ಕೆಎಸ್‌ಸಿಎ ಅಂಡರ್-19 ಇಂಟರ್ ಝೋನಲ್ ಟಿ-20ಗೆ ವಿಜಯಪುರದ ತನೂಶ್ರೀ ಇಜೇರಿ ಆಯ್ಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 4:ವಿಜಯಪುರದ ಪ್ರತಿಭಾವಂತ ಯುವ ಕ್ರಿಕೆಟಿಗರಾದ ತನೂಶ್ರೀ ಇಜೇರಿ ಅವರು 2026–27ನೇ ಸಾಲಿನ ಕೆಎಸ್‌ಸಿಎ ಅಂಡರ್-19 ಮಹಿಳಾ ಇಂಟರ್ ಝೋನಲ್ ಟಿ-20 ಪಂದ್ಯಾವಳಿಯ ಕಂಬೈನ್ಡ್ ಮೊಫಸ್ಸಿಲ್ XI ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯು ಆಗಸ್ಟ್ 6ರಿಂದ 12ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೆಎಸ್‌ಸಿಎ ಮಹಿಳಾ ಇಂಟರ್ ಮೊಫಸ್ಸಿಲ್ ಪಂದ್ಯಾವಳಿಯಲ್ಲಿ ರಾಯಚೂರು ವಲಯ ಮಹಿಳಾ ತಂಡವನ್ನು ಪ್ರತಿನಿಧಿಸಿದ ತನೂಶ್ರೀ ಅವರು ಆಲ್‌ರೌಂಡ್ ಪ್ರದರ್ಶನ ನೀಡಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.ಎಡಗೈ ಆರಂಭಿಕ ಬ್ಯಾಟರ್ ಹಾಗೂ ಎಡಗೈ…


