ನ.28ರಂದು ವಿಕಲಚೇತನರ ಕುಂದು ಕೊರತೆ ಸಭೆ

ಸಪ್ತಸಾಗರ ವಾರ್ತೆ, ವಿಜಯಪುರ ನ.26:ವಿಕಲಚೇತನರ ಜಿಲ್ಲಾ ಮಟ್ಟದ ಕುಂದು-ಕೊರತೆ ಸಭೆಯನ್ನು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 28ರ ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಕಲಚೇತನರು ಸಭೆಗೆ ಹಾಜರಾಗುವಂತೆ ಕೋರಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತಿ ಆವರಣ, ವಿಜಯಪುರ ಇವರನ್ನು ಅಥವಾ ದೂರವಾಣಿ ಸಂಖ್ಯೆ 08352-796060 ಮೂಲಕ…

Read More

ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಿಕೊಳ್ಳಲು ಅವಕಾಶ

ಸಪ್ತಸಾಗರ ವಾರ್ತೆ, ವಿಜಯಪುರ, ನ.26:ನಿಮ್ಮ ಹಣ, ನಿಮ್ಮ ಹಕ್ಕುಅಭಿಯಾನದಡಿ ನಿಷ್ಕ್ರಿಯ ಖಾತೆಗಳು -ಹಕ್ಕು ಪಡೆಯದ ಠೇವಣಿಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 28 ರಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ, ಎಸ್‌ಎಲ್‌ಬಿಸಿ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ನಿಷ್ಕ್ರಿಯ ಖಾತೆಗಳು- ಹಕ್ಕು ಪಡೆಯದ ಠೇವಣಿಗಳು, ವಿಮಾ ಪಾಲಿಸಿ ಮೊತ್ತ, ಷೇರುಗಳನ್ನು ಇತ್ಯರ್ಥಪಡಿಸಲುಈ ಅಭಿಯಾನವನ್ನು ಹಣಕಾಸು ಸೇವೆಗಳ ಇಲಾಖೆಯು ದಿನಾಂಕ: 01.10.2025 ರಿಂದ…

Read More

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುಪಿಎಸ್‌ಇ ಪರೀಕ್ಷೆ ತರಬೇತಿಗೆ ಬಿಎಲ್ ಡಿಇ ಒಡಂಬಡಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 26: ಯುಪಿಎಸ್‌ಇ ಪರೀಕ್ಷೆ ತರಬೇತಿ ಪಡೆಯಲು ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮತ್ತು ಬದ್ಧವಾಗಿರುವ ಬಿ..ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯದಲ್ಲಿ ನಾಗರಿಕ ಸೇವಾ ತರಬೇತಿ ನೀಡುವಲ್ಲಿ ಹೆಸರಾಗಿರುವ ಸಾಧನಾ ಕೊಂಚಿಂಗ್ ಸೆಂಟರ್ ಈ ಭಾಗದ ಯುವಕರ ಕನಸು ನನಸು ಮಾಡಲು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ…

Read More

ವಿಜಯಪುರದಲ್ಲಿ ದಾರಿ ತಪ್ಪಿದ ಗೃಹ ಸಚಿವರ ಕಾರ್ ಚಾಲಕ

ಸಪ್ತಸಾಗರ ವಾರ್ತೆ, ವಿಜಯಪುರ, ನ. 26:ಗೃಹ ಸಚಿವ ಜಿ. ಪರಮೇಶ್ವರ್ ಅವರ ಕಾರಿನ ಇಂಧನ ಖಾಲಿಯಾಗಿ ಬೇರೆ ಕಾರಿನಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಿದ ಘಟನೆ ನಡೆದಿದೆ.ಮಾಜಿ ಶಾಸಕ ರಾಜು ಆಲಗೂರ ಅವರ ಪುತ್ರಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು.ಬೆಳಗಾವಿಗೆ ವಾಪಸ್ಸು ತೆರಳಲು ಅಣಿಯಾದಾಗ ಕಾರಿನ ಇಂಧನ ಖಾಲಿಯಾದ ವಿಷಯ ಗೊತ್ತಾಗಿದೆ.ಅವರ ಕಾರು ಚಾಲಕ ಇಂಧನ ಭರಿಸಲು ತೆರಳಿದ. ಕಾರು ಚಾಲಕ ವಾಪಸ್ಸು ಬರುವ ವೇಳೆ ದಾರಿ ತಪ್ಪಿದ್ದಾನೆ. ದಾರಿ ತಪ್ಪಿ ಅಲ್ಲಿ ಇಲ್ಲಿ ಸುತ್ತಾಡಿ ಬರುವಷ್ಟರಲ್ಲಿ ಬಹಳಷ್ಟು…

Read More

ದಾಕ್ಷಿ ಬೆಳೆ ವಿಮೆ ಪರಿಹಾರದ ಹಣ: ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ದ್ರಾಕ್ಷಿ ಬೆಳೆಗಾರರು ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ನ. 26:ದಾಕ್ಷಿ ಬೆಳೆ ವಿಮೆಯ ಪರಿಹಾರದ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ದ್ರಾಕ್ಷಿ ಬೆಳೆಗಾರರು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಸಂಘದ ಅಧ್ಯಕ್ಷ ಡಾ. ಕೆ. ಎಚ್. ಮುಂಬಾರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಸಾಕಷ್ಟು ಜನ ರೈತರು ದಾಕ್ಷಿ ಬೆಳೆ ವಿಮೆ ಯೋಜನೆಯಡಿ 2024-25 ಸಾಲಿನ ದ್ರಾಕ್ಷಿ ಬೆಳೆಯ ವಿಮೆಯ ಕಂತನ್ನು ತುಂಬಿದ್ದು ಪರಿಹಾರ ಘೋಷಣೆ ಆದರೂ ಕೂಡ ಇಲ್ಲಿಯವರೆಗೆ ವಿಮೆಯ ಪರಿಹಾರ ಹಣ ಬಿಡುಗಡೆ ಆಗಿಲ್ಲ. ದಾಕ್ಷಿ ಬೆಳೆ ವಿಮೆಯ ಅವಧಿ ಸಪ್ಟೆಂಬರ್…

Read More

ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

ಸಪ್ತಸಾಗರ ವಾರ್ತೆ ವಿಜಯಪುರ, ನ. 25:ಮಹಿಳೆಯರ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ವಿರೋಧಿಸಿ ರಾಜ್ಯದ ಎಲ್ಲೆಡೆಯಂತೆ ಮಂಗಳವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಐಎಮ್‌ಎಸ್‌ಎಸ್ ನ ಜಿಲ್ಲಾಧ್ಯಕ್ಷೆ ಗೀತಾ ಎಚ್. ಮಾತನಾಡಿ, ಮಹಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಗೈದಿದ್ದಾರೆ. ೨೦೨೪ ಇಸ್ರೋದ ನ್ಯನೊ ಉಪಗ್ರಹ ವನ್ನು ಅಭಿವೃದ್ಧಿ ಪಡಿಸಿದರು. ೨೦೨೫ ರ ವಿಶ್ವಕಪ್ ಕ್ರಿಕೆಟ್ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪುರುಷ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ಭಾರತದ ಇತಿಹಾಸಕ್ಕೆ…

Read More

ಚಿತ್ರಕಲೆಯ ಮೂಲಕ ಕಲಾತ್ಮಕ ಅಭಿವ್ಯಕ್ತಿ ಸಾಧ್ಯ- ಅಂಬಾದಾಸ ಜೋಶಿ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ, ನ. 25:ಚಿತ್ರಕಲೆ ಮೂಲಕ ಕಲಾತ್ಮಕ ಅಭಿವ್ಯಕ್ತಿ ಸಾಧ್ಯ ಎಂದು ಸಮಾಜ ಸೇವಕ ಅಂಬಾದಾಸ ಜೋಶಿ ಅಭಿಪ್ರಾಯ ಪಟ್ಟರು.ವಿಜಯಪುರದ ರೇಡಿಯಂಟ್ ಪಿಯು ಕಾಲೇಜು ಮತ್ತು ನೀಟ್ ಅಕಾಡೆಮಿಯಲ್ಲಿ ಉದ್ದೇಶಪೂರಿತ ಹಾಗೂ ಸೃಜನಾತ್ಮಕ ಚಿತ್ರಕಲಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಅಭಿವ್ಯಕ್ತಿಯ ಜೊತೆಗೆ ಸೌಂದರ್ಯಬೋಧ ಮತ್ತು ಸೃಜನಶೀಲತೆಯ ವಿಕಾಸವನ್ನು ಉತ್ತೇಜಿಸುವುದಾಗಿತ್ತು ಎಂದೂ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅಂಬಾದಾಸ ಜೋಶಿ ಅವರನ್ನು ಆಹ್ವಾನಿಸಲಾಯಿತು. ಅವರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ…

Read More

ಬೆಳೆ ಸಮೀಕ್ಷೆದಾರರಿಂದ ಸುನೀಲಗೌಡ ಪಾಟೀಲರಿಗೆ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 25 : ಬಬಲೇಶ್ವರ ತಾಲೂಕಿನ, ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲೂಕು ಉಸ್ತುವಾರಿ ಸದಸ್ಯ ಸುರೇಶ ಹಜೇರಿ ಇವರ ನೇತೃತ್ವದಲ್ಲಿ ತಾಲೂಕಿನ ಹಲವಾರು ಪಿ ಆರ್ ಗಳೊಂದಿಗೆ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಇವರಿಗೆ ಭೇಟಿ ನೀಡಿ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು.ಕರ್ನಾಟಕ ರಾಜ್ಯದ ಎಲ್ಲಾ ಪಿ ಆರ್ ಗಳನ್ನು ದಿನಗೂಲಿ ಕಾರ್ಮಿಕರನ್ನಾಗಿ ನೇಮಕಾತಿ ಮಾಡುವಂತೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿ ಮನವಿ…

Read More

ದ್ರಾಕ್ಷಿ ಬೆಳೆ ವಿಮೆ ವಿಳಂಬ: ಜಿಲ್ಲಾಧಿಕಾರಿ ಜೊತೆ ಚರ್ಚೆ

ಸಪ್ತಸಾಗರ ವಾರ್ತೆ,ವಿಜಯಪುರ, ನ. 25: ದ್ರಾಕ್ಷಿ ಬೆಳೆ ವಿಮಾ ಮೊತ್ತ ಸಂದಾಯದಲ್ಲಿ ವಿಳಂಬವಾಗಿರುವ ಕುರಿತು ಸೋಮವಾರ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಬೆಳೆ ವಿಮೆ ಕುರಿತು ಚರ್ಚಿಸಲಾಯಿತು.ಜಿಲ್ಲಾಧಿಕಾರಿ ಆನಂದ ಕೆ. ಅವರು ಸ್ಪಂದಿಸಿದ್ದು ನ. 25 ರಂದು ಬೆಳೆವಿಮೆ ಸಮೀಕ್ಷೆಯ ಎಲ್ಲ ವರದಿಯನ್ನು ವಿಮಾ ಕಂಪನಿಗೆ ಕಳುಹಿಸಲಾಗುತ್ತಿದ್ದು, ಆದಷ್ಟು ಬೇಗನೆ ಡಿಸೆಂಬರ್ 5 ರ ಒಳಗಾಗಿ ರೈತರ ಖಾತೆಗಳಿಗೆ ಬೆಳೆ ವಿಮೆ ಮೊತ್ತವನ್ನು ಸಂದಾಯ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಾರಣ ರೈತರು ಯಾವುದೇ ರೀತಿಯಲ್ಲಿ…

Read More

ಪಿಯುಸಿ ಫಲಿತಾಂಶ ಶೇ. 90ಕ್ಕೆ ಹೆಚ್ಚಿಸುವ ಗುರಿ-ಜಂಟಿ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ

ಸಪ್ತಸಾಗರ ವಾರ್ತೆ, ವಿಜಯಪುರ, ನ. 25 : ಕರ್ನಾಟಕ ಪಿಯುಸಿ ಫಲಿತಾಂಶ ರಾಷ್ಟ್ರಮಟ್ಟಕ್ಕೆ ಹೋಲಿಸಿದಾಗ ಕೆಳಮಟ್ಟದಲ್ಲಿದ್ದು, ಫಲಿತಾಂಶ ಸುಧಾರಿಸಲು ಇಲಾಖೆ ಅನೇಕ ಕ್ರಮಗಳನ್ನು ಮತ್ತು ಬದಲಾವಣೆಗಳನ್ನು ತಂದಿದೆ. ಈ ಬಾರಿ ಫಲಿತಾಂಶವನ್ನು ಶೇ. 90ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಜಂಟಿ ನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ(ಪ ಪೂ) ಉಪ…

Read More