ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಕ್ಯಾಲೆಂಡರ್ ಬಿಡುಗಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದಿಂದ ನೂತನ ಕ್ಯಾಲೆಂಡರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಅಧ್ಯಕ್ಷ ಸುರೇಂದ್ರ ಮಾನಕರ ಮಾತನಾಡಿ, ಇದು ಕೇವಲ ದಿನಾಂಕ ತೋರಿಸುವ ಕ್ಯಾಲೆಂಡರ್ ಅಲ್ಲ. ಇದು ಸೇವೆ, ತ್ಯಾಗ, ಮಾನವವೀಯತೆ ಮತ್ತು ವೃತ್ತಿಪರ ನಿಷ್ಠೆಯ ಪ್ರತಿಬಿಂಬ ಎಂದು ಕ್ಯಾಲೆಂಡರ್ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾದ ಡಾ ಸಂದೀಪ ಸಜ್ಜನ ಶುಶ್ರೂಷಾ ಅಧಿಕಾರಿಗಳ ವೃತ್ತಿ ಸ್ಮರಿಸಿದರು.ಸಮಾರಂಭದ ಅಧ್ಯಕ್ಷ ಡಾ. ಶಿವಾನಂದ ಮಾಸ್ತಿಹೊಳಿ, ಶುಶ್ರೂಷಾ ಅಧಿಕಾರಿಗಳು…


