ವಿಪತ್ತು ಬಂದಾಗ ಗಾಬರಿಯಾಗಬೇಡಿ, ಸಿದ್ದತೆಯೇ ನಮ್ಮ ರಕ್ಷಣೆ: ಮೋಹಮದ್ ಅಜ್ಮಲ್ ಶಕೀಬ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 26:ವಿಪತ್ತು ಪ್ರಕೃತಿ ಅಥವಾ ಮಾನವ ಸೃಷ್ಟಿಯಾದ ಅನಾಹುತಗಳಿಂದ ಉಂಟಾಗುವ ಗಂಭೀರ ಸಮಸ್ಯೆಗಳಾಗಿದ್ದು, ಸರಿಯಾದ ಸಿದ್ಧತೆ ಮತ್ತು ಜಾಗೃತಿಯ ಮೂಲಕ ಅವುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಘಟಕದ ವಿಪತ್ತು ನಿರ್ವಹಣೆ ಉಪ ಸಮಿತಿಯ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ ಮೊಹಮ್ಮದ್ ಅಜ್ಮಲ್ ಶಕೀಬ್ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ ಘಟಕ ಹಾಗೂ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ…

Read More

ಪ್ರಧಾನಮಂತ್ರಿ ರಾಷ್ಟೀಯ‌ ಶಿಶಿಕ್ಷು ಮೇಳ: 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 26:ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ‌ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳದಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.ಮಂಗಳವಾರ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐ ಹಾಗೂ ಉದ್ಯೋಗ ವಿನಿಮಯ ಕಚೇರಿ, ಕೌಶಾಲ್ಯಾಭಿವ್ಯದ್ಧಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಈ ಪ್ರಧಾನಮಂತ್ರಿ ರಾಷ್ಟೀಯ‌ ಶಿಶಿಕ್ಷು ಮೇಳವನ್ನು ವಿಜಯಪುರ ಸರಕಾರಿ ಐಟಿಐ…

Read More

ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲು ಒತ್ತಾಯ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 26 :ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯಿಸಿ ವಿಜಯಪುರ ನಗರ ಘಟಕ ಕುರುಬರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಸಂತೋಷದ ಸಂಗತಿ. ಆದರೆ ಸ್ವಾತಂತ್ರ್ಯ ಸಮರವನ್ನು ಸಾರಿದ ಕೀರ್ತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅವರ ಎಡಭಾಗದಲ್ಲಿ ಪ್ರತಿಷ್ಠಾಪನೆ…

Read More

ಡಿ. 29ರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 26: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯಿರ್ವೇದ, ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ಡಿಸೆಂಬರ್ 29 ರಿಂದ ಜನೇವರಿ 03ರ ವರೆಗೆ ಡಿಸ್ಮೆನೋರಿಯಾ(ಮಾಸಿಕ ಧರ್ಮದ ನೋವು ಮತ್ತು ತೊಂದರೆ) ಕುರಿತು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.ಇಂಥ ಸಮಸ್ಯೆಯನ್ನು ಎದುರಿಸುತ್ತಿರುವ ಸ್ತ್ರೀಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗ ಡಾ.‌ ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ…

Read More

ರೈಲುಪ್ರಯಾಣದರಹೆಚ್ಚಳ : ಬಿಜೆಪಿನಾಯಕರುಮೌನ-ಸಿಎಂಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ, ದಾವಣಗೆರೆ, ಡಿ. 26: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಹಿರಿಯೂರು ಬಸ್ ಅಪಘಾತ: ತನಿಖೆ ನಡೆಸಲಾಗುವುದು ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆ ಪತ್ರಕರ್ತರ…

Read More

ಶಾಮನೂರ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಸಪ್ತಸಾಗರ ವಾರ್ತೆ, ದಾವಣಗೆರೆ, ಡಿ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ದಿ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿ, ಸಾರ್ವಜನಿಕರ ಅಹವಾಲು ಪಡೆದರು.ಬಳಿಕ ಶಾಮನೂರು ಶಿವಶಂಕರಪ್ಪ ಅವರ ಸಮಾದಿಗೆ ಪುಷ್ಪನಮನ ಸಲ್ಲಿಸಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಸೇರಿ ಹಲವು ಮಂದಿ ಸಚಿವರು, ಶಾಸಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಸಂಗಮನಾಥ ಸಕ್ಕರೆ ಕಾರ್ಖಾನೆ:ತೂಕದಲ್ಲಿ 560 ಕೆ.ಜಿ ಮೋಸ ಬಯಲು

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 26:ಸಿಂದಗಿ ತಾಲೂಕಿನ ಮನ್ನಾಪುರದ ಸಂಗಮನಾಥ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರಿಗಳ ತಪಾಸಣೆ ವೇಳೆಯಲ್ಲಿ ತೂಕದಲ್ಲಿ ಮೋಸ ನಡೆದಿರುವುದು ಪತ್ತೆಯಾಗಿದೆ.ಬುಧವಾರ ಒಬ್ಬ ರೈತ ಸಂಶಯದಿಂದ ಹೊರಗಡೆ ತೂಕ ಮಾಡಿಕೊಂಡು ಬಂದಾಗ ಕಬ್ಬಿನ ತೂಕದಲ್ಲಿ 1000 ಕೆ,ಜಿ ತೂಕದಲ್ಲಿ ಮೋಸ ಆಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಾರ್ಖಾನೆ ಸಿಬ್ಬಂದಿಯವರಿಗೂ ಹಾಗೂ ರೈತರ ನಡುವೆ ವಾಗ್ವಾದ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಸಿಂದಗಿ ತಹಶಿಲ್ದಾರರು ಹಾಗೂ ಅಳತೆ ಮತ್ತು ತೂಕದ ಅಧಿಕಾರಿಗಳು ಬಂದಾಗ ಸರಿಯಾದ ತೂಕ ತೋರಿಸಿ…

Read More

ದೇಶದಲ್ಲಿನ ಬಾಂಗ್ಲಾ ವಲಸಿಗರನ್ನು ಹೊರ ಹಾಕಬೇಕು-ಶಾಸಕ ಯತ್ನಾಳ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 25:ಬಾಂಗ್ಲಾ ವಲಸಿಗರಿಂದ ದೇಶಕ್ಕೆ ಅಪಾಯ. ಹೀಗಾಗಿ ಬಾಂಗ್ಲಾ ಒಲಸಿಗರು ಹಾಗೂ ಅವರಿಗೆ ಸಾಥ್ ನೀಡುವವರನ್ನು ದೇಶದಿಂದ ಹೊರ ಹಾಕಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಮುಗ್ಧ ಹಿಂದೂ ಯುವಕನ ಸಜೀವ ದಹನ ಅತ್ಯಂತ ನೋವಿನ ಸಂಗತಿ ಎಂದರು.ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತರ ಪಕ್ಷಗಳು ಬಾಂಗ್ಲಾ ವಲಸಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಅಂತಿಮ ಗಡುವು ನೀಡಬೇಕು…

Read More

ಬಸ್- ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ: ಇಬ್ಬರು ಬೈಕ್ ಸವಾರರ ಸಾವು

ಸಪ್ತಸಾಗರ ವಾರ್ತೆ,ವಿಜಯಪುರ, ಡಿ. 25:ಸಾರಿಗೆ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಜಿಲ್ಲೆಯ ನಿಡಗುಂದಿ ತಾಲೂಕಿನ ಮುದ್ದಾಪುರ ಕ್ರಾಸ್ ಬಳಿ ಗುರುವಾರ ಸಂಭವಿಸಿದೆ.ಮುದ್ದೇಬಿಹಾಳ ತಾಲೂಕಿನ ಕೊಪ್ಪ ತಾಂಡಾದ ಶಿವಪ್ಪ ರಾಮಪ್ಪ ಲಮಾಣಿ (60) ಹಾಗೂ ಬಸರಕೋಡ ಗ್ರಾಮದ ಬಸಪ್ಪ ಸಂಗಪ್ಪ ಸೂಳಿಬಾವಿ (67) ಎಂದು ಮೃತಪಟ್ಟ ದುರ್ದೈವಿಗಳು.ಮುದ್ದೇಬಿಹಾಳದಿಂದ ಬಾಗಲಕೋಟೆ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಹಾಗೂ ನಿಡಗುಂದಿಯಿಂದ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್…

Read More

ರಾಜಧಾನಿಯಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು

ಸಪ್ತಸಾಗರ ವಾರ್ತೆ ಬೆಂಗಳೂರು, ಡಿ. 25: ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಖಾಯಂ ರೈಲು ಸೇವೆಯಾಗಿ ಪರಿವರ್ತಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಆಗ್ರಹಿಸಿದ್ದಾರೆ.ಈ ಬಗ್ಗೆ ಗುರುವಾರ ಮಾತನಾಡಿರುವ ಅವರು, ಬೆಂಗಳೂರಿನಿಂದ ವಿಜಯಪುರಕ್ಕೆ ಈ ಎರಡೂ…

Read More