ವ್ಯಕ್ತಿಯ ಬರ್ಬರ ಹತ್ಯೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 10:ಓರ್ವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ನಡೆದಿದೆ.ಅಜರುದ್ದೀನ್ ಅಬ್ದುಲ್ ರಜಾಲ್ ಮಕಾನದಾರ್ (38) ಕೊಲೆಯಾದ ವ್ಯಕ್ತಿ.ಅಜರುದ್ದೀನ್ ಬೈಕ್ ಮೇಲೆ ತೆರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಅಜರುದ್ದೀನ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.ನೆರೆಯ ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರದ ನಿವಾಸಿ ಅಜರುದ್ದೀನ್ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ…

Read More

ವೃಕ್ಷೋತ್ಥಾನ ಹೆರಿಟೇಜ್ ರನ್ ಗೆ ಟಿ. ಭೂ ಬಾಲ್ ನರಿಗೆ ಆಹ್ವಾನ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.10: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ್ಯುನ್ಮಾನ ಸೇವೆ ಪೂರೈಕೆ ನಿರ್ದೇಶಕ(Electronic Delivery Of Citizen Services) ಟಿ. ಭೂಬಾಲನ್ ಅವರಿಗೆ ಆಹ್ವಾನ ನೀಡಲಾಗಿದ್ದು, ಈ ಆಮಂತ್ರಣಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.ಬುಧವಾರ ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2025ರ ರಾಯಭಾರಿ ಮತ್ತು ಭಾರತೀಯ ರೇಲ್ವೆಯ ಹಿರಿಯ ಅಧಿಕಾರಿ ಪ್ರವೀಣ ಕಾತರಕಿ ಮತ್ತು ಕೈಗಾರಿಕೆ…

Read More

ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.9:ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 17ರಂದು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಾದ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ , ಬಕೆಟ್‍ನಲ್ಲಿ ಬಾಲ್ ಎಸೆಯುವುದು.60 ರಿಂದ 70 ವಯೋಮಾನ‌ದವರು ಭಾಗವಹಿಸಬಹುದು.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ ಮೊ:…

Read More

ಡಿಸಿಎಂ ಡಿಕೆಶಿ ವಿರುದ್ಧ ವಕೀಲರ ಪ್ರತಿಭಟನೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 9:ಡಿಸಿಎಂ ಡಿ.ಕೆ. ಶಿವಕುಮಾರ ಅವರು ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬಿಜಾಪುರ ಬಾರ್ ಅಸೋಸಿಯೇಷನ್ ನೇತೃತ್ವದಲ್ಲಿ ಮಂಗಳವಾರ ನ್ಯಾಯವಾದಿಗಳು ಪ್ರತಿಭಟನೆ ನಡೆಸಿದರು.ಇತ್ತೀಚೆಗೆ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಡಿಸಿಎಂ ಶಿವಕುಮಾರ ಭೇಟಿ ನೀಡಿದ ಸಂದರ್ಭದಲ್ಲಿ ವಕೀಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ವಕೀಲರು ಕೋರ್ಟ್ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನ್ಯಾಯವಾದಿಗಳು ಡಿಸಿಎಂ ಶಿವಕುಮಾರ್ ಅವರು…

Read More

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 9 :ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜ್ ನಿರ್ಮಾಣ ಕೈ ಬಿಟ್ಟು ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ ಮಾರ್ಗವಾಗಿ ಸಾಗಿದ ರ‍್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು `ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು, ಪಿಪಿಪಿ ಮಾದರಿ ಕೈಬಿಡಿ ಎಂದು ಘೋಷಣೆ ಕೂಗಿದರು.ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್‌ವರೆಗೂ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಹೋರಾಟ ಸಮಿತಿ ಸದಸ್ಯ…

Read More

ರಿಯಾಯಿತಿ ದರದಲ್ಲಿ ಆರೋಗ್ಯ ಚಿಕಿತ್ಸೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 9: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ನಾಳೆ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 17ರ ವರೆಗೆ ಆರು ದಿನಗಳ ಕಾಲ ಪುರುಷರಲ್ಲಿ ಸಂತಾನ ಹೀನತೆ ಮತ್ತು ಪುರುಷರ ವೀರ್ಯದಲ್ಲಿನ ಸಮಸ್ಯೆಗೆ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಸಮಸ್ಯೆ ಎದುರಿಸುತ್ತಿರುವ ಪುರುಷರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8073518596 ಕ್ಕೆ ಸಂಪರ್ಕಿಸಬಹುದಾಗಿದೆ, ಎಂದು ಕಾಲೇಜಿನ ಪ್ರಾಚಾರ್ಯ…

Read More

ಶಸ್ತ್ರ ಚಿಕಿತ್ಸೆಗೆ ಆರೋಗ್ಯ ವಿಮೆ ಸೌಲಭ್ಯ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಇ.ಸಿ.ಎಚ್ಎಸ್(Ex- Servicemen Contributory Health Scheme) ಮತ್ತು ಇ.ಎಸ್.ಐ.ಸಿ(Employees State Insurance Corporation) ವಿಮೆ ಅಡಿಯಲ್ಲಿ ನಗದು ರಹಿತವಾಗಿ ನಾನಾ ಕಾಯಿಲೆಗಳಿಗೆ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ಸೌಲಭ್ಯ ಪ್ರಾರಂಭವಾಗಿದೆ.ಸೂಪರ್ ಸ್ಪೇಷಾಲಿಟಿ ಚಿಕಿತ್ಸೆಗಳಾದ ಹೃದಯ ರೋಗ, ನರರೋಗ, ಮೂತ್ರಪಿಂಡ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ, ಮೊಳಕಾಲು ಮಂಡಿ, ಸೋಂಟದ ಕೀಲು ಶಸ್ತ್ರಚಿಕಿತ್ಸೆ, ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಮೇಲಿನ ಎರಡು…

Read More

ಕೋಟ್ಪಾಕಾಯ್ದೆಪರಿಣಾಮಕಾರಿಅನುಷ್ಠಾನಕ್ಕೆಜಿಲ್ಲಾಧಿಕಾರಿಡಾ. ಆನಂದ.ಕೆಸೂಚನೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 9:ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜ್ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಕಾರ್ಯಕ್ರಮದ 2025-26ನೇ ಸಾಲಿನ ಎರಡನೇ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಕೊಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಂಬಂಧಿಸಿದ ಇಲಾಖೆಯ…

Read More

ಧರ್ಮಸ್ಥಳ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ಮಾಹಿತಿ ಕಾರ್ಯಾಗಾರ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 9: ಜಿಲ್ಲೆಯ ತಾಳಿಕೋಟೆಯ ವಿಠ್ಠಲ್ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ತಾಲ್ಲೂಕಿನ ಗಣೇಶನಗರ ವಲಯದ 10 ಒಕ್ಕೂಟದ ಪದಾಧಿಕಾರಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ ಅವರು ಕಾರ್ಯಾಗಾರ ಉದ್ಘಾಟಿಸಿದರು.ವಲಯ ಮಟ್ಟದಲ್ಲಿ 25 ರಿಂದ 30 ತಂಡಗಳನ್ನು ಒಳಗೊಂಡಂತೆ ಒಂದು ಒಕ್ಕೂಟದಂತೆ 10 ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು. 10 ಒಕ್ಕೂಟದಿಂದ 50 ಜನ ಪದಾಧಿಕಾರಿಗಳು ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.ವಿಜಯಪುರ ಜಿಲ್ಲಾ ನಿರ್ದೇಶಕ…

Read More

ತೆಲಂಗಾಣದ ಮಾಂಗಳ್ಯ ಮಾಲ್ ಗುಮ್ಮಟ ನಗರಿಯಲ್ಲೂ ಆರಂಭ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8 : ಐತಿಹಾಸಿಕ ವಿಜಯಪುರ ಮಹಾನಗರದಲ್ಲಿತೆಲಂಗಾಣದ ವಾರಂಗಲ್‌ ಮೂಲದ ಮಾಂಗಳ್ಯ ಶಾಪಿಂಗ್ ಮಾಲ್ ತನ್ನ ಶಾಖೆಯನ್ನು ಆರಂಭಿಸಿದ್ದು ಅದ್ಧೂರಿ ಚಾಲನೆ ಪಡೆದಿದೆ. ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹಾಗೂ ಕನ್ನಡ ಚಲನಚಿತ್ರದ ಪ್ರಖ್ಯಾತ ನಟಿ ಆಶಿಕಾ ರಂಗನಾಥ ಜ್ಯೊತಿ ಬೆಳಗಿಸಿ ಚಾಲನೆ ನೀಡಿದರು.ತೆಲಂಗಾಣ ರಾಜ್ಯದ ವಾರಂಗಲ್ ಮೂಲದ ಮಾಂಗಳ್ಯ ಶಾಪಿಂಗ್ ಮಾಲ್ 2012 ರಲ್ಲಿ ಆರಂಭಗೊಂಡು ವಿವಿಧ ಮಹಾನಗರದಲ್ಲಿ ತನ್ನ 24 ಶಾಖೆಗಳನ್ನು ತೆರೆದಿದೆ….

Read More