ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12:ಜಿಲ್ಲೆಯ ಅಲಮೇಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 10,69,500 ರೂ. ಮೌಲ್ಯದ ಚಿನ್ನ ಬೆಳ್ಳಿ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ.ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶರಣಬಸು ಜಾಲವಾದ, ಪ್ರಕಾಶ ಕಂಬಾರ ಬಂಧಿತ ಆರೋಪಿಗಳು.ಬಂಧಿತ ಆರೋಪಿತರಿಂದ 8,60,000 ಮೌಲ್ಯದ 86 ಗ್ರಾಂ. ಬಂಗಾರದ ಆಭರಣಗಳು,67,000 ಮೌಲ್ಯದ 67 ಗ್ರಾಂ ಬೆಳ್ಳಿ ಆಭರಣ ಹಾಗೂ ರೂ. 1,25,000 ಮೌಲ್ಯದ 5…

Read More

ಸೆ. 14 ರಂದು ಮಹಾಲಕ್ಷ್ಮಿ ಬ್ಯಾಂಕ್ ವಾರ್ಷಿಕ ಸರ್ವ ಸಾಧಾರಣ ಸಭೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12: ನಗರದ ಮಹಾವೀರ ಕಾಲೋನಿಯಲ್ಲಿರುವ ಶ್ರೀ ಸಂಗನಬಸವ ಸಮುದಾಯ ಭವನದಲ್ಲಿ ಸೆ. ೧೪ ರಂದು ಬೆಳಿಗ್ಗೆ ೧೧ ಕ್ಕೆ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಯಮಿತ ೯೫ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಲಾಗಿದೆ.ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಸದಸ್ಯರು ಸಭೆಗೆ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪಕ ಪದ್ಮಾವತಿ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಹೆಸ್ಕಾಂ ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡದಿರಲು ಮನವಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12 : ಹೆಸ್ಕಾಂ ಗ್ರಾಮೀಣ ಉಪ ವಿಭಾಗವನ್ನು ಶಿವಗಿರಿಗೆ ಸ್ಥಳಾಂತರ ಮಾಡುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ರೈತ ಭಾರತ ಪಕ್ಷದಿಂದ ಹೆಸ್ಕಾಂ ಅಧೀಕ್ಷಕ ಅಭಿಯಂತರ ಅವರ ಮೂಲಕ ಶುಕ್ರವಾರ ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ್ ಕಟಕದೊಂಡ ಅವರಿಗೂ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಹೊಸ ಕಟ್ಟಡವನ್ನು ಕಟ್ಟಿಸಿರುತ್ತೀರಿ ಅಂತ ಅಲ್ಲಿಗೆ ಗ್ರಾಮೀಣ ಉಪವಿಭಾಗವನ್ನು ಸ್ಥಳಾಂತರ…

Read More

ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12:ದ್ರಾಕ್ಷಿ ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ರೈತ ಸಂಘ ಶುಕ್ರವಾರ ಮನವಿ ಸಲ್ಲಿಸಿತು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ,ಇಡೀ ಕರ್ನಾಟಕದಲ್ಲಿ ಅಂದಾಜು 1 ಲಕ್ಷ ಎಕರೆ ದ್ರಾಕ್ಷಿ ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿಯೇ ಶೇ. 70ರಷ್ಟು ದ್ರಾಕ್ಷಿ ಬೆಳೆಯುತ್ತಿದ್ದು, ಇದನ್ನು ನಂಬಿ 15-20 ಸಾವಿರ ರೈತ ಕುಟುಂಬಗಳು ಹಾಗೂ ಸಾವಿರಾರು ರೈತ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಆದರೆ ದಲ್ಲಾಳಿಗಳ…

Read More

ಪ್ಲಾಸ್ಟಿಕ್ ಮಾಲಿನ್ಯವನ್ನು ಮುಕ್ತಗೊಳಿಸೋಣ: ಸಿ.ಎಂ. ಮಾಲಿಪಾಟೀಲ ಅಭಿಮತ

ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 11: ನಮ್ಮ ಸುತ್ತಮುತ್ತಲಿನ ಭೂಮಿ ಹಾಗೂ ನೖಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಯಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ೨೦೨೫ರ ಪರಿಸರ ದಿನಾಚರಣೆಯ ಉದ್ದೇಶದಂತೆ ಪ್ಲಾಸ್ಟಿಕ್ ಮಾಲಿನ್ಯವನ್ನು ಮುಕ್ತಗೊಳಿಸುವುದಾಗಿದ್ದು, ಅದರಂತೆ ನಾವು ನೀವೆಲ್ಲರೂ ಮಾದರಿಯಾಗಿ ನಡೆದುಕೊಳ್ಳೋಣ ಎಂದು ಖ್ಯಾತ ಉದ್ದಿಮೆದಾರರೂ, ಸಮಾಜ ಸೇವಕರಾದ ಸಿ.ಎಂ. ಮಾಲಿಪಾಟೀಲ ಅಭಿಪ್ರಾಯಪಟ್ಟರು.ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಪರಿಸರ ಜಾಗೃತಿ ವೇದಿಕೆಯ ಸಭಾಂಗಣದಲ್ಲಿ ಪರಿಸರ ಜಾಗೃತಿ ವೇದಿಕೆಯ ೧೭ನೇ ವರ್ಷದ ವರ್ಷಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ…

Read More

ಪಿಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. ೧೧:ವಿಜಯಪುರ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸಹಕಾರಿ ಸಹಭಾಗಿತ್ವದಲ್ಲೇ ಸ್ಥಾಪಿಸಬೇಕು. ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ವಿರೋಧಿಸಿ ಗುರುವಾರ ಸಾವಿರಾರು ವಿದ್ಯಾರ್ಥಿಗಳು ಜನಾಂದೋಲನ ರ್ಯಾಲಿ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ರ್ಯಾಲಿ ನಗರದ ಶಿವಾಜಿ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟ ನಡೆಸಿ ಮನವಿ ಸಲ್ಲಿಸಲಾಯಿತು.ಈ ಹೋರಾಟವನ್ನು ಉದ್ದೇಶಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಅವರು ಮಾತನಾಡಿ, ಕಳೆದ ೨೦ ವರ್ಷಗಳಿಂದ ಡಿವಿಪಿ…

Read More

ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಹಾಸಿಂಪೀರ ವಾಲಿಕಾರ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 11 : ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಕತ೯ವ್ಯ. ಮಾನವ ಹಕ್ಕುಗಳನ್ನು ಸರ್ಕಾರ ಹಾಗೂ ಸಮುದಾಯದ ಜೊತೆಯಾಗಿ ಪಾಲನೆ ಪರಿಣಾಮಕಾರಿಯಾಗಬೇಕು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ಹಾಗೂ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಗುರುವಾರ ನಗರದ ಎಸ್.ಬಿ. ಜೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ಮಾನವ ಹಕ್ಕುಗಳ ಘಟಕದ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳ ಅರಿವು ಕುರಿತು ಚಿಂತನ…

Read More

ಮನೆ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 11:ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಪೊಲೀಸರು 65 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಝಂಡಾ ಕಟ್ಟಾ ಜೆ ಎಂ ರೋಡ ಹಳಕೇರಿ ಗಲ್ಲಿ ನಿವಾಸಿ ಸಮೀರ ಇನಾಮದಾರ, ಶಾಪೇಠಿ ಅಪ್ಸರಾ ಟಾಕೀಸ್ ಹತ್ತಿರ ಸುಹಾಗ ಕಾಲನಿ ನಿವಾಸಿ ಹಸನಡೊಂಗ್ರಿ ಮುಲ್ಲಾ, ನಿಸ್ಸಾರ ಮಡ್ಡಿ ನಿವಾಸಿಶಫೀಕ್ ಅಹ್ಮದ ಇನಾಮದಾರ ಬಂಧಿತ ಆರೋಪಿಗಳು.ಆರೋಪಿತರು ಅನುಮಾನಾಸ್ಪದವಾಗಿ ತಿರುಗಾಡುವಾಗ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ….

Read More

ಮಹಿಂದ್ರಾ ಬೋಲೆರೋ ವಾಹನ ಹಸ್ತಾಂತರ

ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 10:ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ ಮಂಜೂರಿಸಲಾದ ರೂ.11 ಲಕ್ಷ ಅನುದಾನದಲ್ಲಿ ಖರೀದಿಸಲಾದ ನೂತನ ಮಹಿಂದ್ರಾ ಬೋಲೆರೋ ವಾಹನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ವಾಹನ ಸಾರಿಗೆ ವಿಭಾಗ, ಆರಕ್ಷಕ ನಿರೀಕ್ಷಕರು, ಡಿಎಆರ್ ವಿಜಯಪುರ ಅವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿಗಳಾದ ಸುನೀಲ ಕಾಂಬ್ಳೆ, ಮುರಗೆಪ್ಪ ಉಪಾಸೆ, ಸಿಪಿಐ ಗಳಾದ ರವಿ ಯಡವಣ್ಣವರ, ರಾಯಗೊಂಡ ಜಾನವಾರ, ಪರಶುರಾಮ ಮನಗೂಳಿ, ಪಿ.ಎಸ್.ಐ ಯತಿಂದ್ರ, ಆರ್.ಪಿ.ಐ ಈರಸಂಗಪ್ಪ…

Read More

ಬೈಕ್ ಕಳ್ಳರ ಬಂಧನ: 17 ಮೋಟಾರ್ ಸೈಕಲ್ ವಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 10:ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದ 17 ಮೋಟರ್ ಸೈಕಲ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸಿಂದಗಿ ತಾಲೂಕಿನ ಗಣಿಹಾರದ ವೀರಭದ್ರ ಕುಂಬಾರ, ಶ್ರೀಶೈಲ ಬಿರಾದಾರ ಬಂಧಿತ ಆರೋಪಿಗಳು.ವಿಜಯಪುರ ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 11,00,000 ರೂ. ಮೌಲ್ಯದ 13 ಹೋಂಡಾ ಶೈನ್ ಮೋಟಾರ್ ಸೈಕಲ್‌ಗಳು ಮತ್ತು 4 ಹಿರೋ ಕಂಪನಿಯ ಮೋಟಾರ್ ಸೈಕಲ್‌ಗಳು ಸೇರಿ ಒಟ್ಟು 17 ಮೋಟಾರ್ ಸೈಕಲ್‌ಗಳನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ.ವಿಜಯಪುರ ಶಹರದಲ್ಲಿ ಇತ್ತೀಚೆಗೆ…

Read More