ವೃಕ್ಷಥಾನ್ ಹೆರಿಟೇಜ್ ರನ್ : ಸ್ಥಳದಲ್ಲಿಯೇ ನೊಂದಣಿಗೆ ಅವಕಾಶ
ಸಪ್ತಸಾಗರ ವಾರ್ತೆ, ವಿಜಯಪುರ, ನ. 28: ಸ್ವಚ್ಚ, ಸುಂದರ, ಸದೃಢ ವಿಜಯಪುರಕ್ಕಾಗಿ ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಂದ ಮನವಿ ಬಂದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 4, 5 ಹಾಗೂ 6 ರಂದು ಮೂರು ದಿನಗಳ ಕಾಲ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.ಮೊದಲು ಬರುವ ಕೇವಲ 1000(ಒಂದು ಸಾವಿರ) ಜನರಿಗೆ ಅವಕಾಶ ಮಾತ್ರ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಕ್ರೀಡಾಪಟುಗಳು, ಸಾರ್ವಜನಿಕರು ಹಾಗೂ ಪರಿಸರಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.ಈಗಾಗಲೇ 21…


