ಗುರುಹಿರಿಯರುಹಾಕಿಕೊಟ್ಟಮಾರ್ಗದಲ್ಲಿನಡೆದರೆಯಶಸ್ಸುಖಂಡಿತ: ಡಿಸಿಎಂ‌ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ, ಬೆಂಗಳೂರು, ‌ಫೆ.15:“ಬೇರನ್ನು ಮರೆತರೆ ಮರ ಬಾಳುವುದಿಲ್ಲ. ಅದೇ ರೀತಿ ನಿಮ್ಮ ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಅದೇ ರೀತಿ ಗುರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಯಶಸ್ಸು ಖಂಡಿತ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.ನಗರದ ಪುರಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೆ.ಜೆ. ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.“ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ‌ ಸುಖ ದೊರೆಯುತ್ತದೆ….

Read More

ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ-ಉಜ್ಜಯಿನಿ ಜಗದ್ಗುರು ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ಬದುಕಿನಲ್ಲಿ ಭಗವಂತನನ್ನು ಮರೆಯದಿರಿ. ಪ್ರೀತಿ-ಕರುಣೆಯೇ ನಿಜವಾದ ಧರ್ಮ. ಬದುಕಿನಲ್ಲಿ ಗಳಿಸುವುದನ್ನು ಕಲಿತಂತೆ ಬದುಕುವುದನ್ನು ಕಲಿಯಬೇಕಾದರೆ ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.ರವಿವಾರ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಹಿರೇಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಉದಯಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜನಮನವನ್ನು ನಿತ್ಯವೂ ಹಸನುಗೊಳಿಸುತ್ತಾ ನಿತ್ಯ ನೂತನ ಬದುಕಿಗೆ ಕಾರಣವಾಗಿ ನೀತಿ-ನಿಯಮ ಪಾಲನೆಗೆ ಉನ್ನತ ಜೀವನ ಮೌಲ್ಯಗಳಿಗೆ ಸದಾ…

Read More

ನಾಡಿನ ಅಭಿವೃದ್ಧಿಗೆ ಮಠ ಮಾನ್ಯಗಳ ಪಾತ್ರ ಅನನ್ಯ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ನಾಡಿನ ಅಭಿವೃದ್ಧಿಗೆ ಮಠಮಾನ್ಯಗಳೂ ಅಪಾರ ಕೊಡುಗೆ ನೀಡುತ್ತಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ರವಿವಾರ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಶ್ರೀ ಮುಕ್ತಂಕಾರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪವಾಡಗಳ ಮೂಲಕ ಹೆಸರಾಗಿದ್ದ ಮುಕ್ತಂಕಾರರ ಆಶೀರ್ವಾದದಿಂದ ಇಲ್ಲಿ ಸಮೃದ್ಧಿ ನೆಲೆಸಿದೆ. ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. ನಾನೂ ಭಾಗಿಯಾಗಿದ್ದು ಸಂತಸ ತಂದಿದೆ. ದೇಶದ ಪರಂಪರೆ, ಸಂಸ್ಕೃತಿಗೆ…

Read More

ಕಲೆ-ಸಂಸ್ಕೃತಿಗೆ ಬಂಜಾರ ಸಮಾಜದ ಕೊಡುಗೆ ಅಪಾರ: ಸಚಿವ ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.15: ಬಸವಣ್ಣನವರ ಕಾಯಕ ತತ್ವದಂತೆ ಬಂಜಾರ ಸಮಾಜ ಬಾಂಧವರು ಶ್ರಮ ಜೀವಿಗಳು. ಅವರು ಭವ್ಯವಾದ ಇತಿಹಾಸ ಹೊಂದಿದ್ದು, ಕಲೆ-ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ…

Read More

ಫೆ. 18ರಂದು ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ಫೆ. 18ರಂದು ಬೆಳಗ್ಗೆ 10-30ಕ್ಕೆ ಸೌಹಾರ್ದ ಸಹಕಾರಿಗಳ ಸಮಾವೇಶ ನಗರದ ಎಂಜಿನಿಯರಿಂಗ್ ಕಾಲೇಜ ಎದುರುಗಡೆಆನಂದ ನಗರ ಬಡಾವಣೆಯ ಭಾವಸಾರ ಕ್ಷತ್ರಿಯ ಸಭಾ ಭವನದಲ್ಲಿ ನಡೆಯಲಿದೆ.ಈ ಸಹಕಾರಿ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳ್ಳಿಯ ಶಾಂತಾಶ್ರಮದ ಪರಮಪೂಜ್ಯರಾದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವಹಿಸಲಿದ್ದಾರೆ.ಹಿರಿಯ ಸಹಕಾರಿಗಳು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ,ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಲಿದ್ದಾರೆ.ಹಿರಿಯ ಮಾರ್ಗದರ್ಶಕರುಗಳಾದ…

Read More

ಕಾಡಿ ಪಡೆದ ಪ್ರಶಸ್ತಿಗೆ ಬೆಲೆಯಿಲ್ಲ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ಪ್ರಶಸ್ತಿ ಪುರಸ್ಕಾರಗಳು ಸುಮ್ಮನೆ ಬರುವುದಿಲ್ಲ. ಅವು ಸಮಾಜದ ಹಿತಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮ ವಹಿಸುವ, ತ್ಯಾಗ ಮಾಡುವ ಹಾಗೂ ಸೇವೆಗೈಯುವ ವ್ಯಕ್ತಿಯ ಸಾಧನೆಯನ್ನು ಹುಡುಕಿಕೊಂಡು ಬಂದು ಕೊರಳನ್ನಲಂಕರಿಸಬೇಕು. ಅಂದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ. ಕಾಡಿ ಪಡೆದ ಪ್ರಶಸ್ತಿಗಳಿಗೆ ಬೆಲೆಯಿಲ್ಲವೆಂದು ಗಡಿನಾಡ ಪ್ರಾಧಿಕಾರ ಪ್ರಶಸ್ತಿ ಪುರಸ್ಕೃತ ನಾಗೇಶ ಆರ್.ಕುಲಕರ್ಣಿ ಅವರು ಹೇಳಿದರು.ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಅರವಿಂದ ಕಂಚ್ಯಾಣಿಯವರ “ವ್ಯಕ್ತಿ ಚಿತ್ರಗಳು” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಗ್ರಂಥ…

Read More

ಕಾಂಗ್ರೆಸ್ ದಿವಾಳಿತನಕ್ಕೆ ಬಿಜೆಪಿಯಿಂದ ವಿಶೇಷ ಕರಪತ್ರ ವಿತರಣೆಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14 :ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪೂರೈಸಿದ ಸಾವಿರ ದಿನವನ್ನು ವೈಫಲ್ಯ ಹಾಗೂ ಹಗರಣಗಳಿಂದಲೇ ಪೂರ್ಣಗೊಳಿಸಿದ್ದು ಸರ್ಕಾರದ ವೈಫಲ್ಯ ಪ್ರತಿಬಿಂಬಿಸಲು ಬಿಜೆಪಿ ವಿಶೇಷವಾದ ಕರಪತ್ರ ರಚಿಸಿದ್ದು, ಈ ಫೋಸ್ಟರ್‌ಗಳನ್ನು ಶಿವಾಜಿ ವೃತ್ತದಲ್ಲಿ ಸರ್ಕಾರಿ ಬಸ್ಸುಗಳಿಗೆ ಅಂಟಿಸುವ ಅಭಿಯಾನ ನಡೆಯಿತು.ಈ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜ್ಯ ಸರ್ಕಾರ ಹಗರಣದಲ್ಲಿಯೇ ಕಾಲಹರಣ ಮಾಡುತ್ತಿದೆ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ, ಅನೇಕ ಯೋಜನೆಗಳ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ…

Read More

ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಳಕೆ ಮಾಡುತ್ತಿಲ್ಲ:ಜಿಗಜಿಣಗಿ ಟೀಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ರಾಜ್ಯ ಸರಕಾರವನ್ನು ಟೀಕಿಸಿದರು.ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ ಪೂರೈಕೆ ಹಿನ್ನಲೆ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.45 ವರ್ಷಗಳಿಂದ ರಾಜಕಾರಣ ನೋಡಿಕೊಂಡು ಬಂದಿದ್ದೇನೆ.ಇಂಥ ಸರ್ಕಾರವನ್ನು ಎಂದೂ ಕಂಡಿಲ್ಲ. ಇದು ಹೊಲಸು ಸರ್ಕಾರ.ಬೆಳಿಗ್ಗೆ ಮುಸ್ಲಿಂ ಮಧ್ಯಾಹ್ನ ದಲಿತರು, ಸಾಯಂಕಾಲ ಓಬಿಸಿ ಹೆಸರು ಹೇಳುತ್ತೀರಿ.ಇವಷ್ಟೇ ಸಮದಾಯಗಳಿಂದ ಮಾತ್ರ ಸರ್ಕಾರ ಆಗುತ್ತಾ? ಬೇರೆ ಸಮಾಜಗಳು ಬೇಡವೇ ಎಂದು ಸಂಸದ ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ…

Read More

ರಾಜ್ಯದಲ್ಲಿ ದಲಿತ ವ್ಯಕ್ತಿ ಸಿಎಂ ಆಗಬೇಕೆಂಬ ಧ್ವನಿ ನಿರಂತರವಾಗಿ ಎತ್ತುತ್ತೇನೆ- ಸಂಸದ ಜಿಗಜಿಣಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ರಾಜ್ಯದಲ್ಲಿ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ನಾನು ಕೊನೆಯವರೆಗೂ ಧ್ವನಿ ಎತ್ತುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ನನಗೆ ಅಸಮಾಧಾನವಿಲ್ಲ.ಆದರೆ ದಲಿತರು ಸಿಎಂ ಆಗಬೇಕೆಂಬ ಧ್ವನಿಯನ್ನು ಕೊನೆಯವರೆಗೂ ಎತ್ತುತ್ತೇನೆ ಎಂದರು.ನಾನೇ ಸಿಎಂ ಆಗಬೇಕೆಂಬುದಿಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ. ದಲಿತರನ್ನು ಸಿಎಂ ಮಾಡುತ್ತಾರೋ…

Read More

ಸುಪ್ರೀಂ ಕೋರ್ಟ್ ನ ಅಂಗಳದಲ್ಲಿಯೂ ಕಾಂಗ್ರೆಸ್ ಮುಖಂಡ ಮುಶ್ರೀಫ್ ಗೆ ಮುಖಭಂಗ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಅಕ್ರಮ ಆರೋಪ ಮಾಡಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಪ್ರಶ್ನೆ ಮಾಡಿದ್ದ ಮುಶ್ರೀಫ್ ಗೆ ಹೈಕೋರ್ಟ್ ಅರ್ಜಿ ವಜಾ ಮಾಡಿ ದಂಡ ವಿಧಿಸುವ ಮೂಲಕ ಕಾಂಗ್ರೆಸ್ ಮುಖಂಡ ಮುಶ್ರೀಫ್ ಮುಖಭಂಗಕ್ಕೆ ಒಳಗಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸುಪ್ರೀಂ ಕೋರ್ಟ್ ಅವರ ಅರ್ಜಿ ವಜಾ ಮಾಡಿದ್ದು ಎರಡನೇ ಬಾರಿ ಮುಶ್ರೀಫ್ ಅವರು ಮುಖಭಂಗ ಅನುಭವಿಸುವಂತಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ…

Read More