ಉಚಿತ ಮಧುಮೇಹ ತಪಾಸಣೆ ಶಿಬಿರ

ಸಪ್ತಸಾಗರ ವಾರ್ತೆ, ಬಾಗಲಕೋಟೆ, ನ. 15:ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಬಾಗಲಕೋಟೆಯ ನಮ್ಮ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಬಿ.ವಿ.ವಿ.ಎಸ್ ನರ್ಸಿಂಗ್ ಮಹಾವಿದ್ಯಾಲಯದ ಸಹಯೋಗದಲ್ಲಿ ಉಚಿತ ಮಧುಮೇಹ ತಪಾಸಣೆ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ನೂರಕ್ಕೂ ಹೆಚ್ಚು ಜನರು ಮಧುಮೇಹ ತಪಾಸಣೆ ಮಾಡಿಸಿಕೊಂಡು ಮಧುಮೇಹ ನಿಯಂತ್ರಣದ ಕುರಿತು ಮಾಹಿತಿ ಪಡೆದುಕೊಂಡರು. ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಮಧುಮೇಹದ ಕುರಿತು ಅಭಿನಯಿಸಿದ ನಾಟಕ ಅರ್ಥಪೂರ್ಣವಾಗಿತ್ತು.ಈ ಸಂದರ್ಭದಲ್ಲಿ ಬಿ.ವಿ‌.ವಿ.ಎಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕಾದ ಶ್ರೀಮತಿ ಲಕ್ಷ್ಮವ್ವ ಗೊಂಡಿ, ಕಾಲೇಜಿನ…

Read More

ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಯೋಜನೆಯನ್ನು ಹೇರುವ ಸರ್ಕಾರದ ನಡೆಗೆ ಎಐಡಿಎಸ್‌ಒ ತೀವ್ರ ಖಂಡನೆ

ಸಪ್ತಸಾಗರ ವಾರ್ತೆ ವಿಜಯಪುರ, ನ.14:ರಾಷ್ಟ್ರೀಯ ಶಿಕ್ಷಣ ದಿನದ ಸಂದರ್ಭದಲ್ಲಿ, ಕರ್ನಾಟಕದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ರಾಜ್ಯದಲ್ಲಿ 6000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ತೀವ್ರವಾಗಿ ಖಂಡಿಸಿದ್ದಾರೆ.ಈ ಹೊಸ ಯೋಜನೆಯು ಮತ್ತೊಂದು ವಂಚನೆಯ ಪ್ರಯತ್ನವಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಮುಚ್ಚಲು ಇದನ್ನು ರೂಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸರ್ಕಾರವು ಈ ಹಿಂದೆ, ಸಾರ್ವಜನಿಕ ಒತ್ತಡ ಹಾಗೂ ಶಿಕ್ಷಕರ, ವಿದ್ಯಾರ್ಥಿಗಳ,…

Read More

ಸರ್ಕಾರಿ ವೈದ್ಯಕಿಯ ಕಾಲೇಜ್ ಸ್ಥಾಪನೆ ಹೋರಾಟಕ್ಕೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ವಿದ್ಯಾರ್ಥಿಗಳ ಬೆಂಬಲ

ಸಪ್ತಸಾಗರ ವಾರ್ತೆ, ವಿಜಯಪುರ, ನ. 14:ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆಬೆಂಗಳೂರಿನ‌ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲಿಸಿದರು.ಶುಕ್ರವಾರ ವಿದ್ಯಾರ್ಥಿನಿಯರಾದ ದನಿಯಾ, ಮೀನು, ಶೆರ್ವಿನ್‌, ಅಪ್ಶಾ, ರಾಜೇಶ್ವರಿ, ಯತೀಶ್, ರತ್ನಪ್ರಿಯ, ಆಲನ್ , ಆಕಾಂಕ್ಷಾ, ಕಿಶೋರ್, ಶರೀನಾ, ಆದಿ, ಅಂಜಲಿ, ನೀಲಕಂಠ, ಶಿವಾನಿ, ಕ್ಯಾಲ್ವಿನ್ , ಮಣಿ, ಮಾತನಾಡಿ, ನಾವು ಹಿಂದುಳಿದ ಜಿಲ್ಲೆಗಳ ಆರ್ಥಿಕ‌, ಸಾಮಾಜಿಕ, ಸಂಸ್ಕೃತಿಕ ಅಧ್ಯಯನಕ್ಕೋಸ್ಕರ ನಾಲ್ಕುದಿನ ವಿಜಯಪುರಕ್ಕೆ‌ ಬಂದಿದ್ದೇವೆ. ಇದೇ ಸಂದರ್ಭದಲ್ಲಿ ಸರಕಾರಿ…

Read More

ಸುಂದರ ಆಲೋಚನೆಗಳಿಂದ ಸುಭದ್ರ ವ್ಯಕ್ತಿತ್ವ: ಕುಮಾರಿ ಮಧುಮತಿ ಅಳ್ಳಗಿ

ಸಪ್ತಸಾಗರ ವಾರ್ತೆ ವಿಜಯಪುರ, ನ. 14: ಇಲ್ಲಿನ ಆದರ್ಶ ನಗರದ ಎಕ್ಸಲಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜವಾಹರಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಹಿಂದಿನ ವಿದ್ಯಾರ್ಥಿನಿ ಕುಮಾರಿ ಮಧುಮತಿ. ಆರ್. ಅಳ್ಳಗಿ, ಮಾತನಾಡಿ, ಬಡತನವು ಓದಿಗೆ ಎಂದೂ ಅಡ್ಡಿಯಾಗಲಾರದು. ವಿದ್ಯಾರ್ಥಿಗಳು ಕಲಿಕೆಯ ದಿನಗಳಲ್ಲಿ ಅತಿರಂಜಿತ ನಾಗರಿಕ ಸೌಲಭ್ಯಗಳಿಗೆ ಮನಸ್ಸು ಸೋಲದೆ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು. ಸುಂದರ ಆಲೋಚನೆಗಳು ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸುಭದ್ರಗೊಳಿಸುತ್ತವೆ….

Read More

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ: ಕೊಳಮಲಿ

ಸಪ್ತಸಾಗರ ವಾರ್ತೆ ವಿಜಯಪುರ, ನ. 14: ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳೇ ಈ ಜಗತ್ತಿನ ಅಮೂಲ್ಯ ಸಂಪತ್ತು ಎಂದು ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಹೇಳಿದರು.ಶುಕ್ರವಾರ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಮಕ್ಕಳ ಪಾಲನೆ ಪೋಷಣೆಯಲ್ಲಿ ಶಿಕ್ಷಕ, ತಂದೆ, ತಾಯಿಯ ಕರ್ತವ್ಯ ಬಹಳ ಮುಖ್ಯವಾಗಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟಾಗ…

Read More

ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರ ಮಹತ್ವದ್ದಾಗಿದೆ-ಜಿಪಂ ಸಿಇಒ ರಿಷಿ ಆನಂದ

ಸಪ್ತಸಾಗರ ವಾರ್ತೆ ವಿಜಯಪುರ,ನ.14: ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಸಮುದಾಯದ‌ ಭಾಗವಹಿಸುವಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ಪಾಲಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ‌ ಅವರು ಹೆಳಿದರು.ನಗರದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 49ರ ಅಫಜಲಪುರ ಟಕ್ಕೆ ವಿಜಯಪುರ ನಗರ ವಲಯದ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಶಾಲಾ ಪೋಷಕರ-ಶಿಕ್ಷಕರ ಮಹಾ ಸಭೆಯಲ್ಲಿ ಅವರು ಪಾಲ್ಗೊಂಡು ಸರಕಾರಿ ಶಾಲೆಗಳಲ್ಲಿ…

Read More

ಮಕ್ಕಳ ಸೇವೆ ಮಾಡುವುದು ಅತ್ಯಂತ ಪುಣ್ಯದ ಕೆಲಸ: ಪ್ರೊ. ಕೊಳಮಲಿ

ಸಪ್ತಸಾಗರ ವಾರ್ತೆ ವಿಜಯಪುರ, ನ. 14:ಹೂವಿನ ಹಾಗೆ ಅರಳುವ ಮುದ್ದು ಸ್ವಭಾವದ ನಿಷ್ಕಲ್ಮಶ ಮನಸ್ಸುಳ್ಳ ಮಕ್ಕಳೇ ದೇವರು, ಮಕ್ಕಳ ಸೇವೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕಾರ್ಯ ಎಂದು ಚೇತನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಹೇಳಿದರು.ಶುಕ್ರವಾರ ಚೇತನಾ ಶಿಕ್ಷಣ ಸಂಸ್ಥೆ ಚೇತನಾ ಅಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿಯವರು ಮಾತನಾಡಿ, ಮಕ್ಕಳು ಒಳ್ಳೆ ರೀತಿ…

Read More

ಹೊನ್ನುಟಗಿಯಲ್ಲಿ ಮಕ್ಕಳ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 14:ಹೊನ್ನುಟಗಿಯಲ್ಲಿ ಪ್ರಾರ್ಥನಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ದಿವಾಕರ್ ಕೆ ಆರ್ ಅವರು ವಹಿಸಿದ್ದರು.ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಹೆಚ್. ಎಂ ಸಾರವಾಡ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಅವರು ಶಿಕ್ಷಣದ ಮಹತ್ವ, ಮಕ್ಕಳ ಕನಸುಗಳನ್ನು ಬೆಂಬಲಿಸುವ ಕುಟುಂಬ ಮತ್ತು ಶಾಲೆಯ ಜವಾಬ್ದಾರಿಗಳು ಮಕ್ಕಳ…

Read More

ಅಗ್ನಿ ದುರಂತ ಹಾನಿಗೆ ಪರಿಹಾರ:ದುಷ್ಕೃತ್ಯದ ಬಗ್ಗೆ ತನಿಖೆಗೆ ಆದೇಶ- ಸಚಿವ ಶಿವಾನಂದ ಪಾಟೀಲ ಹೇಳಿಕೆ

ಸಪ್ತಸಾಗರ ವಾರ್ತೆ, ಬಾಗಲಕೋಟೆ, ನ. 14: ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್‌ ಲಿಮಿಟೆಡ್‌ ಬಳಿ ಗುರುವಾರ ಸಂಭವಿಸಿದ ಅಹಿತಕರ ಘಟನೆಯಲ್ಲಿ ಸಂಭವಿಸಿದ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು ಹಾಗೂ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಕಟಿಸಿದರು.ದುರಂತದ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.‌ಬಿ. ತಿಮ್ಮಾಪುರ ಅವರೊಂದಿಗೆ ಭೇಟಿ ನೀಡಿ ದುರಂತದಲ್ಲಿ ಹಾನಿಗೀಡಾದ ಕಬ್ಬು, ಟ್ರ್ಯಾಕ್ಟರ್‌ಗಳು, ಬೈಕ್‌ಗಳನ್ನು ವೀಕ್ಷಣೆ ಮಾಡಿ ರೈತರ…

Read More

16ರಂದು ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 13: ನಗರದಲ್ಲಿ ಡಿಸೆಂಬರ್ 7 ರಂದು ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು ಮತ್ತು ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ.ನವೆಂಬರ್ 16 ರಂದು ರವಿವಾರ ಬೆ.10ಗಂ. ನಗರದ ಗಗನ ಮಹಲ ಉದ್ಯಾನದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಾಥಮಿಕ ವಿಭಾಗ, ಹೈಸ್ಕೂಲು ವಿಭಾಗ ಹಾಗೂ ಪಿಯು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ.ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಇದಾಗಿದೆ. 21 ಕಿ. ಮೀ….

Read More