ಸಹಕಾರ ಸಂಘಗಳು ದೇಶ ವ್ಯಾಪಿ ಬೆಳೆಯಬೇಕು- ಅಣ್ಣಾಸಾಹೇಬ ಜೊಲ್ಲೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19:ಸಹಕಾರ ಸಂಘಗಳು ದೇಶ ವ್ಯಾಪಿ ಬೆಳೆಯಬೇಕು. ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು ಸಹಕಾರ ಕ್ಷೇತ್ರ ನೀಡಲಿ. ಕರ್ನಾಟಕದ ಗದಗ ಜಿಲ್ಲೆಯ ಕಣಗಿನಾಳದಲ್ಲಿ ಸಿದ್ದನಗೌಡ ಪಾಟೀಲರು ಪ್ರಥಮ ಸಹಕಾರಿ ಸಂಘ ಪ್ರಾರಂಭಿಸಿದರು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.ನಗರದ ಭಾವಸಾರ ಸಾಂಸ್ಕೃತಿಕ ಭವನದಲ್ಲಿ ನಡೆದ ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ ಹಾಗೂ ಶೇಅರ ಸರ್ಟಿಫಿಕೇಟ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರ ಸಂಘದಲ್ಲಿ ಸರ್ಕಾರದ ಹಸ್ತಕ್ಷೇಪ…

Read More

ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 19: ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹರಾಜರ ಜಯಂತಿಯನ್ನು ಆಚರಿಸಲಾಯಿತು.ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಮಹನೀಯರ ಭಾವಚಿತ್ರಕ್ಕೆ ಪೂಜೆ ನೇರೆವೆರಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಅವರು ಮಾತನಾಡಿ “ಶೌರ್ಯ, ಸಾಹಸ, ಆಡಳಿತ ಮತ್ತು ಆದರ್ಶದ ಪ್ರತೀಕ ಹಾಗೂ ದೇಶ ಕಂಡ ಅಪ್ರತೀಮ ಹೋರಾಟಗಾರರಲ್ಲಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ಆಡಳಿತದಲ್ಲಿ ಸಮಾಜದ ಎಲ್ಲರ ಏಳಿಗೆಗಾಗಿ ಜನಪರ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡು ಇಂದಿಗೂ ಜನರ…

Read More

ಯತ್ನಾಳ ಜತೆ ಗುರುತಿಸಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ: ಅಂಗಡಿ ಎಚ್ಚರಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18 :ಬಿಜೆಪಿಯ ಪಾಲಿಕೆ ಸದಸ್ಯರು ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಯತ್ನಾಳ ಅವರ ಜೊತೆ ಗುರುತಿಸಿಕೊಂಡರೆ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಬಿಜೆಪಿ ಚಿಹ್ನೆಯಡಿಯಲ್ಲಿ ಆಯ್ಕೆಯಾಗಿದ್ದಾರೆ, ಪಕ್ಷ ಉಚ್ಛಾಟನೆ ಮಾಡಿರುವ ಶಾಸಕ ಯತ್ನಾಳರ ಜೊತೆ ಕಾಣಿಸಿಕೊಳ್ಳುವುದು ಸರಿಯಲ್ಲ, ಇದೇ ರೀತಿ ವರ್ತನೆ ಮುಂದುವರೆದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದರು.ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಶಾಸಕ ಯತ್ನಾಳ ಟೀಕೆ ಸಲ್ಲ….

Read More

ಜಿಐಎಸ್ ಆಧಾರಿತ ಮಹಾ ಯೋಜನೆ:ಸಾರ್ವಜನಿಕ ಸಲಹೆ ಸೂಚನೆಗಳಿಗೆ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾ ಯೋಜನೆ-2041-(ಪ-3),ಸರಕಾರದ ಆದೇಶದಂತೆ ತಾತ್ಕಾಲಿಕ ಅನುಮೋದನೆಯಾಗಿದೆ.ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರಂತೆ ಸಾರ್ವಜನಿಕರಿಂದ ಸಲಹೆ-ಸೂಚನೆ ಹಾಗೂ ಆಕ್ಷೇಪಣೆಗಳ ಸಲ್ಲಿಸುವ ಹಿ‌ನ್ನೆಲೆಯಲ್ಲಿ 16-01-2026 ರಂದು ಪ್ರಾಧಿಕಾರದ ಕಚೇರಿ, ಪತ್ರಿಕೆಗಳಲ್ಲಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.ಈ ಕುರಿತಾಗಿ ನಗರದ ವೃತ್ತಿಪರ ಅಭಿಯಂತರರು, ವಾಸ್ತು ಶಿಲ್ಪಿಗಳು, ಕ್ರೇಡಾಯ್ ಹಾಗೂ ಇತರೆ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆಯು…

Read More

ಹೈಪೋಥೈರಾಯ್ಡಿಸಮ್ ಕುರಿತು ಉಚಿತ ತಪಾಸಣೆ ಮತ್ತು ಆಯುರ್ವೇದ ಹಾಗೂ ಯೋಗ ಚಿಕಿತ್ಸೆ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ‌ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ‌ ಫೆಬ್ರುವರಿ 23ರಿಂದ ಮಾರ್ಚ 7ರ ವರೆಗೆ 15 ದಿನಗಳ ಕಾಲ ಹೈಪೋಥೈರಾಯ್ಡಿಸಮ್ ಕುರಿತು ಉಚಿತ ತಪಾಸಣೆ ಮತ್ತು ಆಯುರ್ವೇದ ಹಾಗೂ ಯೋಗ ಚಿಕಿತ್ಸೆ ಶಿಬಿರ ನಡೆಯಲಿದೆ.ಹೈಪೋಥೈರಾಯ್ಡಿಸಮ್ ಎಂದು ದೃಢ ಪಟ್ಟಿರುವ ಮತ್ತು ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಚರ್ಮ ಒಣಗುವುದು, ಸದಾ ದಣಿವು, ಚಳಿ ಹೆಚ್ಚು ಅನಿಸುವುದು, ಮಲ ಬದ್ಧತೆ, ಖಿನ್ನತೆ, ಹಾಗೂ ಮಹಿಳೆಯರ ಮಾಸಿಕ…

Read More

ವಿಜಯಪುರದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ ಫೆಬ್ರವರಿ 21 ರಂದು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸ ರಿ ಗ ಮ ಪ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಸ ರಿ ಗ ಮ ಪ’ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.ಈ ಬಾರಿಯ ಸ ರಿ ಗ ಮ ಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ…

Read More

ಛಲ,ಬಲದಿಂದ ಶಿಕ್ಷಣ ಪಡೆದಾಗ ಬದುಕು ಸಾರ್ಥಕ: ಡಾ. ಮಲ್ಲಿಕಾರ್ಜುನ ಮೇತ್ರಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.18: ಜೀವನದಲ್ಲಿ ಆತ್ಮ ಬಲವನ್ನು ಹೊಂದಿ, ಛಲ ಬಲದಿಂದ ಶಿಕ್ಷಣ ಪಡೆದು ಶ್ರೇಷ್ಠತೆ ಸಾಧಿಸಿದರೆ ಬದುಕು ಸಾರ್ಥಕವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಗಣಿತಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಭಾರತಿ ಗಂಗಾಧರ ಜೋಗೂರ ಅವರು ನಿಲ್ಲುತ್ತಾರೆ. ಆದರ್ಶಮಯ ದಾಂಪತ್ಯ ಹೊಂದಿದ ಇವರು ಮೂರು ಮಕ್ಕಳನ್ನು ಪಡೆದ ನಂತರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದು ಮಹಿಳಾ ಸಂಕುಲಕ್ಕೆ ಮಾರ್ಗದರ್ಶನವಾಗಿದೆ ಎಂದು ಡಾ. ಮಲ್ಲಿಕಾರ್ಜುನ ಮೇತ್ರಿ ತಿಳಿಸಿದರು.ನಗರದ ಅಥಣಿ ರಸ್ತೆಯಸಾಯಿ ಗಾರ್ಡನ್…

Read More

ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 17:ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭರವಸೆ ನೀಡಿದರು.ವಿಜಯಪುರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೊಂಡಿದ್ದು, ಎಲ್ಲ ಭಾಗಕ್ಕೂ ನಿರಂತರ ಮತ್ತು ಸಮಪರ್ಕವಾಗಿ ನೀರು ಒದಗಿಸಲು 3ನೇ ಹಂತದ ಯೋಜನೆ ಅನುಷ್ಠಾನ ಅಗತ್ಯವಿದೆ ಎಂದರು.ಶುದ್ಧ ಗಾಳಿ, ಅಭಿವೃದ್ಧಿ, ಗಟ್ಟಿತನ ಹೀಗೆ ಎಲ್ಲದರಲ್ಲೂ ವಿಜಯಪುರ ನಗರ…

Read More

ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 17 :ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯದ್ದು. ಅಂದು 25 ಜನರಿಂದ ಪ್ರಾರಂಭವಾಗಿದ್ದ ಪಾದಯಾತ್ರೆ ಇಂದು 500 ಕ್ಕೂ ಅಧಿಕ ಭಕ್ತರು ಮಾರ್ಚ 3 ರಿಂದ ಮಾ.17 ರ ವರೆಗೆ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಲಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಮಿತಿಯ ಮುಖಂಡ ರವೀಂದ್ರ ಸಿದ್ದಯ್ಯ ಕರ್ಪೂರಮಠ, 33ನೇ ವರ್ಷದ ಪಾದಯಾತ್ರೆ…

Read More

ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17:ತಂದೆ ತಾಯಿಗಿಂತ ಮಿಗಿಲಾದ ದೇವರು ಈ ಭೂಮಿಯ ಮೇಲೆ ಇಲ್ಲ, ತಂದೆ ತಾಯಿಗಳೇ ನಿಜವಾದ ದೇವರು ಎಂದು ಶಿವಬಸವ ಶಿವಾಚಾರ್ಯ ಸ್ಚಾಮೀಜಿ ಹೇಳಿದರು.ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪಾಲಕರ ಪಾದ ಪೂಜೆ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಉಪವಾಸ ವನವಾಸ ಇದ್ದು ಮಕ್ಕಳಿಗೆ ಜೋಪಾನ ಮಾಡಿ ಬೆಳೆಸಿದ ತಂದೆ ತಾಯಿಗಳ ಋಣ ತೀರಿಸಬೇಕು. ವಿದ್ಯೆ ಕಲಿಸಿದ…

Read More