ಶ್ರದ್ಧೆ ಹಾಗೂ ಆತ್ಮವಿಶ್ವಾಸವೇ ಯಶಸ್ಸಿನ ಮೂಲಮಂತ್ರ: ಮಾತಾಜಿ ಕೈವಲ್ಯಮಯಿ
ವಿಜಯಪುರ: “ಮಾನವನ ಜೀವನದಲ್ಲಿ ಗುರಿ ತಲುಪಲು ಶ್ರದ್ಧೆ ಅತ್ಯಗತ್ಯ. ಯಾರಲ್ಲಿ ಶ್ರದ್ಧೆ ಇರುತ್ತದೆಯೋ ಅವರು ಜೀವನದ ಪ್ರತಿ ಹಂತದಲ್ಲೂ ವಿಜಯಶಾಲಿಗಳಾಗುತ್ತಾರೆ,” ಎಂದು ವಿಜಯಪುರದ ಕೃಪಾಮಯಿ ಶಾರದಾಶ್ರಮದ ಪರಮಪೂಜ್ಯ ಕೈವಲ್ಯಮಯಿ ಮಾತಾಜಿಯವರು ಅಭಿಮತ ವ್ಯಕ್ತಪಡಿಸಿದರು.ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್ ಹಾಗೂ ಭಾರತೀಯ ಸ್ವರಾಜ್ಯ ಸಂಸ್ಥೆ ಮತ್ತು ಸಂಡೂರಿನ ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ…


