ಫೆ.21ರಂದು 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್:ಡಿಸಿ ಆನಂದ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.20:ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಫೆ.21ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 15 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ತಿಳಿಸಿದ್ದಾರೆ.ವಿಜಯಪುರ ಉಪ ವಿಭಾಗಾಧಿಕಾರಿಗಳು ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ರಾಚೋಟೇಶ್ವರ ದೇವಸ್ಥಾನದಲ್ಲಿ,ಇಂಡಿ ಉಪವಿಭಾಗಾಧಿಕಾರಿಗಳು ಚಡಚಣ ತಾಲೂಕಿನ ಜಿಗಜೀವಣಗಿ ಗ್ರಾಮದ ಶ್ರೀ ಕವಡೇಶ್ವರ ಮಠದ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-2 ತಹಶೀಲ್ದಾರ ಅವರು ಹೊನ್ನಳ್ಳಿ ಗ್ರಾಮದ ಶ್ರೀ…

Read More

ಸಿನೀಯರ್ ರಿಸರ್ಚ್ ಫೆಲೋ ಹುದ್ದೆಯ ನೇಮಕಾತಿಗೆ ಸಂದರ್ಶನ

ಸಪ್ತಸಾಗರ ವಾರ್ತೆ, ವಿಜಯಪುರ ಫೆ.20:ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಿನೀಯರ್ ರಿಸರ್ಚ್ ಫೆಲೋ ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಕಾತಿಗೆ ಫೆ. 26ರಂದು ಬೆಳಿಗ್ಗೆ 10:30ಗಂಟೆಗೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಲ್ಲು, ಚಪ್ಪಲಿ ಎಸೆದವರನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಜೈಲಿಗಟ್ಟಿ; ಶಾಸಕ ಯತ್ನಾಳ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20:ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಮುಸಲ್ಮಾನರು ಕಲ್ಲು, ಚಪ್ಪಲಿ ತೂರಿ ಅಶಾಂತಿ ಸೃಷ್ಟಿಸಿರುವುದು ಖಂಡನೀಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.ಮೊಘಲರ ಹುಟ್ಟಡಗಿಸಿದ ವೀರ ಪರಾಕ್ರಮಿ, ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನೇ ಗುರಿಯಾಗಿಸಿಕೊಂಡು ಮಸೀದಿಗಳಿಂದ ಕಲ್ಲು, ಚಪ್ಪಲಿಗಳನ್ನು ಎಸೆದವರ ಮೇಲೆ ಪೊಲೀಸರು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಜೈಲಿಗಟ್ಟಬೇಕು.ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಸೇರಿದಂತೆ ಈ ಪ್ರಚೋದಿತ ಗಲಭೆಯಲ್ಲಿ ಗಾಯಗೊಂಡವರಿಗೆ ಮಸೀದಿಯ ಆಡಳಿತ ಮಂಡಳಿಯೇ ಜವಾಬ್ದಾರಿ…

Read More

ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭ ಗಳಿಸಿ: ಡಾ. ಬೆಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20 :ರೈತರು ಸುಸ್ಥಿರ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವ ಜೊತೆಗೆ, ಆರೋಗ್ಯವಂತರಾಗಿ ಇರಬೇಕೆಂದು ನಿವೃತ್ತ ಸಹ ವಿಸ್ತರಣೆ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ 2025- 26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿಯಲ್ಲಿ, ಗುಚ್ಛ ಗ್ರಾಮ ಪಂಚಾಯತಿಗಳಲ್ಲಿ ದೃಷ್ಟಿಕೋನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಸಾಯನಿಕ ಬಳಕೆಯ ದುಷ್ಪರಿಣಾಮವನ್ನು ನಾವಿಂದು ಎಲ್ಲೆಡೆ ಕಾಣುತ್ತಿದ್ದೇವೆ. ರೈತರು ಅಧಿಕ…

Read More

ಡಾ. ಅರುಣ ಇನಾಮದಾರ ಬಿ.ಎಲ್. ಡಿ. ಇ ಡೀಮ್ಡ್ ವಿವಿ ನೂತನ ಕುಲಪತಿ

ಸಪ್ತಸಾಗರ ವಾರ್ತೆ ವಿಜಯಪುರ, ಫೆ. 19: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಖ್ಯಾತ ತಜ್ಞ ಡಾ. ಅರುಣ ಚಂ. ಇನಾಮದಾರ ಗುರುವಾರ ಅಧಿಕಾರ ಸ್ವೀಕರಿಸಿದರು.ಈವರೆಗೆ ಹಂಗಾಮಿ ಕುಲಪತಿಯಾಗಿದ್ದ ಅವರು, ಈಗ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಹಾಗೂ ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ….

Read More

ಫೆ. 25ರಂದು ವಿಜಯಪುರದಲ್ಲಿ ಆಳ್ವಾಸ್ ನುಡಿಸಿರಿ ವೈಭವ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19 :ಶ್ರೀಮಂತ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವ ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯ ವೈಭವವನ್ನು ವಿಜಯಪುರ ಜಿಲ್ಲೆಯ ಜನತೆಗೂ ಉಣ ಬಡಿಸುವ ನಿಟ್ಟಿನಲ್ಲಿ ವಿಜಯಪುರದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಫೆ.25 ರಂದು ಸಂಜೆ 5-45 ಕ್ಕೆ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ವಿಜಯಪುರ ಘಟಕದ ಅಧ್ಯಕ್ಷ ಡಾ. ಕೆ.ಬಿ. ನಾಗೂರ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ ನುಡಿಸಿರಿ ವಿಶ್ವದಲ್ಲಿಯೇ ಸಾಂಸ್ಕೃತಿಕ ಸಿರಿ ವೈಭವಕ್ಕೆ ಪ್ರಸಿದ್ಧಿ ಪಡೆದಿದೆ. ಹೀಗಾಗಿ…

Read More

ಫೆ. 21ರಂದು ಪಂಚ ಗ್ಯಾರಂಟಿ ಅನುಷ್ಠಾನ ಕಾರ್ಯಾಗಾರ: ಬೋರಾಮಣಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19 :ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಜನತೆಗೆ ಆರ್ಥಿಕವಾಗಿ ಬಲ ತುಂಬುವಲ್ಲಿ ಯಶಸ್ವಿಯಾಗಿದ್ದು, ಕಳೆದ ಜನವರಿ 2026ರ ವರೆಗೆ ಈ ಯೋಜನೆಗಳಿಗಾಗಿ 4030.19 ಕೋಟಿ ರೂ. ಸರ್ಕಾರ ಖರ್ಚು ಮಾಡಿದ್ದು, ಇಷ್ಟು ಮೊತ್ತದ ಹಣ ವಿಜಯಪುರ ಜನತೆಗೆ ವಿವಿಧ ಯೋಜನೆಗಳ ಮೂಲಕ ದೊರಕಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು…

Read More

ಹಲಸಂಗಿ: ಬಂಗಾರ ಅಂಗಡಿ ದೋಚಿದ ಇಬ್ಬರು ಕಳ್ಳರ ಬಂಧನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19:ಹಲಸಂಗಿ ಗ್ರಾಮದಲ್ಲಿ ಮೋಟಾರ್ ಸೈಕಲ್ ಮೇಲೆ ಬಂದು ಗನ್ ತೋರಿಸಿ ಬಂಗಾರ ಅಂಗಡಿಯನ್ನು ದೋಚಿದ್ದ ಇಬ್ಬರು ಅಂತಾರಾಜ್ಯ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.ಬಂಧಿತ ಆರೋಪಿಗಳು ಮೂಲತ: ಸಂಖ ಗ್ರಾಮಕ್ಕೆ ಸೇರಿದರೂ ಹಾಲಿ ಜತ್ತ ನಿವಾಸಿ ಹನಮಂತ ಮಲ್ಲಪ್ಪ ವಾಘೋಲಿ (28), ಪುಣೆಯಲ್ಲಿ ನೆಲೆಸಿದ್ದ ಶಿವರಾಜ್ ಉರ್ಫ್ ಗೌಡಪ್ಪ ರಾವುಸಾಹೇಬ ನಾವಿ (28)…

Read More

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19:ಛತ್ರಪತಿ ಶಿವಾಜಿ ಮಹಾರಾಜರ ಧರ್ಮನಿಷ್ಠೆ, ನೀತಿ, ಆಡಳಿತ, ತ್ಯಾಗ, ಹಿಂದವಿ ಸ್ವರಾಜ್ಯದ ಪರಿಕಲ್ಪನೆ ಮತ್ತು ಧೈರ್ಯಕ್ಕೆ ತಾಯಿ ಜೀಜಾಬಾಯಿಯವರ ಸಂಸ್ಕಾರಗಳೇ ಕಾರಣ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರುನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಶಿವಾಜಿ ಮಹಾರಾಜರ ಆಡಳಿತವು ಪ್ರಜಾಹಿತ ಮತ್ತು ನ್ಯಾಯಬದ್ಧತೆಯ ಮೇಲೆ ನಿಂತಿದ್ದು, ಅದರ ಕೇಂದ್ರವಾಗಿ ರಾಯಗಢ…

Read More

ನಂಜನಗೂಡು ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ:ತಪಸ್ಸಿನಿಂದ ತೇಜಸ್ಸನ್ನು ಸಂಪಾದಿಸಿದವರು ಗುರುರಾಯರು-ಪಂಡಿತ ಗೋಪಿನಾಥಾಚಾರ್ಯ ಗಲಗಲಿ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 19:ಇಲ್ಲಿಯ ನಂಜನಗೂಡು ಶ್ರೀ ರಾಘ ವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ದಿನೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಡೆದವು. ನಂತರ ಮಠದ ಪ್ರಾಂಗಣದಲ್ಲಿ ರಾಯರ ಪಟ್ಟಾಭಿಷೇಕದ ಭಾವಚಿತ್ರದಿಂದೊಡಗೂಡಿ ಪುಷ್ಪಗಳಿಂದ ಅಲಂಕೃತ ಭವ್ಯ ರಥೋತ್ಸವ ನಡೆದು ಭಕ್ತ ವೃಂದದ ಭಕ್ತಿಗೀತೆಗಳ ಗಾಯನ ಶ್ರೀಮಠದ ತುಂಬೆಲ್ಲ ಮಾರ್ದನಿಸಿತು.ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಗಳಿಂದ ಭಕ್ತರು…

Read More