ಶಂಕರಾಚಾರ್ಯರು ಜ್ಞಾನ, ಕರ್ಮ, ಭಕ್ತಿಯ ಸಂಗಮ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:ಶಂಕರರ ಜೀವನ-ಸಾಧನೆ ನಿಜಕ್ಕೂ ಅದ್ವಿತೀಯ. ಅವರು ಜ್ಞಾನ, ಕರ್ಮ, ಭಕ್ತಿಯ ಸುಂದರ ಸಂಗಮ. 21 ನೇ ಶತಮಾನದ ಅಶಾಂತ ಜಗತ್ತಿಗೆ, ಅವರ ಶಾಂತಿಯುತ ಮತ್ತು ಸಮಗ್ರ ಜೀವನ ವಿಧಾನವೇ ನಿಜವಾದ ದಾರಿದೀಪ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಮಂಗಳವಾರ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಂಕರಾಚಾರ್ಯರ ಜಯಂತಿ ಆಚರಣೆ ಉದ್ಧೇಶಿಸಿ ಅವರು ಮಾತನಾಡಿದರು.ಭೌತಿಕ ವಸ್ತುಗಿಂತ ಆಧ್ಯಾತ್ಮಿಕ ಸಾಧನೆಗೆ ಆದ್ಯತೆ ನೀಡಬೇಕು. ಭಿನ್ನಾಭಿಪ್ರಾಯ ಮರೆತು, ಸಾಮರಸ್ಯದಿಂದ ಬದುಕುವ ಮಾರ್ಗವನ್ನು…

Read More

ದಲಿತ ಸಾಹಿತ್ಯ ಪರಿಷತ್ತು ಬೆಳಗಾವಿ ವಿಭಾಗದ ಸಂಯೋಜಕರಾಗಿ ಮೋಹನ ಕಟ್ಟಿಮನಿ ನೇಮಕ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:ನಗರದ ಮೋಹನ ಕಟ್ಟಿಮನಿ ಅವರನ್ನು ರಾಜ್ಯ ದ.ಸಾ.ಪ ಬೆಳಗಾವಿ ವಿಭಾಗೀಯಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.ಮೋಹನ ಕಟ್ಟಿಮನಿ ಅವರು ವಿಜಯಪುರದ ದಲಿತ ಸಾಹಿತ್ಯ, ಶರಣ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಉತ್ತಮ ಸಂಘಟಕರಾಗಿ, ಭಾವ ಲಹರಿ, ಜೀವಂತ ಶವಗಳು ನಕ್ಕಾಗ, ಬರದ ನಾಡಿನಲ್ಲಿ ಬಂಗಾರ ಬೆಳೆದವರು, ಚಾಣಕ್ಯ ಬಿರಾದಾರ ಬದುಕಿನ ಚಿತ್ರಣ, ವಿಸ್ಮಯದ ಬೆನ್ನೆರಿ, ವಚನ ಫಕೀರ ಮತ್ತು ಹರ್ಡೇಕರ ಮಂಜಪ್ಪ ನಾಟಕ, ಪದ್ಮಭೂಷಣ ಜನರಲ್ ಜಿ. ಜಿ. ಬೇವೂರ…

Read More

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರಗೆ ಕನಾ೯ಟಕ ಕಾಯಕಯೋಗಿ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21:ಇತ್ತೀಚೆಗೆ ಗ್ಯಾರಂಟಿ ಸುದ್ದಿ ವಾಹಿನಿಯಿಂದ ಹುಬ್ಬಳ್ಳಿ ಕ್ಯೂಬೆಕ್ಸ ಹೋಟೇಲ್ ದಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಇವರಿಗೆ 2026 ರ ಕನಾ೯ಟಕ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕಾಯ೯ಕ್ರಮದ ಸಾನ್ನಿಧ್ಯ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಾವೈಕ್ಯತಾ ಸಂಸ್ಥಾನಮಠ ಶಿರಹಟ್ಟಿ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು.ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಡಾ. ಚಿಗುರುಪಾಟಿ ಪ್ರಸಾದ, ವಿ.ಆರ್.ಎಲ್ ಗ್ರುಪ್ ನಿದೇ೯ಶಕ…

Read More

ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಲ್ಲ:ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ. ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಲ್ಲ, ಅದು ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ ಮತ್ತು ಸಮಾಜ ಸೇವೆಗೆ ದಾರಿ ದೀಪವಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿಯವರ ಆದರ್ಶಗಳನ್ನು ಸ್ಮರಿಸಿ, ಇಂದಿನ ಯುವತಿಯರು ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸಿಗೆ ಮನವಿ ಸಲ್ಲಿಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21:ಹಣಕಾಸು ಮಸೂದೆ (ಮೌಲ್ಯಮಾಪನ ಕಾಯ್ದೆ) 2025 ಅನ್ನು ರದ್ದುಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಎಲ್ಲಾ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕು. 8ನೇ ಕೇಂದ್ರ ವೇತನ ಆಯೋಗದ ಪ್ರಯೋಜನಗಳನ್ನು ಡಿಸೆಂಬರ್ 31, 2025 ಕ್ಕಿಂತ ಮೊದಲು ನಿವೃತ್ತರಾದ ಎಲ್ಲರಿಗೂ ವಿಸ್ತರಿಸಬೇಕು ಇವೇ ಮುಂತಾದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ನಿವೃತ್ತ ನೌಕರರ ಒಕ್ಕೂಟದ ಕರೆಯ ಮೇರೆಗೆ ವಿಜಯಪುರ ಜಿಲ್ಲಾ ನಿವೃತ್ತ ನೌಕರರ ಒಕ್ಕೂಟದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳ…

Read More

ಮಹಿಳಾ ವಿವಿ ಘಟಿಕೋತ್ಸವ: ಗೌರವ ಡಾಕ್ಟರೇಟ್ ಪ್ರದಾನ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21:ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಹಾಗೂ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.ಚಿತ್ರದಲ್ಲಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಮತ್ತಿತರರು ಇದ್ದಾರೆ.

Read More

“ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮ ಜಾರಿ-ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21: ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ “ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಅವರು ಘೋಷಿಸಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಪ್ರಗತಿ ವರದಿ ಮಂಡಿಸಿದ ಅವರು, ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ…

Read More

ಸಿದ್ಧಸಿರಿ ನೂತನ ಪದಾಧಿಕಾರಿಗಳ ಪದಗ್ರಹಣ: ರಾಮನಗೌಡ ಪಾಟೀಲ ಯತ್ನಾಳ ಅಧ್ಯಕ್ಷ, ಪ್ರಭುಗೌಡ ದೇಸಾಯಿ ಉಪಾಧ್ಯಕ್ಷ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 20:ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿ.ಲಿ ವಿಜಯಪುರ ದ ನೂತನ ಅಧ್ಯಕ್ಷರಾಗಿ ರಾಮನಗೌಡ ಬ.ಪಾಟೀಲ ಯತ್ನಾಳ ಹಾಗೂ ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.5 ವರ್ಷಗಳ ಅವಧಿಗಾಗಿ ಈಚೆಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರ ಶಾಸಕರು ಹಾಗೂ ನಿರ್ದೇಶಕ ಬಸನಗೌಡ ಪಾಟೀಲ ಯತ್ನಾಳ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಬಸಯ್ಯ ಹಿರೇಮಠ, ಸಾಯಿಬಾಬಾ ಸಿಂದಗೇರಿ, ಜಗದೀಶ…

Read More

ಆಲಮಟ್ಟಿಉದ್ಯಾನವನಕ್ಕೆನೂತನಬಸ್: ಸಂಚಾರಕ್ಕೆಜಿಲ್ಲಾಉಸ್ತುವಾರಿಸಚಿವರಿಂದಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ ಏ. 20 : ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊಂಡ ನೂತನ ಸಾರಿಗೆ ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.‌ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಇವರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ‌ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ.ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ…

Read More

ಬಸವಜ್ಯೋತಿ ಪಾದಯಾತ್ರೆಗೆ ಭವ್ಯ ಸ್ವಾಗತ

ಸಪ್ತಸಾಗರ ವಾರ್ತೆ ವಿಜಯಪುರ, ಏ. 20:ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಬಸವಜ್ಯೋತಿ ಪಾದಯಾತ್ರೆಯನ್ನು ನಗರದ ಬಸವ ಸಮಿತಿ ಹಾಗೂ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮತ್ತು ಗಣ್ಯರು ಸ್ವಾಗತಿಸಿದರು.ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಜಿಲ್ಲೆಯ ಹಂದಿಗನೂರ ಗ್ರಾಮದ ಬಿ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಹಾಗೂ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಹಯೋಗದಲ್ಲಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿ ಬಸವನ ಬಾಗೇವಾಡಿಯಿಂದ ಆರಂಭಗೊಂಡ ಈ ಪಾದಯಾತ್ರೆಯು…

Read More