ಮದುವೆಗೆ ಹೆಣ್ಣು ಬೇಕೆಂದು ಟವರ್ ಏರಿ ಕುಳಿತ ಭೂಪ !

ಸಪ್ತಸಾಗರ ವಾರ್ತೆ ವಿಜಯಪುರ, ಮೇ. 25:ಮದುವೆಗೆ ಹೆಣ್ಣು ಸಿಗದ್ದಕ್ಕೆ ಓರ್ವ ಯುವಕ ಮನ ನೊಂದು ಮೊಬೈಲ್ ಟವರ್ ಏರಿ ಕುಳಿತ ಹೈಡ್ರಾಮಾ ಮಾಡಿದ ಘಟನೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.ಕೋಟ್ಯಾಳ ಗ್ರಾಮದ ಯುವಕ ಶ್ರೀಶೈಲ ನಾಗಪ್ಪ ರಾಮತೀರ್ಥ ಟವರ್ ಏರಿ ಕುಳಿತು ಎಲ್ಲರ ಗಮನ ಸೆಳೆದ.ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶ್ರೀಶೈಲನ ಮನವೊಲಿಸಿ ಮೊಬೈಲ್ ಟವರ್ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಯುವಕ ಟವರ್ ಏರಿ ಕುಳಿತಿದ್ದು ಹೊಸದೇನಲ್ಲ. ಈ‌ ಹಿಂದೆ ಮದ್ಯ ಹಾಗೂ ಗುಟಕಾ…

Read More

ಸಮಯ ವ್ಯರ್ಥ ಮಾಡದೆ, ಜ್ಞಾನ ಸಂಪಾದಿಸಿ-ಅಶೋಕ ಬಿರಾದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 25:ನಿಶ್ಚಿತಗುರಿ, ಅಚಲ ಶೃದ್ಧೆ, ಅವಿರತ ಪ್ರಯತ್ನ, ಸರಳ ಆಲೋಚನೆಗಳಿಂದ ಇಂದಿನ ಮಕ್ಕಳು ಸೃಜನಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಹೇಳಿದರು.ರವಿವಾರ ನಗರದ ಷಣ್ಮುಖಾರೂಢ ಮಠದಲ್ಲಿ ಅಭಿನವಶ್ರೀ ಕೋಚಿಂಗ್ ಕ್ಲಾಸ್ ನ ಬೇಸಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.ತಾಯಿ, ತಂದೆ, ಗುರುಗಳನ್ನು ಪ್ರೀತಿಯಿಂದ ಕಾಣುತ್ತಾ, ಅವರ ಮಾರ್ಗದರ್ಶನದಲ್ಲಿ ದೇಶದ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಮಯ ವ್ಯರ್ಥ ಮಾಡದೆ,…

Read More

ಮಳೆ, ಗಾಳಿಗೆ ಅಪಾರ ಬಾಳೆ ಗಿಡ ನಾಶ

ಸಪ್ತಸಾಗರ ವಾರ್ತೆ, ಇಂಡಿ, ಮೇ24: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗಾಳಿಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿದೆ.ಗ್ರಾಮದ ರೈತ ಧರ್ಮರಾಯ ನರಳೆ ಅವರ 2055 ಬಾಳೆಗಿಡ ಹಾಗೂ ಧರೆಪ್ಪ ನರಳೆ ಅವರಿಗೆ ಸೇರಿದ 1950 ಬಾಳೆ ಗಿಡಗಳು ಮಳೆ ಹಾಗೂ ಗಾಳಿಗೆ ಸಂಪೂರ್ಣ ನೆಲಕ್ಕುರುಳಿ ಹಾಳಾಗಿವೆ. ಅಂದಾಜು 35ಲಕ್ಷದ ಫಸಲು ಹಾಳಾಗಿದೆ‌ ಎಂದು ಅಂದಾಜಿಸಲಾಗಿದೆ.ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಂಜಗಿ ಅವರು ಭೇಟಿ ನೀಡಿ…

Read More

ಸಾಹಿತಿ,ಪ್ರೊ ಎ ಎಚ್ ಕೊಳಮಲಿಯವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 24:ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ, ಎ.ಎಚ್. ಕೊಳಮಲಿಯವರಿಗೆ ಕರುನಾಡು ಕಲ್ಪವೃಕ್ಷ ಫೌಂಡೇಶನ್ ಚಿತ್ರದುರ್ಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಮತ್ತು ಬಾಗಲಕೋಟೆ ಜಿಲ್ಲೆಯ ಚಿಕ್ಕಮಾಗೇರಿ, ಹಿರೇಮ್ಯಾಗೇರಿಯ ತರುಣ ಸಂಘದ ವತಿಯಿಂದ ಕೊಡಮಾಡುವ ‘ಆದರ್ಶ ಶಿಕ್ಷಕ’ ಪ್ರಶಸ್ತಿಯು ಲಭಿಸಿದೆ.ನಾಡಿನ ಉದಯೋನ್ಮುಖ ಸಾಹಿತಿ ಕೊಳಮಲಿಯವರು ಖ್ಯಾತ ವಾಗ್ಮಿಯೂ ಕೂಡಾ ಆಗಿದ್ದಾರೆ. ಜಾನಪದ ವಿದ್ವಾಂಸರಾದ ಇವರ ಬಹುಮುಖ ಪ್ರತಿಭೆಗೆ ಈ ಮುಂಚಿತವಾಗಿ…

Read More

ಪುಸ್ತಕಗಳು ಮಾನವನ ಜ್ಞಾನ, ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಾಸದ ಅಡಿಪಾಯ: ಎನ್. ಎಂ ಬಿರಾದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 24 :ಪುಸ್ತಕಗಳು ಮಾನವನ ಜ್ಞಾನ ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಾಸದ ಅಡಿಪಾಯವಾಗಿದ್ದು, ಓದು ಅಂತಃಪ್ರಜ್ಞೆಯ ಗ್ರಹಿಕೆಯಾಗಿದೆ ಎಂದು ನಗರದ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆˌ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರಾಜಾಜಿನಗರದಲ್ಲಿರುವ ಸಾಹಿತಿ ಮುರುಗೇಶ ಸಂಗಮ ಅವರ ನಿವಾಸದಲ್ಲಿ ಶನಿವಾರ ಸಂಜೆ 4 ಗಂಟೆಗೆ ಜರುಗಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದ ಅಡಿಯಲ್ಲಿ ಗ್ರಂಥಾವಲೋಕನˌ ಕವಿಗೋಷ್ಠಿ ಹಾಗೂ ಸನ್ಮಾನ…

Read More

ಭಾರತ ಭೀಮ್ ಸೇನೆ ಸಂಘಟನಾ ಕಾರ್ಯದರ್ಶಿಯಾಗಿ ಬಿರಾದಾರ ನೇಮಕ

ಸಪ್ತಸಾಗರ ವಾರ್ತೆ,ಆಲಮೇಲ, ಮೇ. 24:ಭಾರತ ಭೀಮ್ ಸೇನೆಯ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಆಲಮೇಲ ತಾಲ್ಲೂಕಿನ ಗುಡ್ಡಳ್ಳಿ ಗ್ರಾಮ ಪುಂಡಲೀಕ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ.ಭಾರತ ಭೀಮ್ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರವೀಣ ಸುಲ್ಪಿ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ.ಸಂಸ್ಥಾಪಕ ರಾಜ್ಯಧ್ಯಕ್ಷ ದಿನೇಶ್ ಅವರ ನೇತೃತ್ವದ ರಾಜ್ಯ ಸಮಿತಿಯು ಈ ನೇಮಕಾತಿ ಪತ್ರವನ್ನು ಅಧಿಕೃತವಾಗಿ ನೀಡಿದೆ.

Read More

ಬಿರುಗಾಳಿ ಸಹಿತ ಮಳೆಗೆ ನೆಲಕ್ಕೆ ಬಿದ್ದ ಬಾಳೆ:15 ಲಕ್ಷಕ್ಕೂ ಅಧಿಕ ಹಾನಿ

ಸಪ್ತಸಾಗರ ವಾರ್ತೆ,ತಾಳಿಕೋಟೆ, ಮೇ. 23 :ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹೊಸಳ್ಳಿ ಗ್ರಾಮದ ರೈತ ಶಾಂತಗೌಡ ಬಿರಾದಾರ ಎಂಬವರ ಸರ್ವೆ ನಂ. 33ರ ಜಮೀನಿನಲ್ಲಿ ಬೆಳೆದಿದ್ದ 5 ಏಕರೆ ಪ್ರದೇಶದಲ್ಲಿಯ ಸಾವಿರಾರು ಬಾಳೆ ಗಿಡಗಳು, ಮುರಿದು ನೆಲಕ್ಕೆ ಬಿದ್ದ ಘಟನೆ ನಡೆದಿದೆ.ಇನ್ನೇನು ವಾರ ಕಳೆಯುವಷ್ಟರಲ್ಲಿ ಬಾಳೆ ಗೊನೆಗಳನ್ನು ಕಟಾವಿಗೆ ಬಂದಿದ್ದವು. ಒಟ್ಟು 5 ಎಕರೆ ಪ್ರದೇಶದಲ್ಲಿ ಸುಮಾರು 1200 ಕ್ಕೂ ಅಧಿಕ ಬಾಳೆಗಿಡಗಳನ್ನು ಬೆಳೆದಿದ್ದರು. ಆದರೆ ಬಿರುಗಾಳಿ ಸಹಿತ ಸುರಿದ…

Read More

ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ. ಸಮಗ್ರ ಅಭಿವೃದ್ಧಿಗೆ ಆದ್ಯತೆ : ಸಿ.ಎಂ ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ,ಬೆಂಗಳೂರು ಮೇ23: ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರು ನುಡಿದರು.ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಸೂರ್ಯಗ್ರಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ “ನಮ್ಮ ಮನೆ” ಯೋಜನೆಗೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ…

Read More

ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ನಿರ್ಧಾರ :ಯತ್ನಾಳ ವಿರೋಧ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 22:ಗುರುವಾರ (ಮೇ 21) ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆದಿದೆ. 2022 ರಲ್ಲಿ ಸದರಿ ದರ್ಗಾದಲ್ಲಿ ದೊಡ್ಡ ಮಟ್ಟದ ಗಲಾಟೆಯಾಗಿ, ತಿಳಿಗೇಡಿಗಳು ಶಿವಲಿಂಗದ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿದ್ದರು.ಆರೋಪಿತರು ‘ಅಮಾಯಕರು’ ಎಂದು ಬಿಂಬಿಸುತ್ತಿರುವ ಸರ್ಕಾರದ ಈ ನಡೆ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಉದ್ದೇಶಪೂರ್ವಕವಾಗಿ ದೊಂಬಿ, ಹಿಂಸಾಚಾರ, ಕೋಮು ಗಲಭೆ, ವಿಗ್ರಹ…

Read More

ಮುಂಬೈ, ಬೆಂಗಳೂರುಗಳಿಗೆ ಹೆಚ್ಚುವರಿ ರೈಲು ಸೇವೆಗೆ ಸಂಸದ ಜಿಗಜಿಣಗಿ ಶ್ರಮಿಸಲಿ: ಸುನೀಲಗೌಡ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 22:)ಪೆಟ್ರೋಲ್ ಮತ್ತು ಡೀಸೆಲ್ ದರ ಹೊರೆಯಾಗುತ್ತಿರುವ ಈ ದಿನಗಳಲ್ಲಿ ವಿಜಯಪುರದಿಂದ ಬೆಂಗಳೂರು ಮತ್ತು ಮುಂಬೈಗೆ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ತಮ್ಮ ಶಕ್ತಿ ತೋರಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಜಗತ್ತಿಗೆ ಮಾದರಿಯಾಗಿದ್ದು, ಅವುಗಳನ್ನು ಬಿಜೆಪಿ ಆಡಳಿತದಲ್ಲಿರುವ ಸರಕಾರಗಳೂ ನಕಲು ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಸಂಸದರು,…

Read More