ದಲಿತ ಸಾಹಿತ್ಯ ಪರಿಷತ್ತು ಬೆಳಗಾವಿ ವಿಭಾಗದ ಸಂಯೋಜಕರಾಗಿ ಮೋಹನ ಕಟ್ಟಿಮನಿ ನೇಮಕ
ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:ನಗರದ ಮೋಹನ ಕಟ್ಟಿಮನಿ ಅವರನ್ನು ರಾಜ್ಯ ದ.ಸಾ.ಪ ಬೆಳಗಾವಿ ವಿಭಾಗೀಯಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.ಮೋಹನ ಕಟ್ಟಿಮನಿ ಅವರು ವಿಜಯಪುರದ ದಲಿತ ಸಾಹಿತ್ಯ, ಶರಣ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಉತ್ತಮ ಸಂಘಟಕರಾಗಿ, ಭಾವ ಲಹರಿ, ಜೀವಂತ ಶವಗಳು ನಕ್ಕಾಗ, ಬರದ ನಾಡಿನಲ್ಲಿ ಬಂಗಾರ ಬೆಳೆದವರು, ಚಾಣಕ್ಯ ಬಿರಾದಾರ ಬದುಕಿನ ಚಿತ್ರಣ, ವಿಸ್ಮಯದ ಬೆನ್ನೆರಿ, ವಚನ ಫಕೀರ ಮತ್ತು ಹರ್ಡೇಕರ ಮಂಜಪ್ಪ ನಾಟಕ, ಪದ್ಮಭೂಷಣ ಜನರಲ್ ಜಿ. ಜಿ. ಬೇವೂರ…


