ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿದೀಪ – ವಿ.ಬಿ. ಮರ್ತೂರ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 8: ವಚನ ಸಾಹಿತ್ಯ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದೆ. ಬಸವಣ್ಣನವರ ಸಮಕಾಲೀನ ವಚನಕಾರರು ಈ ಸಮಾಜಕ್ಕೆ ಬಹುದೊಡ್ಡ ಸಂದೇಶ ನೀಡಿ ಹೋಗಿದ್ದು, ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ. ವಚನ ಸಾಹಿತ್ಯ ಸರ್ವಕಾಲಿಕ ಅನನ್ಯ. ವಚನ ಸಾಹಿತ್ಯ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಬಸವನಬಾಗೇವಾಡಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ. ಮರ್ತೂರ ಅಭಿಪ್ರಾಯಪಟ್ಟರು.ರವಿವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ.ಪೂಜ್ಯ…

Read More

ಮಹಾನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ. ಆನಂದ

ಸಪ್ತಸಾಗರ ವಾರ್ತೆ ವಿಜಯಪುರ, ಫೆ.8:ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಶನಿವಾರ ಸಂಜೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶಿಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.ವಿಜಯಪುರ ನಗರದ ನವಬಾಗ ಪ್ರದೇಶದ ಮುಖ್ಯ ರಸ್ತೆಯನ್ನು ನಿರ್ಮಿತಿ ಕೇಂದ್ರದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಿ.ಸಿ ರಸ್ತೆಯ ಕಾಮಗಾರಿ ಪರಿಶಿಲನೆ ನಡೆಸಿದರು. ಇದರೊಂದಿಗೆ ನವಬಾಗ ಪ್ರದೇಶದಲ್ಲಿ ಈ ಹಿಂದೆ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದರಿಂದ…

Read More

ಜಿ ಎಸ್ ಎಸ್ ಕನ್ನಡ ಕಾವ್ಯಲೋಕದ ಸಮನ್ವಯ ಕವಿ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 7: ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಕನ್ನಡ ಕಾವ್ಯ ಲೋಕದ ಸಮನ್ವಯ ಕವಿ. ಅವರ ಕಾವ್ಯ ರಚನೆಯಲ್ಲಿ ಶಿಸ್ತು, ಶ್ರದ್ಧೆ, ಆದರ್ಶ, ಇತರರಿಗೆ ಸ್ಫೂರ್ತಿಯ ಅಂಶಗಳನ್ನು ಕಾಣುತ್ತೇವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನವೋದಯ ಕಾವ್ಯದ ರಮ್ಯತೆ ಮತ್ತು ನವ್ಯ ಕಾವ್ಯದ ಬೌದ್ಧಿಕತೆಗಳೆರಡನ್ನೂ ಸೇರಿಸಿ, ಕಾವ್ಯದಲ್ಲಿ ಸಮನ್ವಯತೆ…

Read More

ಎ.2ರಂದು “ನಾನು ಕರುಣಾಕರ” ಚಲನಚಿತ್ರ ಬಿಡುಗಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 7: ಮಕ್ಕಳು ನೋಡಬೇಕಾದ ಹಾಗೂ ಮಗನ ಆಸೆ ಪೂರೈಸಲು ತಂದೆ ಯಾವ ರೀತಿ ಪ್ರಯತ್ನಿಸುತ್ತಾನೆ ಎಂಬ ಕಥಾ ಹಂದರವುಳ್ಳ ಸದಭಿರುಚಿಯ `ನಾನು ಕರುಣಾಕರ’ ಎಂಬ ಚಲನಚಿತ್ರ ಫೋಸ್ಟ್ ಪ್ರೊಡೆಕ್ಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಪ್ರಿಲ್ 2 ರಂದು ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ಮಾಪಕ ನಮನ್ ನಾರಾಯಣ ಸಂತೋಷ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸಿನೆಮಾಗಳು ಇತ್ತೀಚಿಗೆ ಬರುತ್ತಿಲ್ಲ ಎಂಬ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ, ಮಧ್ಯಮ…

Read More

ಬೀದಿ ನಾಯಿಗಳ ನಿಯಂತ್ರಣಕ್ಕೆ ಎಸ್. ಯು.ಸಿ.ಐ ನಿಯೋಗ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 6: ನಗರದಲ್ಲಿ ಕಣ್ಣು ನೊಣ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.ಪಾಲಿಕೆ ಅಭಿವೃದ್ಧಿ ವಿಭಾಗದ ಉಪ ಆಯುಕ್ತರು ಮನವಿ ಸ್ವೀಕರಿಸಿ, ಈಗಾಗಲೇ ಬೀದಿ ನಾಯಿಗಳಿಗೆ ಸಂತಾನೋತ್ಪತ್ತಿ ಹರಣ ಶಸ್ತ್ರ ಚಿಕಿತ್ಸೆ ಸುಮಾರು ೮೦೦೦ ನಾಯಿಗಳಿಗೆ ಏಜೆನ್ಸಿ ಮೂಲಕ ಮಾಡಿಸಲಾಗಿದೆ. ಇನ್ನುಳಿದ ನಾಯಿಗಳಿಗೆ ಈ ತಿಂಗಳ ಒಳಗಾಗಿ ಟೆಂಡರ್ ಕರೆದು ಶಸ್ತ್ರ…

Read More

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಡಾ. ಸಂಬಣ್ಣಿಗೆ ವಿಡಿಎ ಅಧ್ಯಕ್ಷ ಸ್ಥಾನಕ್ಕೆ ನೇಮಕ: ಎಂಎಲ್ ಸಿ ಸುನೀಲಗೌಡ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 6: ಕಳೆದ 27 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಮತ್ತು ಎಲ್ಲ ಹಂತದ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗಿ ಆಗಿರುವ ಡಾ. ಗಂಗಾಧರ ಸಂಬಣ್ಣಿ ಅವರ ಸೇವೆಯನ್ನು ಗುರುತಿಸಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ.ಪಾಟೀಲ ಹೇಳಿದರು.ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಡಿಎ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಾ.ಗಂಗಾಧರ ಸಂಬಣ್ಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಜಕೀಯದಲ್ಲಿ…

Read More

ವಿಡಿಎ ನೂತನ ಅಧ್ಯಕ್ಷರಾಗಿ ಡಾ. ಸಂಬಣ್ಣಿ ಅಧಿಕಾರ ಸ್ವೀಕಾರ

ಸಪ್ತಸಾಗರ ವಾರ್ತೆ ವಿಜಯಪುರ, ಫೆ. 6: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಡಾ. ಗಂಗಾಧರ ಸಂಬಣ್ಣಿ ಅವರು ಶುಕ್ರವಾರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ರಾಜು ಆಲಗೂರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರಾದ ಅಬ್ದುಲ ಹಮೀದ ಮುಶ್ರಿಫ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ ವಿಡಿಎ ನಿಕಟಪೂರ್ವ ಅಧ್ಯಕ್ಷ ಕನ್ನಾನ್ ಮುಶ್ರಿಫ್, ಪ್ರಭುಗೌಡ ಲಿಂಗದಳ್ಳಿ, ಟಪಾಲ…

Read More

ಕಾರ್ ಸರ್ವಿಸ್ ಸೆಂಟರ್ ಗೆ ಆಕಸ್ಮಿಕ ಬೆಂಕಿ: 20ಕ್ಕೂ ಹೆಚ್ಚು ಕಾರುಗಳು ಭಸ್ಮ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.5: ನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇರುವ ಹೆಚ್.ಎಂ.ಕೆ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. 35 ಲಕ್ಷಕ್ಕೂ ಹೆಚ್ಚು ಬಿಡಿ ಭಾಗಗಳು ಭಸ್ಮವಾಗಿ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಸರ್ವೀಸ್‌ಗೆ ನಿಲ್ಲಿಸಲಾಗಿದ್ದ ಸುಮಾರು 20 ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಹನಮಂತ ಕನಮಡಿ ಎಂಬುವರಿಗೆ ಸೇರಿದ ಈ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ರಿಪೇರಿ ಹಾಗೂ ಸರ್ವೀಸ್‌ಗಾಗಿ ಬಂದಿದ್ದ ವಿವಿಧ ಕಂಪನಿಗಳ ಕಾರುಗಳು…

Read More

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ: ಜಾಫರ್ ಅಂಗಡಿ ನಾಮಪತ್ರ ಸಲ್ಲಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 5: ವಕೀಲ ಜಾಫರ್ ಅಂಗಡಿ ಅವರು ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ತಮ್ಮ ನಾಮಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು.ವಕೀಲರ ಸಮುದಾಯದ ಏಕತೆ, ಕಲ್ಯಾಣ ಹಾಗೂ ವೃತ್ತಿಯ ಗೌರವವನ್ನು ಬಲಪಡಿಸುವ ತಮ್ಮ ಸಂಕಲ್ಪದ ಮಹತ್ವದ ಹೆಜ್ಜೆಯಾಗಿ ಈ ಸಲ್ಲಿಕೆ ಗಮನಾರ್ಹವಾಗಿದೆ.ಈ ಸಂದರ್ಭದಲ್ಲಿ ವಕೀಲರ ವಲಯದ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಉಪಸ್ಥಿತರಿದ್ದವರಲ್ಲಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಡಿ. ಜಿ. ಬಿರಾದಾರ, ಹಿರಿಯ ವಕೀಲರಾದ ಜಿ. ಎ. ಅತನೂರ, ಬಿ….

Read More

ಜಿಲ್ಲಾಧಿಕಾರಿ ಡಾ. ಆನಂದ ಕೊಲ್ಹಾರ ತಾಲೂಕಿನ ವಿವಿಧ ಕಚೇರಿಗಳಿಗೆ ಭೇಟಿ, ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.4: ಜಿಲ್ಲೆಯ ಕೊಲ್ಹಾರ ತಾಲೂಕಿನ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯವೈಖರಿ, ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಕೊಲ್ಹಾರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಆಧಾರ ನೋಂದಣಿ, ಕಂದಾಯ ಗ್ರಾಮ ಮಾಹಿತಿ, ಭೂಮಿ ಪ್ರಗತಿ, ಈ-ಪೌತಿ ಖಾತೆ ಪ್ರಗತಿ, ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.ಸರಕಾರದ ಮಹತ್ವದ ಭೂ-ಸುರಕ್ಷಾ ಯೋಜನೆಯಡಿ ಭೂ-ದಾಖಲೆಗಳು ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆದುಕೊಳ್ಳುವ…

Read More