ಬಿಎಲ್ ಡಿಇ ಆಸ್ಪತ್ರೆಗೆ ದೇಹದಾನ
ಸಪ್ತಸಾಗರ ವಾರ್ತೆ,ವಿಜಯಪುರ, ಏ. 26: ಜಿಲ್ಲೆಯಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು, ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ಮಹಾದೇವಪ್ಪ ಗುರುಬಸಪ್ಪ ಮುಳವಾಡ(82) ಅವರ ಮೃತದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.82 ವರ್ಷದ ಮಹಾದೇವಪ್ಪ ಗುರುಬಸಪ್ಪ ಮುಳವಾಡ ಅವರು ಏಪ್ರಿಲ್ 24 ರಂದು ಶುಕ್ರವಾರ ನಿಧನರಾಗಿದ್ದು. ಮೃತರ ಇಚ್ಛೆಯಂತೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕುಟುಂಬಸ್ಥರಿಗೆ ಕೃತಜ್ಞತೆ…


