಅವರಿಗೆ ಶಾಲು, ಹೂವಿನ ಹಾರ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಅನೇಕರು ಈ ಸಮಾರಂಭದಲ್ಲಿ ಹಾದಿಮನಿ ಅವರ ಪ್ರಾಮಾಣಿಕತೆ ದಕ್ಷತೆ ಹಾಗೂ ಸೇವಾ ನಿಷ್ಠೆಯನ್ನು ಪ್ರಶಂಶಿಸಿ ಮಾತನಾಡಿದರು.ಗೋಳ ಗುಮ್ಮಜ್ ಪೊಲೀಸ್ ಠಾಣೆಯ ಸಿಪಿಐ ಸಂಜೀವ್ ಕುಮಾರ್ ಬಳೆಗಾರ, ಪಿಎಸ್ಐಗಳಾದ ಮಹ್ಮದ ಘೋರಿ, ಹಸೀನಾ…

Read More

ವಿಜಯಪುರದ ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ‘ಗೋಹಾರ್ ಬಾಯಿ ಕರ್ನಾಟಕಿ ‘ ಪುಸ್ತಕ ಬೆಂಗಳೂರಲ್ಲಿ ಬಿಡುಗಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 5:ಕರ್ನಾಟಕ ಸಾಹಿತ್ಯ ಅಕಾಡಮಿಯ ಮಹಿಳಾ ಮುನ್ನಡೆಯ ಪುಸ್ತಕಗಳಲ್ಲಿ ವಿಜಯಪುರದ ಸಾಹಿತಿ ಮೋಹನ ಕಟ್ಟಿಮನಿಯವರು ರಚಿಸಿದ ಹೆಸರಾಂತ ರಂಗಭೂಮಿ ಮತ್ತು ಸಿನಿಮಾ ಅಭಿನೆತ್ರಿ ‘ಗೋಹಾರ್ ಬಾಯಿ ಕರ್ನಾಟಕಿ ‘ ಅವರ ಪುಸ್ತಕವನ್ನು 05-06-2026 ರಂದು ಬೆಂಗಳೂರಿನ ನಯನಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.ರಾಷ್ಟ್ರದ ರಂಗಭೂಮಿ ಇತಿಹಾಸದಲ್ಲಿ ದಂತಕತೆಯಾದ ‘ ಗೋಹಾರ್ ಬಾಯಿ ‘ ದುರಂತ ನಾಯಕಿ ರಂಗಭೂಮಿಯ ಮೇಲೆ ಲಕ್ಷಾಂತರ ಜನರ ಹೃದಯದಲ್ಲಿ ಉಳಿದ ಈ ಕಲಾವಿದೆ ಇತಿಹಾಸ ನಿರ್ಮಿಸಿದ್ದರೂ ಇತಿಹಾಸದ ಪುಟಗಳಲ್ಲಿ ಇವರು ಉಳಿದಿರಲಿಲ್ಲ…

Read More

ಜರ್ಮನಿ ನಿಯೋಗದ ಜತೆ ಸಿಎಂ ಡಿ ಕೆ ಶಿವಕುಮಾರ್, ಸಚಿವ ಎಂ ಬಿ ಪಾಟೀಲ ಸಭೆ, ಹೂಡಿಕೆ ಕುರಿತು ಚರ್ಚೆ

ಸಪ್ತಸಾಗರ ವಾರ್ತೆ,ಬೆಂಗಳೂರು, ಜೂ. 05: ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಯ ಉದ್ದೇಶದಿಂದ ಆಗಮಿಸಿರುವ ಜರ್ಮನಿಯ ತುರಿಂಜಿಯಾ ಪ್ರಾಂತ್ಯದ ಮಂತ್ರಿಮಂಡಲದ ಮುಖ್ಯಸ್ಥ (ಮಿನಿಸ್ಟರ್ ಪ್ರೆಸಿಡೆಂಟ್) ಮಾರಿಯೋ ವಾಯ್ಟ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶುಕ್ರವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕೂಡ ಇದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಎರಡೂ ಕಡೆಯವರಿಗೂ ಇರುವ ಅತ್ಯುತ್ತಮ ಅವಕಾಶಗಳನ್ನು ಗುರುತಿಸಲು ನಾವು…

Read More

ಪರಿಸರ ರಕ್ಷಣೆಗಾಗಿ ಪಣ ತೊಡೋಣ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಜೂ. 5: ಪ್ರಕೃತಿ ನಮಗೆ ಬದುಕಲು ಬೇಕಾದ ಗಾಳಿ, ನೀರು, ಆಹಾರ, ನೆರಳನ್ನು ನೀಡಿದೆ. ಪರಿಸರ ಹಾಳಾದರೆ ಮಾನವನ ಅಸ್ತಿತ್ವವೇ ಪ್ರಶ್ನಾರ್ಥಕವಾಗುತ್ತದೆ. “ಇಂದಿನ ಮರ, ನಾಳಿನ ಜೀವ” ಎಂಬ ಧ್ಯೇಯವಾಕ್ಯದೊಂದಿಗೆ ನಾವೆಲ್ಲರೂ ಪರಿಸರ ರಕ್ಷಣೆಗಾಗಿ ಪಣ ತೊಡೋಣ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಅವರು ಮಾತನಾಡಿದರು.ಇಂದಿನ ಮಕ್ಕಳಿಗೆ ಪ್ರಕೃತಿಯ ಮಹತ್ವ ತಿಳಿಸಿಕೊಟ್ಟು, ಸ್ವಚ್ಛತೆಯ ಅಭ್ಯಾಸ ಕಲಿಸುವುದು…

Read More

ಹಿಜಾಬ್ ಅನುಮತಿ ಹಿಂಪಡೆಯುವರೆಗೆ ಹೋರಾಟ ನಿಲ್ಲದು: ಶಾಸಕ ಯತ್ನಾಳ ಎಚ್ಚರಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಜೂ. 5:ಹಿಜಾಬ್ ಅನುಮತಿ ಹಿಂಪಡೆಯುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯಬಿದ್ದರೆ ಜೈಲಿಗೆ ಹೋಗಲು ಸಿದ್ದ. ನಮ್ಮ ಹಿಂದೂ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕೇಸರಿ ಶಾಲುಗಳನ್ನು ಹಾಕಿಕೊಂಡೆ ಹೋಗುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವಿಜಯಪುರ ನಗರದ ದರಬಾರ ಕಾಲೇಜು ಹತ್ತಿರ ಶುಕ್ರವಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ದರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಪರ್ಯಾಯವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ವೇಳೆ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ ನಂತರ ಮಾತನಾಡಿದ…

Read More

ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ,ಬೆಂಗಳೂರು, ಜೂ. 05: “ರಾಮಲಿಂಗಾ ರೆಡ್ಡಿ ಅವರು ಪ್ರಮುಖ ನಾಯಕರು ಹಾಗೂ ನನಗೆ ಬಹಳ ಆತ್ಮೀಯರಾಗಿದ್ದು, ಅವರೊಂದಿಗೆ ನಾನು ಮಾತನಾಡುತ್ತೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.ರಾಮಲಿಂಗಾ ರೆಡ್ಡಿ ಅವರು ರಾಜಿನಾಮೆ ನೀಡಿರುವ ಬಗ್ಗೆ ಕೇಳಿದಾಗ, “ರಾಮಲಿಂಗಾ ರೆಡ್ಡಿ ಅವರು ಗ್ರಾಮೀಣ ಭಾಗದಿಂದ ಬಂದವರಲ್ಲ. ಅವರಿಗೆ ಜಲಸಂಪನ್ಮೂಲ ಸಚಿವಾಲಯ ಸಿಕ್ಕಿದ್ದು, ಅವರು ನಗರ ಪ್ರದೇಶದಲ್ಲಿ ಕೆಲಸ ಮಾಡಲು ಬಯಸಿದ್ದಾರೆ” ಎಂದು ತಿಳಿಸಿದರು.ಕೆಲವು ಕಾರ್ಯಕರ್ತರು ರಾಜಿನಾಮೆ…

Read More

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ಐವರು ಅಭ್ಯರ್ಥಿಗಳು ಕಣಕ್ಕೆ-ಸಿಎಂ ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ,ಬೆಂಗಳೂರು, ಜೂ. 04: “ವಿಧಾನ ಪರಿಷತ್ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಲಿದ್ದು, ನಾವು ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದು, ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಐದನೇ ಅಭ್ಯರ್ಥಿ ನಾಳೆ ಪ್ರಕಟಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.ಮುಖ್ಯಮಂತ್ರಿಗಳಾಗಿ ಮೊದಲ ದಿನದ ಅನುಭವ ಹೇಗಿತ್ತು ಎಂದು ಕೇಳಿದಾಗ, “ನಾನು ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನ ನೇತೃತ್ವದಲ್ಲಿ ಘೋಷಿಸಿದ ಭರವಸೆಗಳನ್ನು ಜನರಿಗೆ…

Read More

ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 4:ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ ಸೊಲ್ಲಾಪುರದ ಸ್ಟಾರ್ ನ್ಯೂಸ್ ಚಾನೆಲ್ ವತಿಯಿಂದ ನೀಡಲಾಗುವ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಿಸಲಾಗಿದೆ.ದೀಪಕ್ ಶಿಂತ್ರೆ ಅವರು ಹಲವು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ಮರಾಠಿ ಪತ್ರಿಕೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಜಿಲ್ಲೆಯ ವಿವಿಧ ವಿಷಯಗಳ ಕುರಿತು ಅವರು ನಿರಂತರವಾಗಿ ವರದಿಗಾರಿಕೆ ನಡೆಸಿದ್ದಾರೆ….

Read More

ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು- ಸಿಎಂ ಡಿ. ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ,ಬೆಂಗಳೂರು, ಜೂ.04 “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿದರು….

Read More