ನಾಳೆಯಿಂದ ವಿಜಯಪುರ-‌ಚಿಕ್ಕಲಕಿ ಕ್ರಾಸ್ ಮಾರ್ಗದಲ್ಲಿ ಎರಡು ಬಸ್ ಕಾರ್ಯಾರಂಭ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 15: ನಾಳೆ ಮಂಗಳವಾರದಿಂದ ವಿಜಯಪುರ ನಗರದಿಂದ-‌ಚಿಕ್ಕಲಕಿ ಕ್ರಾಸ್ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಿದೆ.ವಿದ್ಯಾರ್ಥಿಗಳು, ರೈತರು‌ ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು‌ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.ಪ್ರತಿ‌ದಿನ‌ ಎರಡು ಬಸ್ಸುಗಳು ವಿಜಯಪುರದಿಂದ ಖತಿಜಾಪುರ,…

Read More

ನನ್ನ ಮತ ನನ್ನ ಹಕ್ಕು ಜಾಗೃತಿ ಅಭಿಯಾನಕ್ಕೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.೧೪: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನನ್ನ ಮತ ನನ್ನ ಹಕ್ಕು ಜಾಗೃತಿ ಅಭಿಯಾನಕ್ಕೆ ಭಾನುವಾರ ನಗರದ ಗೋಳಗುಮ್ಮಟ ಆವರಣದಲ್ಲಿ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ.ಅನಂದ ಚಾಲನೆ ನೀಡಿದರು.ರಾಜ್ಯದ ರಾಜಧಾನಿಯಲ್ಲಿ ಸೆ.೧೫ರಂದು ಬೃಹತ್ ಕಾರ್ಯಕ್ರಮ ಆಯೊಜಿಸಲಾಗಿದ್ದು, ಪ್ರಜಾಪ್ರಭುತ್ವದ ಕುರಿತು ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಬೈಕ್ ಮೂಲಕ ಪಾಲ್ಗೊಳ್ಳಲಿದ್ದಾರೆ. ನಮ್ಮ ಜಿಲ್ಲೆಯಿಂದಲೂ ಬೈಕ್ ರ‍್ಯಾಲಿ ಮೂಲಕ ಯುವಕರು ಪ್ರತಿನಿಧಿಸುತ್ತಿದ್ದಾರೆ. ಭವ್ಯವಾದ ಪ್ರಜಾಪ್ರಭುತ್ವ ಪಡೆದ ನಾವುಗಳು ಅದರ ಪಾಲನೆಯನ್ನು ಮಾಡುವುದು ಬಹಳ ಅವಶ್ಯ ಇದೆ ಎಂದು…

Read More

ವೀರ ಪರಿವಾರ್ ಸಹಾಯವಾಣಿ ಕೇಂದ್ರ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.14: ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ವೀರ ಪರಿವಾರ್ ಸಹಾಯವಾಣಿ ಯೋಜನೆ ಜಾರಿಗೆ ಬಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಹರೀಶ.ಎ ಹೇಳಿದರು.ಭಾನುವಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ…

Read More

ಅಕ್ರಮ ಪಡಿತರ ಅಕ್ಕಿ ವಶ: ಪೊಲೀಸರ ದಾಳಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 14:ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಯನ್ನು ಪೊಲೀಸರು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿಯನ್ನು ಆಧರಿಸಿ ನಗರದ ವಿಜಯಾ ಟಾಯರ್ಸ್ ಮುಖ್ಯ ರಸ್ತೆಯಲ್ಲಿ ಪೊಲೀಸರು ಆಹಾರ ಇಲಾಖೆ ಜೊತೆಗೆ ಹಠಾತ್ ದಾಳಿ ನಡೆಸಿ 4,76,310 ಮೌಲ್ಯದ 210.43 ಕ್ವಿಂಟಲ್ ಅಕ್ಕಿ ಹಾಗೂ 5 ಲಕ್ಷ ಮೌಲ್ಯದ ಅಶೋಕ ಲೇಲ್ಯಾಂಡ್ ಲಾರಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ಅಥಣಿ ತಾಲೂಕಿನ ಆಜೂರ ಗ್ರಾಮದ ಗಜಾನನ ಮಕಾಳೆ, ಅಥಣಿ ತಾಲೂಕಿನ ಗಣೇಶವಾಡಿ ನಿವಾಸಿ ಮಾರುತಿ ದೊಡಮನಿ, ಬೆಳಗಾವಿ ಆಝಾದ…

Read More

ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಗೆ ನಿವ್ವಳ ಲಾಭ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 14 : ವಿಜಯಪುರದ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೩೦,೭೫,೧೮೯ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇರಿಸಿದೆ ಎಂದು ಶ್ರೀ ಮಹಾಲಕ್ಷ್ಮೀಸಹಕಾರಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಪ್ರಕಟಿಸಿದರು.ವಿಜಯಪುರದ ಶ್ರೀ ಸಂಗನ ಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಶ್ರೀ ಮಹಾಲಕ್ಷೀ ಸಹಕಾರಿ ಬ್ಯಾಂಕ್ ೯೫ ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಪ್ರಗತಿಯನ್ನು ವಿಶ್ಲೇಷಿಸಿದ ಅವರು, ಬ್ಯಾಂಕ್ ದಿನದಿಂದ ದಿನಕ್ಕೆ…

Read More

ಶಿಕ್ಷಕಿಯ ಮೇಲೆ ಹಲ್ಲೆ: ಕ್ರಮಕ್ಕೆ ಬಿರಾದಾರ ಆಗ್ರಹ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.14:ಕೆ ಜಿ ಫ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕ್ಷೇತ್ರನ ಹಳ್ಳಿಯ ಎಚ್. ಪಿ .ಎಸ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಯ ತಂದೆಯೊಬ್ಬ ಶಿಕ್ಷಕಿಯೊಬ್ಬಳ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ.ಎಸ್. ಮಂಜುಳ ಎಂಬ ಶಿಕ್ಷಕಿಯ ಮೇಲೆ ಕಾರಣವಿಲ್ಲದೆ ವಿದ್ಯಾರ್ಥಿಯ ತಂದೆ ಹಲ್ಲೆ ಮಾಡಿದ ಕೃತ್ಯ ಅಮಾನವೀಯ ಪೈಶಾಚಿಕ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲತಾ ಬಿರಾದಾರ…

Read More

ಕುಂಚದಲ್ಲಿ ಪ್ರಾಚೀನ ಸ್ಮಾರಕಗಳ ಸೆರೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.14: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಹಳೆಯ ತಹಶೀಲದಾರ ಕಚೇರಿ ರಸ್ತೆಯಲ್ಲಿರುವ ಎತ್ತರವಾದ ಐತಿಹಾಸಿಕ ಸ್ಮಾರಕ ಸಾಥಮಂಜಿಲ್ ಹಾಗೂ ಜಲಮಂಜಿಲ್ ಬಳಿ ಶನಿವಾರ ಸಂಜೆ ಮಹಾರಾಷ್ಟ್ರದ ಕೊಲ್ಹಾಪುರದ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಗುಂಪು ಗುಂಪಾಗಿ ಕುಳಿತು ಸ್ಮಾರಕಗಳ ಚಿತ್ರಬಿಡಿಸುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.ಕೊಲ್ಹಾಪುರದ ಸುಮಾರು 30 ಜನ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳನ್ನೊಳಗೊಂಡ ತಂಡವು ಪ್ರಾಚೀನ ಸ್ಮಾರಕಗಳ ಚಿತ್ರ ಬಿಡಿಸುವ ಮೂರು ದಿನಗಳ ಶಿಬಿರವನ್ನು ನಗರದಲ್ಲಿ ಹಮ್ಮಿಕೊಂಡಿದೆ.ಶುಕ್ರವಾರ ಇಬ್ರಾಹಿಂ ರೋಜಾ,…

Read More

ಸೆ.15 ರಂದುವಿದ್ಯುತ್ಪೂರೈಕೆಯಲ್ಲಿವ್ಯತ್ಯಯ

ಸಪ್ತಸಾಗರ ವಾರ್ತೆ ವಿಜಯಪುರ,ಸೆ.13 :ನವರಸಪುರ ಶಾಖಾ ವ್ಯಾಪ್ತಿಯಲ್ಲಿ ಹೆಚ್.ಟಿ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಸೇನಾ ನಗರ ಫೀಡರ್‌ನ ಮೇಲೆ ಬರುವ ಟ್ರೇಝರಿ ಕಾಲೋನಿ, ರಾಮದೇವ ನಗರ,ಅಯ್ಯಪ್ಪ ಸ್ವಾಮಿ ದೇವಸ್ಥಾನ,ಇಟಗಿ ಕಾಲೋನಿ, ವೇದಾಂತ ಹಾಸ್ಪಿಟಲ್, ನಿಂಬರಗಿ ಬಡಾವಣೆ, ಕುಲಕರ್ಣಿ ಲೇಔಟ್, ಖುರೇಷಿ ಕಾಲೋನಿ ಹತ್ತಿರದ ಪ್ರದೇಶಗಳಲ್ಲಿ ಸೆ.15ರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಮತ ಮೋಸದ ಬಗ್ಗೆ ಜಾಗೃತಿ ಮೂಡಿಸಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 13:ವಿಜಯಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಡೆಯಿತು.ಕೆ.ಪಿ.ಸಿ.ಸಿ. ಸೇವಾದಳದ ರಾಜ್ಯ ಅಧ್ಯಕ್ಷ ಎಂ. ರಾಮಚಂದ್ರಪ್ಪನವರು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ವಿಜಯಪುರ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೇಂದ್ರ ಸರಕಾರದ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನಿರ್ದೆಶನದ ಮೇರೆಗೆ ಮತಪಟ್ಟಿಗಳಲ್ಲಿರುವ ದೋಷ ಹಾಗೂ ಮತ ಮೋಸದ ಕುರಿತು ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು…

Read More

ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಹಿಂದಿ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 13: ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಹಿಂದಿ ದಿನವನ್ನು ಆಚರಿಸಲಾಯಿತು.ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಮತ್ತು ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಅವರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶ್ರೀ ಸಿದ್ದೇಶ್ವರ ಸಂಸ್ಥೆಯ ಹಾಗೂ ಶಾಲೆಯ ಆಡಳಿತಾಧಿಕಾರಿಗಳು ಹಾಗೂ ಸಿಎಒ ಎಚ್. ವೆಂಕಟೇಶ ಮತ್ತು ಶಾಲೆಯ ಪ್ರಾಚಾರ್ಯೆ ವಿಜಯಲಕ್ಷ್ಮೀ ಪಟ್ಟೇದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಇದೇ…

Read More