ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 17 :ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯದ್ದು. ಅಂದು 25 ಜನರಿಂದ ಪ್ರಾರಂಭವಾಗಿದ್ದ ಪಾದಯಾತ್ರೆ ಇಂದು 500 ಕ್ಕೂ ಅಧಿಕ ಭಕ್ತರು ಮಾರ್ಚ 3 ರಿಂದ ಮಾ.17 ರ ವರೆಗೆ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಲಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಮಿತಿಯ ಮುಖಂಡ ರವೀಂದ್ರ ಸಿದ್ದಯ್ಯ ಕರ್ಪೂರಮಠ, 33ನೇ ವರ್ಷದ ಪಾದಯಾತ್ರೆ…

Read More

ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17:ತಂದೆ ತಾಯಿಗಿಂತ ಮಿಗಿಲಾದ ದೇವರು ಈ ಭೂಮಿಯ ಮೇಲೆ ಇಲ್ಲ, ತಂದೆ ತಾಯಿಗಳೇ ನಿಜವಾದ ದೇವರು ಎಂದು ಶಿವಬಸವ ಶಿವಾಚಾರ್ಯ ಸ್ಚಾಮೀಜಿ ಹೇಳಿದರು.ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪಾಲಕರ ಪಾದ ಪೂಜೆ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಉಪವಾಸ ವನವಾಸ ಇದ್ದು ಮಕ್ಕಳಿಗೆ ಜೋಪಾನ ಮಾಡಿ ಬೆಳೆಸಿದ ತಂದೆ ತಾಯಿಗಳ ಋಣ ತೀರಿಸಬೇಕು. ವಿದ್ಯೆ ಕಲಿಸಿದ…

Read More

ನಗರ ಸ್ಥಳೀಯ ಸಂಸ್ಥೆಗಳಲ್ಲಿ
ಕರ್ನಾಟಕ ಒನ್ ಫ್ರಾಂಚೈಸಿ ಸ್ಥಾಪನೆಗೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ,‌ಫೆ.17:ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲೆಯ ವಿವಿಧ ನಗರ‌ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಪ್ರಾಂಚೈಸಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಲಮೇಲ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ, ಮುದ್ದೇಬಿಹಾಳ,ಸಿಂದಗಿ, ತಾಳಿಕೋಟೆ, ತಿಕೋಟಾ ಹಾಗೂ ವಿಜಯಪುರ ನಗರ ಸ್ಥಳಿಯ ಸಂಸ್ಥೆಗಳಲ್ಲಿಫ್ರಾಂಚೈಸಿಗಾಗಿ ಆಸಕ್ತರುಆನ್‍ಲೈನ್ ಮೂಲಕ https://www.karnatakaone.gov.in/Public/FranchiseeTerms ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮನರೇಗಾ ಕೂಲಿಕಾರರ ಇಕೆವೈಸಿಯಲ್ಲಿ ಶೇ. 100 ಪ್ರಗತಿ ಸಾಧಿಸಲು ವಿಶೇಷ ಅಭಿಯಾನ: ಬಸವಂತರಾಯಗೌಡ ಬಿರಾದಾರ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17: ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಣಿಯಾದ ಎಲ್ಲಾ ಕೂಲಿಕಾರರ ಇಕೆವೈಸಿಯನ್ನು ಸಂಪೂರ್ಣವಾಗಿ ಪ್ರಗತಿ ಸಾಧಿಸಲು ತಾಲೂಕಿನಾದ್ಯಂತ ಫೆಬ್ರುವರಿ 27ರ ವರೆಗೆ ವಿಶೇಷ ಅಭಿಯಾನ ಆಯೋಜನೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಅವರು ತಿಳಿಸಿದ್ದಾರೆ.ಸರ್ಕಾರದ ಸೂಚನೆಯ ಅನ್ವಯ ಯೋಜನೆಯಡಿ ಕೆಲಸ ನಿರ್ವಹಿಸತಕ್ಕ ಅರ್ಹ ಎಲ್ಲಾ ಕೂಲಿಕಾರರ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ಯತೆಯ ಮೇಲೆ ನೋಂದಾಯಿತ ಎಲ್ಲಾ ಅರ್ಹ ಕೂಲಿಕಾರರ e-KYC ಅಪ್ಲೋಡ್ ಅನ್ನು ಫೆ. 27…

Read More

ನೆಮ್ಮದಿಯ ಬದುಕಿಗೆ ದೇವರ ಸ್ಮರಣೆ ಅಗತ್ಯ- ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 17:ಗುರುವಿನಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ತಂದೆ, ತಾಯಿ, ಗುರುವನ್ನು ಗೌರವಿಸುವಂಥ ಸಂಸ್ಕೃತಿ ನಮ್ಮದು. ಹರ ಪೂಜೆ, ಗುರು ಸೇವೆ ಬದುಕಿನಲ್ಲಿ ಮುಖ್ಯ ಎಂದು ನಾಗಠಾಣ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಉದಯಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ. ದೇವರ ನಾಮ…

Read More

ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ:ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.16: ಪ್ರಸ್ತುತ ಲಭ್ಯವಿರುವ ಇಲಾಖಾವಾರು ನಿಗದಿಪಡಿಸಿದ ಅನುದಾನವನ್ನು ಮುಂಬರುವ ಸಭೆಯೊಳಗಾಗಿ ನೂರರಷ್ಟು ಪ್ರಗತಿ ಸಾಧಿಸಿ ವರದಿ ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಜನವರಿ ಮಾಹೆಯ ಅಂತ್ಯದವರೆಗೆ ಸಾಧಿಸಿದ ಪ್ರಗತಿ ವರದಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷದಲ್ಲಿ ನಿಗದಿಪಡಿಸಿದ ಭೌತಿಕ ಹಾಗೂ…

Read More

ಲಾರಿ- ಬೈಕ್ ಡಿಕ್ಕಿ: ಮಹಿಳೆ ಸಾವು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16:ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಸಂಗಾಪುರ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಅಡವಿ ಸಂಗಾಪುರ ಗ್ರಾಮದ ನಿವಾಸಿ ಬಾಳವ್ವ ದಳವಾಯಿ (50) ಮೃತಪಟ್ಟಿದ್ದಾಳೆ.ಬಾಳವ್ವ ಅವರು ತಮ್ಮ ಸಂಬಂಧಿಕರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಆಗ ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬೈಕ್ ಸವಾರನಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ತಕ್ಷಣವೇ ಅವರನ್ನು…

Read More

ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಿ-ಸಚಿವ ಡಾ. ಎಂ.ಬಿ. ಪಾಟೀಲ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.16: ಶಾಲೆಗಳಿಗೆ ಶಿಕ್ಷಕರು ಹೃದಯವಿದ್ದ ಹಾಗೆ. ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಶಿಕ್ಷಕರು ಯೋಜನಾ ಬದ್ಧವಾಗಿ ಪಾಠ ಬೋಧನೆಗೆ ಆದ್ಯತೆ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಕರೆ ನೀಡಿದರು.ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ…

Read More

ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಸಾಧ್ಯವಿಲ್ಲ: ನಿಖಿಲ್

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16: ನಮ್ಮ ಶಕ್ತಿ ಬಿಜೆಪಿಗೆ ಧಾರೆ ಎರೆದಿದ್ದೇವೆ. ಬಿಜೆಪಿ ಶಕ್ತಿ ನಮಗೆ ಧಾರೆ ಎರೆದಿದ್ದಾರೆ. ಭ್ರಷ್ಟ ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ. ಹೀಗಾಗಿ ಎರಡು ಪಕ್ಷ ವಿಲೀನ ಆಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಮೈತ್ರಿಯ ವಿಮಾನ ಹತ್ತಿದ್ದೇವೆ. ಅದು ಟರ್ಬ್ಯೂಲೆನ್ಸ್ ಆಗುವುದು ಸಹಜ. ಮಧ್ಯದಲ್ಲಿ ಕೆಲವು ಪ್ರಯಾಣಿಕರು ಇಳಿಯುವಂತೆ ಹೇಳಿದರೆ ಅದು ಸಾಧ್ಯವಾಗದು. ಇನ್ನೂ ಜೆಡಿಎಸ್ ಸೈದ್ಧಾಂತಿಕವಾಗಿ…

Read More

ಮನುಷ್ಯನಿಗೆ ಮುಪ್ಪು ಎಂಬುದು ಮರುಬಾಲ್ಯ ಇದ್ದಂತೆ: ಡಾ. ಎಚ್.ಕೆ. ಯಡಹಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16:ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವ್ವನ, ಮಧ್ಯ ವಯಸ್ಸು ಹಾಗೂ ಮುಪ್ಪು ಸಹಜವಾಗಿ ಬರುವಂತಹವುಗಳು.ಬಾಲ್ಯವನ್ನು ಹಿರಿಯರ ಪ್ರೀತಿಯೊಂದಿಗೆ, ಯೌವನವನ್ನು ಹುಮ್ಮಸ್ಸಿನೊಂದಿಗೆ ,ಮಧ್ಯ ವಯಸ್ಸನ್ನು ಮಕ್ಕಳು ಹಾಗೂ ಬಂಧು ಬಾಂಧವರ ಜೊತೆಗೆ ಕಳೆಯುತ್ತೇವೆ. ಆದರೆ ಮುಪ್ಪಾವಸ್ಥೆಯಲ್ಲಿ ಮರೆವು, ದೈಹಿಕವಾದ ನ್ಯೂನ್ಯತೆಗಳ ಮಧ್ಯದಲ್ಲಿ ಬದುಕುತ್ತಾ ನಿರ್ಲಕ್ಷಕ್ಕೆ ಒಳಗಾಗುವುದನ್ನು ಕಾಣುತ್ತೇವೆ. ಇದರತ್ತ ನಮ್ಮ ಯುವ ಜನತೆ ಗಮನಿಸಿ, ತಮ್ಮ ಹಿರಿಯರನ್ನು ಪ್ರೀತಿಯ ಆರೈಕೆಯೊಂದಿಗೆ ನೋಡಿಕೊಳ್ಳಬೇಕು. ಏಕೆಂದರೆ ಮನುಷ್ಯನಿಗೆ ಮುಪ್ಪು ಎಂಬುದು ಮರು ಬಾಲ್ಯ ಇದ್ದಂತೆ ಎಂದು ಸಿಕ್ಯಾಬ್…

Read More